ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 62ನೇ ವರ್ಷದ ಹುಟ್ಟುಹಬ್ಬ..
ಸಿಎಂ ಬಸವರಾಜ್ ಬೊಮ್ಮಾಯಿಗೆ(CM Basavaraj Bommai) ಇಂದು ಡಬಲ್ ಸಂಭ್ರಮ. ಒಂದೆಡೆ ರಾಜ್ಯದಲ್ಲಿ ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 6 ತಿಂಗಳು ಪೂರೈಸಿದರೆ, ಇನ್ನೊಂದೆಡೆ ಇಂದು ಬೊಮ್ಮಾಯಿಗೆ 62ನೇ ವರ್ಷದ ಹುಟ್ಟುಹಬ್ಬ(Birthday). ಅನೇಕ ಗಣ್ಯರು ಸಿಎಂ ಬಸವರಾಜ್ ಬೊಮ್ಮಾಯಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ(Wishes). ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೀಗೆ ಅನೇಕ ರಾಷ್ಟ್ರ ಹಾಗೂ ರಾಜ್ಯ ನಾಯಕರು ಬೊಮ್ಮಾಯಿ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ 62ನೇ ವರ್ಷದ ಹುಟ್ಟುಹಬ್ಬ ಹಿನ್ನೆಲೆ, ಹಸು ಮತ್ತು ಕರುವಿಗೆ ಪೂಜೆ ಸಲ್ಲಿಸಿ, ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಆರ್ಟಿ ನಗರದ ನಿವಾಸದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಪೂಜೆ ಸಲ್ಲಿಸಿದರು.
ಶುಭಕೋರಿದ ಅಮಿತ್ ಶಾ & ಪ್ರಧಾನಿ ಮೋದಿ
ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಡಬಲ್ ಸಂಭ್ರಮ ಹಿನ್ನೆಲೆ, ಸಿಎಂ ಬೊಮ್ಮಾಯಿಗೆ ರಾಷ್ಟ್ರೀಯ ನಾಯಕರು ಶುಭ ಕೋರಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿ ಜನ್ಮದಿನದ ಶುಭಾಶಯ ಹಾಗೂ ಅವರ ನೇತೃತ್ವದ ಸರ್ಕಾರ ಆರು ತಿಂಗಳು ತುಂಬಿಸಿದ್ದಕ್ಕೆ ಶುಭ ಕೋರಿದ್ದಾರೆ. ಅಲ್ಲದೇ ಮಾಜಿ ಸಿಎಂ ಯಡಿಯೂರಪ್ಪ ಕೂಡ ಸಿಎಂ ಬೊಮ್ಮಾಯಿಗೆ ದೂರವಾಣಿ ಕರೆ ಮೂಲಕ ಶುಭಾಶಯ ತಿಳಿಸಿದ್ದಾರೆ.
ಅಭಿನಂದನಾ ಕಾರ್ಯಕ್ರಮ
ಇನ್ನೊಂದೆಡೆ ಬೊಮ್ಮಾಯಿ ಸರ್ಕಾರ ಆರು ತಿಂಗಳು ಪೂರೈಸಿದ ಹಿನ್ನೆಲೆ, ಸಿಎಂ ಬೊಮ್ಮಾಯಿಗೆ ಪಕ್ಷದಿಂದ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸಂಜೆ 5 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಿಎಂ ಅವರನ್ನು ಅಭಿನಂದಿಸಲಿದ್ದಾರೆ.
ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ ಎಂದ ಸಿಎಂ
ಸಿಎಂ ಬೊಮ್ಮಯಿ ಮಾತನಾಡಿ, ನಾನು ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ. ಆದ್ರೂ ರಾಜ್ಯಾದ್ಯಂತ ನನ್ನ ಜನರು, ಸ್ನೇಹಿತರು , ಶಾಸಕರು , ಕ್ಷೇತ್ರದ ಜನತೆ ಶುಭಾಶಯ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. ನಿನ್ನೆ ರಾಷ್ಟ್ರಪತಿ , ಸಹ ವಿಶ್ ಮಾಡಿದ್ದಾರೆ.. ಶುಭಾಶಯ ತಿಳಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುವೆ ಎಂದರು.
