ಇತ್ತೀಚಿನ ಸುದ್ದಿಸಿನಿಮಾ

ಮಾಧುರಿ ದೀಕ್ಷಿತ್ ಒಟಿಟಿಗೆ ಲಗ್ಗೆ…

ನೆಟ್‌ಫ್ಲಿಕ್ಸ್ ದಿ ಫೇಮ್‌ ಗೇಮ್‌ ಎಂಬ ತನ್ನ ಒರಿಜಿನಲ್ ಸಿರೀಸ್‌ನ ಟ್ರೈಲರ್ ರಿಲೀಸ್ ಮಾಡಿದೆ. ಇದುವೇ ಸಿರೀಸ್‌ಗೆ ಈ ಹಿಂದೆ ಫೈಂಡಿಂಗ್ ಅನಾಮಿಕ ಎಂದು ಹೆಸರಿಡಲಾಗಿತ್ತು. ಮಾಧುರಿ ದೀಕ್ಷಿತ್ ಅವರು ಇದರಲ್ಲಿ ಸಡನ್ನಾಗಿ ಕಾಣೆಯಾಗುವ ನಟಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಸಂಜಯ್ ಕಪೂರ್, ಮಾನವ್ ಕೌಲ್, ಲಕ್ಷ್‌ವೀರ್ ಸರಣ್, ಸುಹಾಸಿನಿ ಮುಲೆ ಹಾಗೂ ಮುಸ್ಕಾನ್ ಜಫೇರಿ ನಟಿಸಿದ್ದಾರೆ.

ಮಾಧುರಿ ದೀಕ್ಷಿತ್ ಸಿರೀಸ್‌ನಲ್ಲಿ ಅನಾಮಿಕ ಆನಂದ್ ಎಂಬ ಬಾಲಿವುಡ್ ನಟಿಯ ಪಾತ್ರ ಮಾಡಿದ್ದು, ಪತ್ನಿ ಹಾಗೂ ತಾಯಿಯಾಗಿ ಆಕೆ ಮಾದರಿ ಮಹಿಳೆಯಾಗಿ ಬದುಕುತ್ತಿರುತ್ತಾಳೆ. ಆದರೆ ನಂತರ ಆಕೆ ದಿಢೀರನೆ ನಾಪತ್ತೆಯಾಗುತ್ತಾಳೆ. ಆದರೆ ನಂತರ ಅವಳು ಕಣ್ಮರೆಯಾಗುತ್ತಾಳೆ. ಮನುಷ್ಯ ಬೇಟೆ ನಡೆಯುತ್ತದೆ, ಇದು ಅನಾಮಿಕಾಳ ಕ್ಲೋಸೆಟ್‌ನಲ್ಲಿದ್ದ ಅಸ್ಥಿಪಂಜರಗಳನ್ನು ಹೊರತರುತ್ತದೆ.

ಅದರಲ್ಲಿ ಆಕೆಯ ಪತಿಯದ್ದೂ ಸಹ ಇರುತ್ತದೆ. ನಂತರದಲ್ಲಿ ಖುಷಿ ಇಲ್ಲದ ವೈವಾಹಿಕ ಜೀವನ, ಅಕ್ರಮ ಸಂಬಂಧ, ಔದ್ಯೋಗಿಕ ಕಿತ್ತಾಟ ಎಲ್ಲವೂ ರಿವೀಲ್ ಆಗುತ್ತದೆ. ಈ ಮೂಲಕ ಅನಾಮಿಕ ಎಷ್ಟು ಕಷ್ಟಗಳ ಮೂಲಕ ಹಾದುಬಂದಳು ಎನ್ನುವುದು ತಿಳಿಯುತ್ತದೆ. ಟ್ರೈಲರ್‌ ಮಿಸ್ಸಿಂಗ್ ಮಹಿಳೆಯ ಕುರಿತ ಮೇಜರ್ ವೈಬ್ಸ್‌ಗಳನ್ನು ಪ್ರೇಕ್ಷರಿಗೆ ತಲುಪಿಸುವಲ್ಲಿ ಸಕ್ಸಸ್ ಆಗಿದೆ.

ದಿ ಫೇಮ್ ಗೇಮ್ ಅನ್ನು ಬಿಜಾಯ್ ನಂಬಿಯಾರ್ ಮತ್ತು ಕರಿಷ್ಮಾ ಕೊಹ್ಲಿ ನಿರ್ದೇಶಿಸಿದ್ದಾರೆ. ಶ್ರೀ ರಾವ್ ಮುಖ್ಯ ಬರಹಗಾರನಾಗಿದ್ದು ಶೋ ರೂನರ್ ಆಗಿ ಕೆಲಸ ಮಾಡಿದ್ದಾರೆ. ಬಾಲಿವುಡ್ ಐಕಾನ್ ಅನಾಮಿಕಾ ಆನಂದ್ ವಿಶ್ವದ ಅತ್ಯಂತ ಪ್ರಸಿದ್ಧ ಮಹಿಳೆಯರಲ್ಲಿ ಒಬ್ಬರು. ಈ ಮಾದರಿ ಹೆಂಡತಿ ಮತ್ತು ತಾಯಿ ಒಂದು ಕುರುಹು ಇಲ್ಲದೆ ಇದ್ದಕ್ಕಿದ್ದಂತೆ ಕಣ್ಮರೆಯಾದಾಗ, ‘ಅನಾಮಿಕಾ ಎಲ್ಲಿ?’ ಎಂಬ ಪ್ರಶ್ನೆ ದಿಢೀರನೆ ‘ಅನಾಮಿಕಾ ಯಾರು?’ ಆಗಿ ಬದಲಾಗುತ್ತದೆ. ಏಕೆಂದರೆ ಅವಳ ಜೀವನದಲ್ಲಿ ಅಡಗಿರುವ ಸತ್ಯಗಳನ್ನು ಮತ್ತು ನೋವಿನ ಸುಳ್ಳುಗಳನ್ನು ಈ ತನಿಖೆ ಬಹಿರಂಗಪಡಿಸುತ್ತದೆ.

Related Articles

Leave a Reply

Your email address will not be published. Required fields are marked *

Back to top button