ಸುದ್ದಿ

ಮೇಕೆದಾಟು ಪಾದಯಾತ್ರೆ ಮೊದಲ ದಿನದ Highlights!

ರಾಮನಗರ: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಇಂದಿನಿಂದ (ಜ.9) ಪಾದಯಾತ್ರೆ ಆರಂಭ ಆಗಿದೆ. ಕನಕಪುರ ಕೋಟೆಯಿಂದ ಬೆಂಗಳೂರಿನವರೆಗೂ ಕಾಲ್ನಡಿಗೆ ಜಾಥಾ ಸಾಗಲಿದೆ. ಇಂದಿನಿಂದ 11 ದಿನ ಅಂದ್ರೆ ಜನವರಿ 19ರವರೆಗೂ ಪಾದಯಾತ್ರೆ ನಡೆಯಲಿದ್ದು, 165ಕ್ಕೂ ಹೆಚ್ಚು ಕಿಲೋ ಮೀಟರ್ ದೂರ ಹೆಜ್ಜೆ ಹಾಕಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಟೀಂ ತಯಾರಾಗಿದೆ. ಕಾಂಗ್ರೆಸ್ ಪಾದಯಾತ್ರೆ ಬಗೆಗಿನ ಮೊದಲ ದಿನದ ಅಪ್ಡೇಟ್ಸ್ ಇಲ್ಲಿದೆ.

ಕೊವಿಡ್​ ಟೆಸ್ಟ್​ಗೆ ನಿರಾಕರಿಸಿದ ಡಿ.ಕೆ. ಶಿವಕುಮಾರ್​

ಮೇಕೆದಾಟು‌ ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಯುತ್ತಿದೆ. ಈ ವೇಳೆ, ಕೊವಿಡ್​ ಟೆಸ್ಟ್​ ಮಾಡಿಸಿಕೊಳ್ಳಲು ಡಿ.ಕೆ.ಶಿವಕುಮಾರ್​​ಗೆ ಮನವಿ ಮಾಡಲಾಗಿದೆ. ರ್ಯಾಂಡಮ್​​ ಟೆಸ್ಟ್​ ಮಾಡಿಸಿಕೊಳ್ಳಲು ಡಿ.ಕೆ.ಶಿವಕುಮಾರ್​​ಗೆ ಮನವಿ ಮಾಡಲಾಗಿದೆ. ಎಡಿಸಿ ಜವರೇಗೌಡ ಹಾಗೂ ಡಿಹೆಚ್​​ಒ ನಿರಂಜನ್​​ರಿಂದ ಮನವಿ ಮಾಡಲಾಗಿದೆ. ಆದರೆ, ಆದರೆ ಕೊವಿಡ್​ ಟೆಸ್ಟ್​ಗೆ ಡಿ.ಕೆ.ಶಿವಕುಮಾರ್​ ನಿರಾಕರಿಸಿದ್ದಾರೆ.

ಈ ವೇಳೆ ಅಧಿಕಾರಿಗಳಿಗೆ ಡಿಕೆಶಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ಐ ಆ್ಯಮ್​ ಫಿಟ್​ ಆ್ಯಂಡ್​ ಫೈನ್​. ನನಗೇ ಸಲಹೆ ಕೊಡಲು ಬಂದಿದ್ದೀರಾ? ನಾನೊಬ್ಬ ಜನಪ್ರತಿನಿಧಿ ನನಗೇ ಬ್ಲ್ಯಾಕ್​​ಮೇಲ್​ ಮಾಡ್ತಿದ್ದೀರಾ? ನೀವು ನಿಮ್ಮ ಆರೋಗ್ಯ ಇಲಾಖೆ ಸಚಿವರಿಗೆ ಹೋಗಿ ಹೇಳಿ. ಬಚ್ಚಾಗಳ ಹತ್ತಿರ ಆಟ ಆಡಲು ಹೋಗಿ ಹೇಳಿ. ನನಗೆ ಏನಾಗಿದೆ ಎಂದು ಟೆಸ್ಟ್​ ಮಾಡಲು ಬಂದಿದ್ದೀರಾ? ಅಧಿಕಾರಿಗಳಿಗೆ ನಿಮ್ಮ ಹುದ್ದೆ ಯಾವುದು ಎಂದು ಡಿಕೆಶಿ ಪ್ರಶ್ನೆ ಮಾಡಿದ್ದಾರೆ. ನಾನು ಟೆಸ್ಟ್​ ಮಾಡಿಸಿಕೊಳ್ಳಲ್ಲ ಎಂದು ವಾಪಸ್​ ಕಳಿಸಿದ್ದಾರೆ.

