ಇತ್ತೀಚಿನ ಸುದ್ದಿದೇಶರಾಜ್ಯವಿದೇಶಸುದ್ದಿ

ಮೂರ್ಖರ ದಿನ ಹುಟ್ಟಿದ್ದು ಹೇಗೆ? ಏಪ್ರಿಲ್ ಫೂಲ್ ದಿನ ಯಾವಾಗ ಪ್ರಾರಂಭವಾಯಿತು! 

ಬೆಂಗಳೂರು: ಪ್ರತಿ ವರ್ಷ ಇಂದು (ಏಪ್ರಿಲ್ 1) ಪ್ರಪಂಚದಾದ್ಯಂತ ಏಪ್ರಿಲ್ ಮೂರ್ಖರ ದಿನವನ್ನಾಗಿ ಆಚರಿಸಲಾಗುತ್ತದೆ. ಏಪ್ರಿಲ್ ಫೂಲ್ ನೆಪದಲ್ಲಿ ಪ್ರತಿ ವರ್ಷವೂ ನೀವು ಬಕ್ರಾ ಆಗುತ್ತೀರಾ? ಅಥವಾ ಸಿಕ್ಕಿದ್ದೇ ಚಾನ್ಸ್​ ಎಂದು ನೀವೇ ಬೇರೆಯವರನ್ನು ಬಕ್ರಾ ಮಾಡುತ್ತೀರಾ? ಮೂರ್ಖರ ದಿನ ಸಾಮಾನ್ಯವಾಗಿ ಜನರು ಪರಸ್ಪರ ಕಾಲುಗಳನ್ನು ಎಳೆದುಕೊಂಡು, ತಮಾಷೆ ಮಾಡಿಕೊಂಡು ಎಂಜಾಯ್ ಮಾಡುತ್ತಾರೆ. ಭಾರತ ಮಾತ್ರವಲ್ಲದೆ ಎಲ್ಲ ದೇಶಗಳಲ್ಲೂ ಏಪ್ರಿಲ್ 1ನ್ನು ಮೂರ್ಖರ ದಿನ ಆಚರಿಸಲಾಗುತ್ತದೆ. ಹಾಗಾದರೆ, ಏಪ್ರಿಲ್ ಫೂಲ್ ದಿನ ಹುಟ್ಟಿದ್ದು ಹೇಗೆ? ಇಲ್ಲಿದೆ ಮಾಹಿತಿ.

ಮೂರ್ಖರ ದಿನವನ್ನು ಮೊದಲು ಯುರೋಪಿನಲ್ಲಿ ಆಚರಿಸಲಾಯಿತು ಎಂದು ಹೇಳಲಾಗುತ್ತದೆ. ನಾವು ಈ ದಿನವನ್ನು ಏಕೆ ಆಚರಿಸುತ್ತೇವೆ ಅಥವಾ ಅದು ಯಾವಾಗ ಪ್ರಾರಂಭವಾಯಿತು? ಎಂಬ ಕುತೂಹಲ ನಿಮಗಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಏಪ್ರಿಲ್ ಫೂಲ್ ದಿನದ ನಿಖರವಾದ ಮೂಲವು ಇನ್ನೂ ನಿಗೂಢವಾಗಿದೆ. ಇದನ್ನು ಯಾರು ನಿಖರವಾಗಿ ಪ್ರಾರಂಭಿಸಿದರು ಅಥವಾ ಕಂಡುಹಿಡಿದರು ಎಂದು ಯಾರಿಗೂ ತಿಳಿದಿಲ್ಲ. ಆದರೂ, ಇತಿಹಾಸಕಾರರು ಇದು 1582ರ ಹಿಂದೆಯೇ ಶುರುವಾಗಿದ್ದು ಎನ್ನಲಾಗುತ್ತದೆ. ಫ್ರಾನ್ಸ್ ಜೂಲಿಯನ್ ಕ್ಯಾಲೆಂಡರ್​ನಿಂದ ಗ್ರೆಗೋರಿಯನ್ ಕ್ಯಾಲೆಂಡರ್​ಗೆ ಬದಲಾಯಿಸಿದಾಗ ಏಪ್ರಿಲ್ ಫೂಲ್ ದಿನವನ್ನು ಆಚರಿಸಲಾಗುತ್ತದೆ.

