ಇತ್ತೀಚಿನ ಸುದ್ದಿದೇಶ

ಮೈಸೂರಿಗೆ ಇಂದು ಸೋನಿಯಾ ಗಾಂಧಿ: ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ಮಡಿಕೇರಿಯತ್ತ ಪ್ರಯಾಣ

ಮೈಸೂರು: ಎಐಸಿಸಿ ಹಂಗಾಮಿ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಇಂದು ಮಧ್ಯಾಹ್ನ ಮೈಸೂರಿಗೆ ಆಗಮಿಸಲಿದ್ದಾರೆ. ಬಳಿಕ ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ, ಮಡಿಕೇರಿಗೆ ತೆರಳುವ ಸಾಧ್ಯತೆ ಇದೆ.

ಚಾಮುಂಡಿ ಬೆಟ್ಟದಲ್ಲಿ ಸೋನಿಯಾ ಗಾಂಧಿ ಪೂಜೆ: ಸೋನಿಯಾ ಗಾಂಧಿ ಅವರು ಇಂದು ಮಧ್ಯಾಹ್ನ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳುವ ಸಾಧ್ಯತೆ ಇದೆ. ಈ ಕಡೆ ರಾಹುಲ್ ಗಾಂಧಿ ತಮ್ಮ ಬೆಳಗಿನ ಪಾದಯಾತ್ರೆಯನ್ನು ಶ್ರೀರಂಗಪಟ್ಟಣ ಬಳಿ ಕೊನೆಗೊಳಿಸಿ ಮಧ್ಯಾಹ್ನ ವಾಪಸ್ ಚಾಮುಂಡಿ ಬೆಟ್ಟಕ್ಕೆ ಬಂದು ತಾಯಿಯೊಂದಿಗೆ ಪೂಜೆ ಸಲ್ಲಿಸುವ ನಿರೀಕ್ಷೆ ಇದೆ. ಪೂಜೆಯ ನಂತರ ಸೋನಿಯಾ ಗಾಂಧಿ ಮಡಿಕೇರಿಗೆ ತೆರಳಲಿದ್ದಾರೆ. ಮಧ್ಯಾಹ್ನ 2:30 ಗಂಟೆಗೆ ಶ್ರೀರಂಗಪಟ್ಟಣದಿಂದ ಪಾದಯಾತ್ರೆಯನ್ನು ರಾಹುಲ್ ಗಾಂಧಿ ಮುಂದುವರೆಸಲಿದ್ದು, ನಂತರ ಸಂಜೆ ಪಾಂಡುಪುರ ಬಳಿ ಪಾದಯಾತ್ರೆ ಕೊನೆಗೊಳ್ಳಲಿದೆ. ಅಕ್ಟೋಬರ್ 4 ಮತ್ತು 5ರಂದು ಆಯುಧಪೂಜೆ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ರಜೆಯಿದ್ದು, ಅಕ್ಟೋಬರ್ 6 ರಂದು ಪಾದಯಾತ್ರೆ ಬೆಳ್ಳೂರು ತಲುಪಲಿ ಆದಿಚುಂಚನಗಿರಿ ಮಠದಲ್ಲಿ ಕಾಂಗ್ರೆಸ್ ಕಾರ್ಯಕ್ರಮ ನಡೆಸಲಿದೆ.

ಇಂದಿನ ಪಾದಯಾತ್ರೆ: ಇಂದು ಬೆಳಗ್ಗೆ ಮೈಸೂರಿನ ಆರ್-ಗೇಟ್ ಸರ್ಕಲ್​​ನಿಂದ ಆರಂಭವಾದ ಭಾರತ್ ಜೋಡೋ ಪಾದಯಾತ್ರೆ 9 ಗಂಟೆಯ ವೇಳೆಗೆ ಮಂಡ್ಯ ಜಿಲ್ಲೆ ಪ್ರವೇಶಿಸಿದೆ. ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ವೇಣುಗೋಪಾಲ್, ಸುರ್ಜೇವಾಲಾ ಸೇರಿ ಹಲವರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಮೈಸೂರಿನ ಸಂಜೆ ಬಂಡಿಪಾಳ್ಯ ಆವರಣದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಮಾರಂಭ ನಡೆಯಿತು. ಈ ವೇಳೆ ಜೋರಾದ ಮಳೆ ಬಂದರೂ ಮಳೆಯಲ್ಲೇ ರಾಹುಲ್ ಗಾಂಧಿ ಭಾಷಣ ಮಾಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾರ್ಯಕರ್ತರು ಕೂಡ ಮಳೆಯಲ್ಲೇ ರಾಹುಲ್ ಭಾಷಣ ಕೇಳಿದರು.

ನಂತರ ವಸ್ತು ಪ್ರದರ್ಶನ ಆವರಣದಲ್ಲಿ ವಾಸ್ತವ್ಯ ಹೂಡಿದ್ದ ರಾಹುಲ್ ಗಾಂಧಿ ಇಂದು ಬೆಳಗ್ಗೆ ಮೈಸೂರು ನಗರದ ಆರ್-ಗೇಟ್​​ನಿಂದ ಪಾದಯಾತ್ರೆ ಆರಂಭಿಸಿ ಅಶೋಕ ರಸ್ತೆ, ಎಲ್.ಐ.ಸಿ ಸರ್ಕಲ್, ಮಣಿಪಾಲ್ ಆಸ್ಪತ್ರೆ ದಾಟಿ ಮೈಸೂರು-ಬೆಂಗಳೂರು ರಸ್ತೆಯ ಮೂಲಕ ಶ್ರೀರಂಗಪಟ್ಟಣವನ್ನು ತಲುಪಿದೆ. ಈ ಮೂಲಕ ಭಾರತ್ ಜೋಡೋ ಯಾತ್ರೆ ಮಂಡ್ಯ ಜಿಲ್ಲೆಯನ್ನು ಪ್ರವೇಶ ಮಾಡಿತು.

ಜೋಡೋ ಯಾತ್ರೆಗೆ ಮೈಸೂರು ಪೊಲೀಸರು ಬಿಗಿಯಾದ ಬಂದೋಬಸ್ತ್ ಏರ್ಪಡಿಸಿದ್ದರು. ಪಾದಯಾತ್ರೆಯ ಸಂದರ್ಭದಲ್ಲಿ ಕೆಲವರು ರಾಹುಲ್ ಗಾಂಧಿ ಜೊತೆ ಸೆಲ್ಫಿ ತೆಗೆದುಕೊಂಡರೆ ಮತ್ತೆ ಕೆಲವರು ಅವರಿಗೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಪಾದಯಾತ್ರೆಯಲ್ಲಿ ಪಾಲ್ಗೊಂಡರು.

Related Articles

Leave a Reply

Your email address will not be published. Required fields are marked *

Back to top button