ದೊಡ್ಡಆಲಹಳ್ಳಿ ತಲುಪಿದ ಪಾದಯಾತ್ರೆ; ಶಿವಕುಮಾರ್ ಸ್ವಾಗತಕ್ಕೆ ಪಟಾಕಿ ಹಚ್ಚಿ ಸಂಭ್ರಮ

ಮೇಕೆದಾಟು‌ ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ದೊಡ್ಡಆಲದಹಳ್ಳಿ ತಲುಪಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡಆಲದಹಳ್ಳಿಯಲ್ಲಿ ಡಿ.ಕೆ. ಶಿವಕುಮಾರ್​​​ಗೆ ಭರ್ಜರಿ ಸ್ವಾಗತ ದೊರಕಿದೆ. ಶಿವಕುಮಾರ್ ಸ್ವಾಗತಕ್ಕೆ ಪಟಾಕಿ ಹಚ್ಚಿ ಸಂಭ್ರಮ ವ್ಯಕ್ತವಾಗಿದೆ. ರಾಕೆಟ್ ಪಟಾಕಿ‌ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ದೊಡ್ಡ ಆಲಹಳ್ಳಿಯಲ್ಲಿಯ ಮುಖ್ಯ ರಸ್ತೆಗಳೆಲ್ಲಾ ಬಣ್ಣ ಬಣ್ಣದ ಲೈಟ್ಸ್ ಹಾಕಲಾಗಿದೆ. ಝಗಮಗಿಸೋ ಲೈಟ್ಸ್ ನಡುವೆ ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆ ಸಾಗಿಬಂದಿದೆ. ಲೈಟ್ಸ್, ಬ್ಯಾನರ್,‌ ಫ್ಲೆಕ್ಸ್, ಕಟೌಟ್ ನಿಂದ ದೊಡ್ಡಆಲದಹಳ್ಳಿಯ ಸ್ಕೂಲ್ ಸರ್ಕಲ್ ತುಂಬಿತ್ತು.

ಬೇಕಿದ್ರೆ ಇಲ್ಲೇ ನಮ್ಮನ್ನ ತಡೆಯಲಿ, ಇಲ್ಲೇ ಇದ್ದು ಬಿಡುತ್ತೇವೆ: ಡಿಕೆ ಶಿವಕುಮಾರ್

ಮೇಕದಾಟು ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್​ ಪಾದಯಾತ್ರೆ ಕೈಗೊಂಡಿದೆ. ಪಾದಯಾತ್ರೆ ಬೆಂಗಳೂರಿಗೆ ಎಂಟ್ರಿ ಕೊಡಲು ಬಿಡಲ್ಲವೆಂಬ ಹೇಳಿಕೆ ವಿಚಾರವಾಗಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ಬಿಜೆಪಿ ಮಾಡ್ತಿರುವ ಹುನ್ನಾರ. ಬೇಕಿದ್ರೆ ಇಲ್ಲೇ ನಮ್ಮನ್ನ ತಡೆಯಲಿ, ಇಲ್ಲೇ ಇದ್ದು ಬಿಡುತ್ತೇವೆ. ಟೆಂಟ್ ಎಲ್ಲಾ ಹಾಕಿಸಿದ್ದೇವೆ ಇಲ್ಲೇ ಆರಾಮಾಗಿ ಇದ್ದುಬಿಡ್ತೇವೆ ಎಂದು ಹೇಳಿದ್ದಾರೆ.

ವಿರಾಮದ ಬಳಿಕ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮತ್ತೆ ಆರಂಭವಾಗಿದೆ. ಕಾರ್ಯಕರ್ತರ ಜೊತೆಗೆಡಿಕೆಶಿ ಹೆಜ್ಜೆ ಹಾಕಿದ್ದಾರೆ. ಮಧ್ಯಾಹ್ನದ ಊಟ ಮತ್ತು ವಿರಾಮದ ಬಳಿಕ ಪಾದಯಾತ್ರೆ ಮುಂದುವರೆದಿದೆ. ಹೆಗ್ಗನೂರಿನಿಂದ ದೊಡ್ಡ ಆಲಹಳ್ಳಿ ಕಡೆಗೆ ಕಾಂಗ್ರೆಸ್ ಪಾದಯಾತ್ರೆ ಹೊರಟಿದೆ.