ಮುಂದುವರೆದ ಅವರು, ಇದೇ ಇಂದು ನಮ್ಮ ಸರ್ಕಾರಕ್ಕೆ ಆರು ತಿಂಗಳು ತುಂಬಿದೆ. ಹಾಗಾಗಿ ಒಂದು ಕಿರು ಹೊತ್ತಿಗೆ ತರಲಾಗಿದೆ. ಎಲ್ಲರ ಮಾರ್ಗದರ್ಶನದಲ್ಲಿ ಕೆಲಸ ಮಾಡಲು ಪ್ರೇರಣೆ ಸಿಕ್ಕಿದೆ. ಇನ್ನಷ್ಟು ಗಟ್ಟಿಯಾಗಿ ಮತ್ತು ಸ್ಪೂರ್ತಿಯಾಗಿ ರಾಜ್ಯವನ್ನು ಮುನ್ನಡೆಸುತ್ತೇನೆ. ಕೋವಿಡ್ ನಿರ್ವಹಣೆ, ಪ್ರವಾಹ ನಿರ್ವಹಣೆ ಬಗ್ಗೆ ಕಿರುಹೊತ್ತಿಗೆ ಬಿಡುಗಡೆ ಮಾಡ್ತೀನಿ. ಕೋವಿಡ್ ನಿಯಮ ಪಾಲಿಸಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಿಶ್
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು, ಆತ್ಮೀಯರು ಆದ ಶ್ರೀ @BSBommai ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ಸರ್ವತೋಮುಖ ಬೆಳವಣಿಗೆಗಾಗಿ ಸಮರ್ಥ ಆಡಳಿತವನ್ನು ನೀಡುತ್ತಿರುವ ಅವರಿಗೆ ಭಗವಂತನು ಜನರ ಸೇವೆಯನ್ನು ಮಾಡಲು ಹೆಚ್ಚಿನ ಆರೋಗ್ಯವನ್ನು ಕರುಣಿಸಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಿಎಂಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಇನ್ನು ಸಚಿವ ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಸೆ ಬಿಟ್ಟು, ಸಿಎಂ ಗೆ ಶುಭ ಕೋರಿದ್ದಾರೆ. ಆರು ತಿಂಗಳ ಪೂರ್ಣ ಹಾಗೂ ಹುಟ್ಟು ಹಬ್ಬಕ್ಕೆ ಶುಭಾಶಯ. ಎಲ್ಲರನ್ನು ವಿಶ್ವಾಸ ತೆಗೆದು ಕೊಂಡು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದೀರಿ. ಅಭಿವೃದ್ಧಿ ಕಾರ್ಯಗಳ ಮೂಲಕ ಜನಮನ್ನಣೆ ಗಳಿಸಿದ್ದೀರಿ. ಏನೇ ಅಡೆತಡೆಗಳು ಬಂದರೂ, ಅದಕ್ಕೆ ಕುಗ್ಗದೇ, ಸಹನೆಯನ್ನು ಕಳೆದುಕೊಳ್ಳದೇ, ಸಮಚಿತ್ತದಿಂದ ನೋಡುವ ಗುಣ ನಮ್ಮೆಲ್ಲರಿಗೂ ಅನುಕರಣೀಯ. ನಿಮ್ಮ ನಾಯಕತ್ವದಲ್ಲೇ ರಾಜ್ಯವು ದೇಶದಲ್ಲೇ ಮಾದರಿ ರಾಜ್ಯವಾಗಲಿ ಎಂದು ಪ್ರಾರ್ಥಿಸುವೆ ಎಂದು ಹಾರೈಸಿದ್ದಾರೆ. ನಿರಾಣಿಯವರು ಇತ್ತೀಚೆಗೆ ಸಿಎಂ ಸ್ಥಾನಕ್ಕಾಗಿ ಭಾರಿ ಕಸರತ್ತು ಮಾಡಿದ್ದರು. ನಿರಾಣಿಯ ಸಿಎಂ ಆಸೆ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಕಟುವಾಗಿ ಟೀಕಿಸಿದ್ದರು.