ಇತ್ತೀಚಿನ ಸುದ್ದಿರಾಜ್ಯಸುದ್ದಿ

ಮದುಮಲೈ ಅರಣ್ಯದಲ್ಲಿ ಜಿಂಕೆ ಹಿಂಡನ್ನು ಹೆದರಿಸಿದ ಮೂರು ಯುವಕರಿಗೆ ಬಿತ್ತು15ಸಾವಿರ ದಂಡ

ಗುಂಡ್ಲುಪೇಟೆ:
ಆಂಧ್ರಪ್ರದೇಶದ ಮೂವರು ಯುವಕರು ತಮಿಳುನಾಡಿನ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಿಂಕೆ ಹಿಂಡಿಗೆ ಹೆದರಿಸಿ ಓಡಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ಮಸಿನಗುಡಿ ಅರಣ್ಯಾಧಿಕಾರಿಗಳು ಆರೋಪಿಗಳಾದ ಅಬ್ದುಲ್ಲಾ ಖಾನ್ (23), ಅಬ್ದುಲ್ ಅಜೀಜ್ (28), ಮತ್ತು ಇಬ್ರಾಹಿಂ ಶೇಖ್ (30) ಮೂವರು ಯುವಕರ ಮೇಲೆ 15,000. ರೂ. ದಂಡ ವಿಧಿಸಿದ್ದಾರೆ.

ಈ ಘಟನೆಯನ್ನು “ಕರ್ನಾಟಕ ಪೋರ್ಟ್‌ಫೋಲಿಯೋ” ಹೆಸರಿನ ಎಕ್ಸ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಮದುಮಲೈ ಹುಲಿ ಸಂರಕ್ಷಿತಾರಣ್ಯದಲ್ಲಿ ಈ ಘಟನೆ ಸಂಭವಿಸಿದ್ದು, ಎ.ಪಿ.16.ಸಿ.ವಿ.0001 ನೋಂದಣಿ ಸಂಖ್ಯೆ ಹೊಂದಿರುವ ಕಾರಿನಿಂದ ಯುವಕನೊಬ್ಬ ಇಳಿದು ಅರಣ್ಯ ಪ್ರದೇಶದೊಳಗೆ ಜಿಂಕೆಗಳ ಹಿಂಡನ್ನು ಅಟ್ಟಿಸಿಕೊಂಡು ಹೋಗುತ್ತಿರುವುದು ಕಂಡುಬಂದಿದೆ.

Related Articles

Leave a Reply

Your email address will not be published. Required fields are marked *

Back to top button