ವಿಶ್ರಾಂತಿ ಬಳಿಕ ಹೆಗ್ಗನೂರಿನಿಂದ ಮತ್ತೆ ಹೊರಟ ಪಾದಯಾತ್ರೆ

ವಿಶ್ರಾಂತಿ ಬಳಿಕ ಮೇಕೆದಾಟು ಪಾದಯಾತ್ರೆ ಹೆಗ್ಗನೂರಿನಿಂದ ಆರಂಭಗೊಂಡಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹೆಗ್ಗನೂರು ಎಂಬಲ್ಲಿಂದ ಪಾದಯಾತ್ರೆ ಮತ್ತೆ ಆರಂಭ ಆಗಿದೆ. ವಿಶ್ರಾಂತಿ ಬಳಿಕ ಕಾಂಗ್ರೆಸ್‌ ಪಾದಯಾತ್ರೆ ಮುಂದುವರಿದಿದೆ. ಈ ಮಧ್ಯೆ, ಸಿದ್ದರಾಮಯ್ಯಗೆ ಜ್ವರ ಕಾಣಿಸಿಕೊಂಡ ಕಾರಣ ವೈದ್ಯರು ವಿಶ್ರಾಂತಿ ಪಡೆಯಲು ಸೂಚನೆ ನೀಡಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಪಾದಯಾತ್ರೆ ಮೊಟಕುಗೊಳಿಸಿ ಬೆಂಗಳೂರಿನತ್ತ ತೆರಳಿದ್ದಾರೆ.

ದಯವಿಟ್ಟು ವಿಶ್ರಾಂತಿ ತೆಗೆದುಕೊಳ್ಳಿ; ಸಚಿವ ಕಾರಜೋಳ ಮನವಿ

ವಿಪಕ್ಷ ನಾಯಕ ಸಿದ್ದರಾಮಯ್ಯ ಜ್ವರದಿಂದ ಬಳಲುತ್ತಿದ್ದಾರೆ. ನನಗೆ  ಕಳವಳವಾಗುತ್ತಿದೆ. ಸಿದ್ದರಾಮಯ್ಯನವರೇ ದಯವಿಟ್ಟು ವಿಶ್ರಾಂತಿ ತೆಗೆದುಕೊಳ್ಳಿ. ನಿಮ್ಮ ಆರೋಗ್ಯ ರಕ್ಷಣೆ ಮಹತ್ವ ಅಂತ ಸಚಿವ ಕಾರಜೋಳ ಟ್ವೀಟ್ ಮಾಡಿದ್ದಾರೆ.

ಪಾದಯಾತ್ರೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ ಆದ ಸಿದ್ದರಾಮಯ್ಯ

ಅನಾರೋಗ್ಯ ಹಿನ್ನೆಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಅರ್ಧ ಗಂಟೆಗೂ ಹೆಚ್ಚು ಕಾಲ ಸಿಎಂ ಬೊಮ್ಮಾಯಿ ಚರ್ಚೆ

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್​ ಪಾದಯಾತ್ರೆ ಆರಂಭಿಸಿದೆ. ಈ ಕುರಿತು ಚರ್ಚೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದಾರೆ.  ನೈಜ ವಿಚಾರ ಜನರ ಮುಂದೆ ತನ್ನಿ ಎಂದು ಸಚಿವರಿಗೆ ಸೂಚನೆ ನೀಡಿದ್ದಾರೆ. ಜನರಲ್ಲಿ ಕಾಂಗ್ರೆಸ್ ಪಾದಯಾತ್ರೆಯ ಪರಿಣಾಮವನ್ನ ತಿಳಿಸಿ. ಕೊರೊನಾ ಹೆಚ್ಚುತ್ತಿರುವ ಬಗ್ಗೆ ಹೆಚ್ಚು ತಿಳಿಸುವಂತೆ ಸೂಚನೆ ನೀಡಿದ್ದಾರೆ. ಆ ವಾತಾವರಣ ಸೃಷ್ಟಿ ಆದ್ರೆ ಪಾದಯಾತ್ರೆ ತಡೆಯಬಹುದು. ಜನ ನಮ್ಮನ್ನ ಪ್ರಶ್ನಿಸ್ತಿರುವುದನ್ನ ಹೇಳಿ ಅಂತ ಬೊಮ್ಮಾಯಿ ತಿಳಿಸಿದ್ದಾರೆ.

ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಬೇಸಿಕ್ ಚೆಕಪ್

ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಬೇಸಿಕ್ ಚೆಕಪ್​ಗೆ ಕನಕ‌ಪುರ ನರ್ಸಿಂಗ್ ಕಾಲೇಜಿನ ವೈದ್ಯರು ಆರೋಗ್ಯ ತಪಾಸಣೆಗೆ ಮುಂದಾಗಿದ್ದಾರೆ. ಏನಾದ್ರೂ ಸಮಸ್ಯೆ ಕಾಣಿಸಿಕೊಂಡಲ್ಲಿ ಕೂಡಲೇ ಪ್ರಥಮ ಚಿಕಿತ್ಸೆಗೆ ಸಿದ್ಧತೆ ನಡೆದಿದೆ. ಪೆಂಡಾಲ್ ಹಾಕಿ 80‌ ನೆಲ ಹಾಸಿಗೆ ಹಾಕಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಪಾದಯಾತ್ರೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ವೃದ್ಧರು ಭಾಗವಹಿಸಿರುವ ಹಿನ್ನೆಲೆ ಈ ಕ್ರಮಕ್ಕೆ ಸಿದ್ಧತೆ ನಡೆದಿದೆ.

