ಆರೋಗ್ಯ

ಮೊಸರನ್ನು ಹೀಗೆ ಸೇವನೆ ಮಾಡೋದ್ರಿಂದ ತೂಕ ಕಡಿಮೆ ಮಾಡ್ಬಹುದು

ತೂಕ ಇಳಿಸುವುದು ಎಲ್ಲರಿಗೂ ಸವಾಲಿನ ಕೆಲಸವಾಗಿದೆ. ತೂಕ ಇಳಿಸಲು ಹಲವಾರು ಜನರು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ನಮ್ಮ ತೂಕ ಇಳಿಸುವಲ್ಲಿ ಆಹಾರ ಪ್ರಮುಖ ಪಾತ್ರವಹಿಸುತ್ತದೆ. ಸಾಮಾನ್ಯವಾಗಿ ಮೊಸರು ಸೇವನೆ ಮಾಡುವುದರಿಂದ ತೂಕ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಆದರೆ ಮೊಸರಿನಿಂದ ತೂಕ ಇಳಿಸಲು ಸಹಾಯವಾಗುತ್ತದೆ ಎನ್ನಲಾಗುತ್ತದೆ. ಎಷ್ಟು ತಿಂದರೂ ಪರವಾಗಿಲ್ಲ ಊಟ ಮುಗಿದ ಮೇಲೆ ಮೊಸರನ್ನ ತಿನ್ನದಿದ್ದರೆ ಊಟ ಮುಗಿದಿಲ್ಲ ಎಂಬ ಭಾವನೆ ಬರುತ್ತದೆ. ದಕ್ಷಿಣ ಭಾರತೀಯರಾದ ನಾವು ಮೊಸರನ್ನು ಹೆಚ್ಚು ಬಳಕೆ ಮಾಡುತ್ತೇವೆ.ದಿನನಿತ್ಯ ಮೊಸರು ತಿನ್ನುವುದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ. ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಅದಕ್ಕಾಗಿಯೇ ನಿಯಮಿತವಾಗಿ ಮೊಸರನ್ನು ಸೇವನೆ ಮಾಡಲೇಬೇಕು ಎನ್ನುತ್ತಾರೆ. ಊಟದ ನಂತರ ಮೊಸರು ತಿನ್ನುವುದರಿಂದ ಹೊಟ್ಟೆ ತುಂಬಿದ ಭಾವನೆ ಉಂಟಾಗುತ್ತದೆ. ಮೊಸರಿನಲ್ಲಿ ಪ್ರೊಟೀನ್ ಅಧಿಕವಾಗಿದೆ. ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು ಕೂಡ ಕಡಿಮೆ ಇರುತ್ತದೆ. ಅದಕ್ಕಾಗಿಯೇ ಹೊಟ್ಟೆಯಲ್ಲಿ ಜೀರ್ಣಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ತೂಕ ಇಳಿಸಲು ಇದು ತುಂಬಾ ಉಪಯುಕ್ತವಾಗಿದೆ. ಇದರಲ್ಲಿರುವ ಪ್ರೊಟೀನ್ ಸ್ನಾಯುಗಳ ಬಲವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

ತೂಕವನ್ನು ಇಳಿಸುವ ಪ್ರಮುಖ ವಿಧಾನವೆಂದರೆ ಚಯಾಪಚಯವನ್ನು ಹೆಚ್ಚಿಸುವುದು. ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಆ ಮೂಲಕ ಚಯಾಪಚಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಆಹಾರದಲ್ಲಿರುವ ಪೋಷಕಾಂಶಗಳನ್ನು ದೇಹವು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ದಿನವಿಡೀ ಶಕ್ತಿಯುತವಾಗಿರಲು ಸಹ ಸಹಕಾರಿ. ಮೊಸರಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ. ಇದು ನಿಮ್ಮ BMI ಅನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ನಿಮ್ಮ ಆಹಾರದಲ್ಲಿ ಮೊಸರು ಸೇರಿಸುವುದರಿಂದ ತೂಕವನ್ನು ಇಳಿಸಲು ಸುಲಭವಾಗುತ್ತದೆ. ಹೆಚ್ಚಿನವರಿಗೆ ಪ್ರತಿನಿತ್ಯ ಮೊಸರು ತಿನ್ನಲು ಬೇಸರವಾಗುತ್ತದೆ. ಅದರಂತೆ ಅವರು ಮೊಸರನ್ನು ಬೇರೆ ರೀತಿಯಲ್ಲಿ ತಿನ್ನಲು ಪ್ರಯತ್ನಿಸಬಹುದು. ಊಟದ ನಂತರ ಮೊಸರು ಮಾತ್ರ ತಿನ್ನುವುದು ಸಹ ಒಳ್ಳೆಯದು. ಹಣ್ಣುಗಳು ಅಥವಾ ತರಕಾರಿಗಳನ್ನು ಸೇರಿಸಿ ತಿನ್ನಿ. ಗ್ರೇವಿಗೆ ಮೊಸರು ಸೇರಿಸುವುದರಿಂದ ಆರೋಗ್ಯಕರವೂ ಆಗುತ್ತದೆ. ನೀವು ಮೊಸರಿಗೆ ಉಪ್ಪು ಮತ್ತು ಮೆಣಸು ಸೇರಿಸಿ ಮತ್ತು ಮಸಾಲೆಯುಕ್ತ ಕರಿಯನ್ನು ತಯಾರಿಸಬಹುದು. ಮಜ್ಜಿಗೆಯನ್ನು ಲಸ್ಸಿಯನ್ನು ಸಹ ಕುಡಿಯಬಹುದು.

Related Articles

Leave a Reply

Your email address will not be published. Required fields are marked *

Back to top button