Benefits Of Drumstick Tea: ನುಗ್ಗೆಕಾಯಿಯಲ್ಲಿ ಹಲವಾರು ಪೋಷಕಾಂಶಗಳಿದೆ. ಅವು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗೆಯೇ ನುಗ್ಗೆಕಾಯಿ ಟೀ ಕೂಡ. ಇದೇನಿದು ನುಗ್ಗೆಕಾಯಿ ಟೀ ಅಂತೀರಾ? ಇಲ್ಲಿದೆ ನೋಡಿ
ಮನೆಯಲ್ಲಿ ನುಗ್ಗೆ ಮರವಿದ್ದರೂ ಮನೆಯವರಿಗೆ ಕಾಯಿಲೆ ಬರುವುದಿಲ್ಲ ಎನ್ನುತ್ತಾರೆ ದೊಡ್ಡವರು. ಇದು ಅದರ ಔಷಧೀಯ ಗುಣಗಳಿಂದಾಗಿ. ಇದರ ಎಲೆ, ಹಣ್ಣು, ಹೂವು, ಎಲ್ಲವೂ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುತ್ತವೆ. ಆ ಮೂಲಕ ಮಧುಮೇಹಿಗಳು ನುಗ್ಗೆ ಕಾಯಿ ಟೀ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟು ಮಧುಮೇಹವನ್ನು ತಡೆಗಟ್ಟಬಹುದು.
ನುಗ್ಗೆಕಾಯಿ ಟೀ ಮಾಡುವ ವಿಧಾನ: ನುಗ್ಗೆಕಾಯಿಯನ್ನು ತುಂಡುಗಳಾಗಿ ಕತ್ತರಿಸಿ ಒಂದು ಪಾತ್ರೆಯಲ್ಲಿ ಹಾಕಿ. ನಂತರ ಬೇಕಾದಷ್ಟು ನೀರು ಹಾಕಿ ಕುದಿಸಿ.
ನುಗ್ಗೆಕಾಯಿ ಚನ್ನಾಗಿ ಕುದ್ದು ರಸವು ಚೆನ್ನಾಗಿ ಬರಿದಾಗ, ಸ್ಟವ್ ಆಫ್ ಮಾಡಿ ಮತ್ತು ಅದನ್ನು ಸೋಸಿಕೊಳ್ಳಿ. ನಂತರ ಆ ನೀರನ್ನು ಕುಡಿಯಿರಿ. ಈ ನೀರನ್ನು ಕುಡಿಯುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ನುಗ್ಗೆಕಾಯಿ ಟೀ ಪ್ರಯೋಜನಗಳು: ಇದರಲ್ಲಿ ವಿಟಮಿನ್ ಎ ಹೇರಳವಾಗಿದ್ದು, ದೃಷ್ಟಿಗೆ ಒಳ್ಳೆಯದು ಎಂದು ಸಾಬೀತಾಗಿದೆ. ಇದಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.