ಪೋಪ್ ಗ್ರೆಗೊರಿ XIII ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಪರಿಚಯಿಸಿದ ನಂತರ ಈ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ಹೊಸ ಕ್ಯಾಲೆಂಡರ್ ಜನವರಿ 1ರಂದು ಪ್ರಾರಂಭವಾಗಲಿದೆ ಎಂಬುದು ನಿಜವಾದರೂ ಇದಕ್ಕೂ ಮೊದಲು ಹೊಸ ವರ್ಷವನ್ನು ಮಾರ್ಚ್ ಅಂತ್ಯದಲ್ಲಿ ಆಚರಿಸಲಾಗುತ್ತಿತ್ತು.

ಪ್ರಾಚೀನ ಕಾಲದಲ್ಲಿ ಕ್ಯಾಲೆಂಡರ್‌ಗಳು ವಸಂತ ಋತುವಿನ ವಿಷುವತ್ ಸಂಕ್ರಾಂತಿಯನ್ನು ಆಧರಿಸಿವೆ. ಹೊಸ ವರ್ಷವನ್ನು ಏಪ್ರಿಲ್ 1ರಂದು ಅಥವಾ ಅದರ ಆಸುಪಾಸಿನಲ್ಲಿ ಆಚರಿಸಲಾಗುತ್ತಿತ್ತು. ಯುರೋಪಿನ ಅನೇಕ ಸ್ಥಳಗಳಲ್ಲಿ ಹೊಸ ವರ್ಷದ ಆರಂಭವನ್ನು ಮಾರ್ಚ್ 25ರ ಸುಮಾರಿಗೆ ಆಚರಿಸಲಾಗುತ್ತಿತ್ತು.

ಆದರೆ, ಪೀಪಲ್ ಗ್ರೆಗೊರಿ ಹೊಸ ವರ್ಷವನ್ನು ಜನವರಿ 1ಕ್ಕೆ ಬದಲಾಯಿಸಿದ ನಂತರ ಅನೇಕ ಜನರು ತೀವ್ರವಾದ ಬದಲಾವಣೆಯನ್ನು ಸ್ವೀಕರಿಸಲು ನಿರಾಕರಿಸಿದರು ಎನ್ನಲಾಗಿದೆ. ಅವರಿಗೆ ಅದರ ಬಗ್ಗೆ ತಿಳಿದಿರಲಿಲ್ಲ ಹಾಗೇ ಅವರು ಹಳೆಯ ಕ್ಯಾಲೆಂಡರ್ ಅನ್ನೇ ಅನುಸರಿಸುತ್ತಿದ್ದರು. ಅದಕ್ಕಾಗಿಯೇ ಜನರು ಸಾಮಾನ್ಯವಾಗಿ ಸಾಂಪ್ರದಾಯಿಕ ಕ್ಯಾಲೆಂಡರ್ ಅನ್ನು ಅನುಸರಿಸುವ ಮತ್ತು ಈ ದಿನವನ್ನು ಆಚರಿಸುವವರನ್ನು ಅಪಹಾಸ್ಯ ಮಾಡಲು ಪ್ರಾರಂಭಿಸಿದರು.

ಏಪ್ರಿಲ್ 1 ಜಾಗತಿಕವಾಗಿ ಬಹಳ ವಿನೋದದಿಂದ ಆಚರಿಸಲಾಗುವ ಅಂತಹ ಒಂದು ದಿನವಾಗಿದೆ. ಉಕ್ರೇನ್‌ನ ಒಡೆಸಾದಲ್ಲಿ ಈ ದಿನವನ್ನು ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಗುತ್ತದೆ. ಹಾಸ್ಯಗಾರರು “ಏಪ್ರಿಲ್ ಫೂಲ್ಸ್!” ಎಂದು ಕೂಗುವ ಮೂಲಕ ಕುಚೇಷ್ಟೆಗಳನ್ನು ಮಾಡಿ, ತಮಾಷೆಯಿಂದ ಈ ದಿನವನ್ನು ಕಳೆಯುತ್ತಾರೆ.

 

Related Articles

Leave a Reply

Your email address will not be published. Required fields are marked *

Back to top button