ಕಾಂಗ್ರೆಸ್ ಪಾದಯಾತ್ರೆ ತಡೆಯದಿರಲು ಸರ್ಕಾರ ನಿರ್ಧಾರ

ಕಾಂಗ್ರೆಸ್ ಪಾದಯಾತ್ರೆ ತಡೆಯದಿರಲು ಸರ್ಕಾರ ನಿರ್ಧಾರ ಮಾಡಿದ್ದು ಕಾನೂನು ಪ್ರಕಾರ ಮಾತ್ರ ಕ್ರಮ ಜರುಗಿಸುವುದಕ್ಕೆ ಮುಂದಾಗಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ಮೇಕೆದಾಟು ಬೆಂಬಲಿಸಿ ವಾಟಾಳ್ ಪ್ರತಿಭಟನೆ

ಮೇಕೆದಾಟು ಯೋಜನೆ ಪಾದಯಾತ್ರೆಗೆ ಬೆಂಬಲಿಸಿ ವಾಟಾಳ್ ನಾಗರಾಜ್, ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ತಮಿಳರು ನಮ್ಮ ಶತೃಗಳು‌. ಸಿಎಂ ಸ್ಟಾಲಿನ್ ಕರ್ನಾಟಕದ ಯೋಜನೆ ವಿರೋಧಿಸಬಾರದು. 22 ರಂದು ಟೌನ್ ಹಾಲ್ ನಿಂದ ಭಾರೀ ಮೆರವಣಿಗೆ ಮಾಡಲಾಗುವುದು. ಕಳಸಾಬಂಡೂರಿ ಯೋಜನೆ ಜಾರಿಗೂ ಅಂದು ಆಗ್ರಹಿಸಲಾಗುವುದು. ಕಾಂಗ್ರೆಸ್​ನವರು ಕೇಂದ್ರ ಹಾಗೂ ರಾಜ್ಯದಲ್ಲಿ ಡಿಎಂಕೆ ನೀಡಿರುವ ಬೆಂಬಲ ವಾಪಸ್ ಪಡೆಯಬೇಕು. ಕನ್ನಡ ಪರ ಸಂಘಟನೆಗಳು ಈ ಹಿಂದೆಯೇ ಯೋಜನೆ ಶಂಕುಸ್ಥಾಪನೆ ಮಾಡಿದ್ದೆವು. ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಈ ವಿಷಯವನ್ನು ರಾಜಕೀಯ ಮಾಡಬಾರದು‌. ಕಾಂಗ್ರೆಸ್​ನವರು ಅಪರಾಧಿ ಸ್ಥಾನದಲ್ಲಿ ಇದ್ದಾರೆ. ಅವರಿಗೆ ಹೋರಾಡುವ ನೈತಿಕತೆ ಇಲ್ಲ ಅಂತ ವಾಟಾಳ್  ಕಿಡಿಕಾರಿದ್ದಾರೆ.

ಜನವರಿ 10ರಂದು ದೊಡ್ಡಆಲಹಳ್ಳಿಯಿಂದ ಪಾದಯಾತ್ರೆ ಆರಂಭ

ನಾಳೆ (ಜ.10) ದೊಡ್ಡಆಲಹಳ್ಳಿಯಿಂದ ಪಾದಯಾತ್ರೆ ಆರಂಭವಾಗುತ್ತದೆ. ಬೆಳಗ್ಗೆ 8.30ಕ್ಕೆ ಉಪಹಾರ ಬಳಿಕ ಪಾದಯಾತ್ರೆ ಆರಂಭವಾಗುತ್ತದೆ. ಮಧ್ಯಾಹ್ನ 1ಕ್ಕೆ ಮಾದಪ್ಪನದೊಡ್ಡಿಗೆ ತಲುಪಿ, ಅಲ್ಲಿ ಭೋಜನಕ್ಕೆ ವ್ಯವಸ್ಥೆ ಮಾಡಲಾಗುವುದು. ನಂತರ ಸಂಜೆ ವೇಳೆಗೆ ಕನಕಪುರ ನಗರಕ್ಕೆ ​ಪಾದಯಾತ್ರೆ ತಲುಪಲಿದೆ. ಅಂದು ಕನಕಪುರ ಟೌನಲ್ಲೇ ನಾಯಕರು ವಾಸ್ತವ್ಯ ಮಾಡಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button