ರಾಜಕೀಯಸುದ್ದಿ

ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಮಾಜಿ ಸಚಿವ, ಬಿಜೆಪಿ ಮುಖಂಡ ಎ. ಮಂಜು…

ಅರಕಲಗೂಡು: ಕಾಂಗ್ರೆಸ್‌ ನೇತೃತ್ವದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಇದೇ ಜನವರಿ 9ರಿಂದ ಹಮ್ಮಿಕೊಂಡಿರುವ ಪಾದಯಾತ್ರೆಗೆ ನೈತಿಕ ಬೆಂಬಲ ನೀಡಿ ಪಾಲ್ಗೊಳ್ಳುವುದಾಗಿ ಮಾಜಿ ಸಚಿವ, ಬಿಜೆಪಿ ಮುಖಂಡ ಎ. ಮಂಜು ತಿಳಿಸಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಬೆಂಗಳೂರು ನಗರ, ಜಿಲ್ಲೆ ಸೇರಿದಂತೆ ಒಟ್ಟು 6 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ ಮೇಕೆದಾಟು ಯೋಜನೆಯನ್ನು ಪಕ್ಷಾತೀತವಾಗಿ ಬೆಂಬಲಿಸಬೇಕಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿನ ಕರ್ನಾಟಕ ರಾಜ್ಯದ ಪಾಲಿನ ಸುಮಾರು 66 ಟಿಎಂಸಿ ನೀರನ್ನು ಬಳಕೆಮಾಡಿಕೊಂಡು ಈ ಯೋಜನೆ ಅನುಷ್ಠಾನಗೊಂಡರೆ ಕೋಟ್ಯಂತರ ಮಂದಿಗೆ ಸಮಗ್ರ ಕುಡಿಯುವ ನೀರನ್ನು ಒದಗಿಸಬಹುದಾಗಿದೆ. ಈ ಹಿನ್ನೆಲೆ ಕಾಂಗ್ರೆಸ್‌ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಪಾದಯಾತ್ರೆಯಲ್ಲಿ ಭಾಗವಹಿಸಿ ಬೆಂಬಲಿಸುವಂತೆ ಆಹ್ವಾನ ಸಹ ನೀಡಿದ್ದಾರೆ,” ಎಂದರು.

“ಯಾವುದೇ ಸರಕಾರ ಅಧಿಕಾರದಲ್ಲಿರಲಿ ಜನರಿಗೆ ಬೇಕಿರುವ ಯೋಜನೆಯನ್ನು ಪಕ್ಷಾತೀತವಾಗಿ ಬೆಂಬಲಿಸಿ ಜಾರಿಗೆ ತರಬೇಕಿದೆ. ಅಲ್ಲದೆ ಮೇಕೆದಾಟು ಯೋಜನೆ ಜನರಿಗೆ ಅಗತ್ಯವಿರುವುದರಿಂದ ರಾಜ್ಯ, ಕೇಂದ್ರ ಸರಕಾರಗಳು ಸ್ವಯಂ ಪ್ರೇರಿತವಾಗಿ ಯೋಜನೆಯನ್ನು ತರಬೇಕಿದೆ. ಪಾದಯಾತ್ರೆಯನ್ನು ಟೀಕಿಸುವ ಬದಲು ಕೇಂದ್ರ ಹಾಗೂ ರಾಜ್ಯ ಸರಕಾರ ಮೇಕೆದಾಟು ಯೋಜನೆಯನ್ನು ಘೋಷಿಸಬೇಕಿದೆ. ಇದಕ್ಕೆ ಬದ್ಧತೆ ಬೇಕಿದೆ,” ಎಂದರು.

“ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ಕೂಡ ಭೇಟಿ ಮಾಡಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಇದನ್ನು ಗೌರವಪೂರ್ವಕವಾಗಿ ಸ್ವೀಕರಿಸಿದ್ದೇನೆ. ಕ್ಷೇತ್ರದಿಂದ ಪಾದಯಾತ್ರೆಯಲ್ಲಿ ಭಾಗವಹಿಸುವ ಬೆಂಬಲಿಗರಿಗೆ ಸಂಪೂರ್ಣ ಸಹಕಾರ ನೀಡುವೆ. ಅಲ್ಲದೆ ಒಂದು ದಿನ ಖುದ್ದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವೆ,” ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button