ಮತ್ತೊಬ್ಬ ಯುವ ನಟಿ ಬಾಳಲ್ಲಿ ವಿಧಿ ಆಟ!
ಸಾವು ಅನ್ನೋದು ಯಾವಾಗ ಬರುತ್ತೆ ಅಂತ ಯಾರಿಗೂ ಗೊತ್ತಾಗಲ್ಲ. ಸಾವನ್ನು ಕಾಯುತ್ತಾ ಇರಲು ಆಗುವುದಿಲ್ಲ. ಅವರ ಅವರ ಟೈಮ್ ಮುಗಿದ ಮೇಲೆ ಎಲ್ಲರೂ ಒಂದು ದಿನ ಸಾಯೋದೆ. ಆದರೆ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಸಾವನ್ನು ಯಾರು ಒಪ್ಪುವುದಿಲ್ಲ. ಯಾರಿಗೂ ಹೇಳದೇ, ಕೇಳದೇ ಮೃತ್ಯು ಅವರನ್ನು ಬಲಿ ಪಡೆದುಕೊಂಡಿತ್ತು. ಇದೀಗ ಮತ್ತೊಬ್ಬ ಯುವ ನಟಿ ಬಾಳಲ್ಲಿ ವಿಧಿ ಆಟ ಆಡಿದೆ. ಸಿನಿ ರಂಗದಲ್ಲಿ ದೊಡ್ಡ ಹೆಸರು ಮಾಡಬೇಕು ಎಂದು ಕನಸು ಕಂಡಿದ್ದ ನಟಿಯ ಬದುಕಿನ ಬಂಡಿ ಅರ್ಧಕ್ಕೆ ನಿಂತಿದೆ. ಹೈದರಾಬಾದ್ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವ ನಟಿ ಹಾಗೂ ಯೂಟ್ಯೂಬರ್ ಗಾಯತ್ರಿ ಅಲಿಯಾಸ್ ಡಾಲಿ ಡಿ ಕ್ರೂಜ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ವಿಚಾರ ತಿಳಿದು ಅವರ ಫಾಲೋವರ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಹೋಲಿ ಆಚರಣೆ ಮುಗಿಸಿ ಬರುವಾಗ ಅಪಘಾತ!
ಹೋಳಿ ಆಚರಣೆ ಮುಗಿಸಿ ಗೆಳೆಯನ ಜೆತೆ ಮನೆಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇವರು ಚಲಿಸುತ್ತಿದ್ದ ವಾಹನ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿತ್ತು. ಈ ಮೂಲಕ ಮುಂದೆ ಚಿತ್ರರಂಗದಲ್ಲಿ ಹೆಸರು ಮಾಡಬೇಕಿದ್ದ ನಟಿಯನ್ನು ಕಳೆದುಕೊಂಡಂತಾಗಿದೆ. ಇನ್ನೂ ಸ್ಥಳದಲ್ಲೇ ಗಾಯಿತ್ರಿ ಸಾವನ್ನಪ್ಪಿದ್ದಾರೆ.
ಡಾಲಿ ಎಂದೇ ಫೇಮಸ್ ಗಾಯಿತ್ರಿ!
ಗಾಯತ್ರಿ ಅವರು ಡಾಲಿ ಎಂದೇ ಫೇಮಸ್. ‘ಮ್ಯಾಡಮ್ ಸರ್ ಮ್ಯಾಡಮ್ ಅಂತೆ’ ಹೆಸರಿನ ತೆಲುಗು ವೆಬ್ ಸರಣಿಯಲ್ಲಿ ಅವರು ನಟಿಸಿದ್ದರು. ಇದರಿಂದ ಅವರಿಗೆ ಸಾಕಷ್ಟು ಖ್ಯಾತಿ ಬಂತು. ‘ಜಲ್ಸಾ ರಾಯುಡು’ ಹೆಸರಿನ ಯೂಟ್ಯೂಬ್ ಚಾನೆಲ್ ಕೂಡ ಅವರು ನಡೆಸುತ್ತಿದ್ದರು. ಅವರಿಗೆ ಈಗಿನ್ನೂ 26 ವರ್ಷ ವಯಸ್ಸಾಗಿತ್ತು. ಇಷ್ಟು ಚಿಕ್ಕ ವಯಸ್ಸಿಗೆ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ನಿಜಕ್ಕೂ ದುಃಖದ ಸಂಗತಿ. ಇನ್ನೂ ಆಕೆಯ ಕುಟುಂಬಸ್ಥರು ಹಾಗೂ ಸ್ನೇಹಿತರು ಗಾಯಿತ್ರಿ ನೆನೆದು ಕಣ್ಣೀರು ಹಾಕುತ್ತಿದ್ದಾರೆ.
ಡೆಡ್ಲಿ ಆ್ಯಕ್ಸಿಡೆಂಟ್ ನಡೆದಿದ್ದು ಹೇಗೆ?
ಗಾಯತ್ರಿ ಗೆಳೆಯರ ಜತೆ ಹೋಳಿ ಆಚರಣೆಗೆ ತೆರಳಿದ್ದರು. ನಂತರ ಗೆಳೆಯ ರಾಥೋಡ್ ಜತೆ ಅವರು ಕಾರಿನಲ್ಲಿ ಮನೆಗೆ ಹೊರಟಿದ್ದರು. ರಾಥೋಡ್ ಕಾರು ಚಲಾಯಿಸುತ್ತಿದ್ದರು. ಕಾರು ವೇಗವಾಗಿ ಚಲಿಸುತ್ತಿತ್ತು. ಹೀಗಾಗಿ, ಕಾರು ನಿಯಂತ್ರಣಕ್ಕೆ ಸಿಗದೆ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರು ಪಲ್ಟಿ ಹೊಡೆದಿದೆ. ಇಬ್ಬರಿಗೂ ತೀವ್ರ ಗಾಯಗಳು ಆಗಿದ್ದವು. ಗಾಯತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲೇ ನಿಧನ ಹೊಂದಿದರು.
ನಡೆದುಕೊಂಡು ಹೋಗ್ತಿದ್ದ ವ್ಯಕ್ತಿ ಮೇಲೆ ಬಿದ್ದ ಕಾರು!
ಅಲ್ಲಿಯೇ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಮೇಲೆ ಕಾರು ಬಿದ್ದಿದೆ. ಆ ವ್ಯಕ್ತಿ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಮೂಲಕ ಮೂವರು ರಸ್ತೆ ಅಪಘಾತದಲ್ಲಿ ಮೃತಪಟ್ಟಂತಾಗಿದೆ.