ಇತ್ತೀಚಿನ ಸುದ್ದಿ
Trending

ನಿಯಮ ಉಲ್ಲಘನೆ ಕಾನೂನು ಭಾಹಿರ:ಡಾ"ನಿಸಾರ್ ಫಾತೀಮಾ

ಆಹಾರ ಸುರಕ್ಷತಾ ತರಬೇತಿ ಪ್ರಮಾಣ ಪತ್ರದೊಂದಿಗೆ ಪರವಾನಿಗೆ ಅಥವಾ ನೊಂದಣಿ ಕಡ್ಡಾಯವಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಆಹಾರ ಸುರಕ್ಷತಾ ಅಧಿಕಾರಿಯಾದ ಡಾ”ನಿಸಾರ್ ಫಾತೀಮಾ ತಿಳಿಸಿದರು.

ಆಲೂರು ತಾಲ್ಲೂಕಿನ ಮಗ್ಗೆ ರಾಯರಕೊಪ್ಪಲು ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳ ಹಿಂದೆ ಪಾನಿಪೂರಿಯಲ್ಲಿ ಹುಳ ಕಂಡುಬಂದಿದ್ದು,ಅಸುರಕ್ಷಿತ ಆಹಾರ ನೀಡುವುದು ಕಾನೂನು ಭಾಹೀರ ಹಾಗಾಗಿ ಅಧಿಕಾರಿಗಳು ಭೇಟಿನೀಡಿ ಮಾದರಿ ಸಂಗ್ರಹಿಸಿ ನೂಟೀಸ್ ನೀಡಿದ್ದಾರೆ ಜೊತೆಗೆ ದಿನಸಿ ಅಂಗಡಿ.ಹೋಟೆಲ್.ಬೇಕರಿ.ಕಾಂಡಿಮೆಂಟ್ಸ್,ಚಾಟ್ ಸೆಂಟರ್ ಗಳಿಗೆ ಭೇಟಿಮಾಡಿ ಆಹಾರ ಸುರಕ್ಷತಾ ತಪಾಸಣೆ ಮಾಡಿ ಸ್ವಚ್ಚತೆಯೊಂದಿಗೆ ಉತ್ತಮ ಗುಣಮಟ್ಟ ಆಹಾರವನ್ನು ಗ್ರಾಹಕರಿಗೆ ನೀಡಬೇಕು ಎಂದು ಜಾಗೃತಿ ಮೂಡಿಸಿದರು.ಈ ನಿಯಮ ಪಾಲನೆ ತಪ್ಪಿದಂತಹ ಉದ್ದಿಮೆದಾರರಿಗೆ ಸ್ಥಳದಲ್ಲಿಯೆ ನೋಟಿಸು ನೀಡಿ ಏಳು ದಿನದೊಳಗೆ ಸೂಕ್ತ ದಾಖಲೆಗಳೊಂದಿಗೆ ಉತ್ತರ ಕೊಡಬೇಕು ಇಲ್ಲವಾದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು,ಅಲ್ಲದೆ ಉದ್ದಿಮೆದಾರರು ಕಡ್ಡಾಯವಾಗಿ ಆಹಾರ ಸುರಕ್ಷತಾ ತರಬೇತಿ ಪ್ರಮಾಣಪತ್ರ ಪಡೆದು ಹಾಗೂ ಪರವಾನಿಗೆ ಅಥವಾ ನೊಂದಣಿಯನ್ನು ಗೋಡೆಯ ಮೇಲೆ ಪ್ರದರ್ಶಿಸಬೇಕು,ಸ್ವಚ್ಚತೆ ಹಾಗೂ ಗುಣಮಟ್ಟ ಕಾಯ್ದಿರಿಸುವಂತೆ ಸೂಚನೆ ನೀಡಿದ್ದಾರೆ.

ಈ ಸಂಧರ್ಭದಲ್ಲಿ ಡಾ”ಸಾಗರ್.ಆಹಾರ ನೀರಿಕ್ಷಕರಾದ ಸತೀಶ್.ಮೋಹನ್.ಮಂಜು ಹಾಗೂ ಸಿಬ್ಬಂದಿಗಳಿದ್ದರು.

Related Articles

Leave a Reply

Your email address will not be published. Required fields are marked *

Back to top button