ಮೂಲೆಹೊಳೆ ಚೆಕ್ ಪೋಸ್ಟ್ತಪಾಸಣೆ ನಡೆಸಿದ ಎ.ಸಿ.ಎಫ್.
ಗುಂಡ್ಲುಪೇಟೆ: ಕೇರಳದಲ್ಲಿ ಸತ್ತ ಜಾನುವಾರುಗಳ ಕಳೇಬರ
ಗಳನ್ನು ಕಂಟೈನರುಗಳಲ್ಲಿ ಮುಚ್ಚಿ ತಾಲೂಕಿಗೆ ಸಾಗಾಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಮೂಲೆಹೊಳೆ ಚೆಕ್ ಪೋಸ್ಟ್ನಲ್ಲಿ ಬಿಗಿ ತಪಾಸಣೆ ನಡೆಸಿದರು.
ಕೇರಳದಿಂದ ಲಾರಿ ಹಾಗೂ ತರಕಾರಿ ಸಾಗಾಣೆ ವಾಹನ
ಗಳಲ್ಲಿ ತ್ಯಾಜ್ಯಗಳನ್ನು ಸಾಗಾಣೆ ಮಾಡುತ್ತಿದ್ದ ದಂಧೆಕೋರರು ಚೆಕ್‌ಪೋಸ್ಟ್ ಸಿಬ್ಬಂದಿಯ ಕಣ್ಣುತಪ್ಪಿಸುವ ಸಲುವಾಗಿ ಮುಚ್ಚಿದ ಕಂಟೈನರುಗಳಲ್ಲಿ ಸಾಗಾಣೆಮಾಡಲಾರಂಭಿಸಿದ್ದರುಕೇರಳದಿಂದ ಪಟ್ಟಣಕ್ಕೆ ಮೃತ ಜಾನುವಾರುಗಳ ಕಳೇಬರಗಳನ್ನು ಸಾಗಿಸುತ್ತಿದ್ದ ಕಂಟೈನರ್ ಸಿಕ್ಕಿ ಬಿದ್ದ ಹಿನ್ನೆಲೆಯಲ್ಲಿ ಎಚ್ಚತ್ತ ಅರಣ್ಯಾಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ತೆರಳಿ ಕೇರಳದಿಂದ ತಾಲೂಕಿನತ್ತ ಆಗಮಿಸುವ ಕಂಟೈನರು ಸೇರಿದಂತೆ ಮುಚ್ಚಿದ ವಾಹನಗಳ ತಪಾಸಣೆ ಕೈಗೊಂಡಿದ್ದಾರೆ.
ಮೂಲೆಹೊಳೆ ವಲಯದ ಆರ್.ಎಫ್.ಒ ನಿಸಾರ್ ಅಹಮದ್ ಜತೆಗೂಡಿ ತಪಾಸಣೆ ನಡೆಸಲಾಗಿದೆ. ಅನುಮಾನಾಸ್ಪದ ವಾಹನಗಳ ಮೇಲೆ ಕಣ್ಣಿಟ್ಟು ಬಿಗಿಯಾದ ತಪಾಸಣೆ ನಡೆಸಬೇಕು ಎಂದು ಚೆಕ್‌ಪೋಸ್ಟ್ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ ಎಂದು ಬಂಡೀಪುರ ಉಪವಿಭಾಗದ ಎಸಿಎಫ್ ಎನ್,ಪಿ.ನವೀನ್ ಕುಮಾರ್ ತಿಳಿಸಿದ್ದಾರೆ.