ಈ ವರ್ಷದ ಜೂನ್(June)ನಲ್ಲಿ ಕ್ರಿಶ್ ಸಿನಿಮಾ(Krrish Cinema)ದ 15ನೇ ವರ್ಷದ ಸಂಭ್ರಮ ಆಚರಿಸಿದ ಹೃತಿಕ್ ರೋಶನ್(Hrithik Roshan ), ಕ್ರಿಶ್ 4(Krrish-4) ಚಿತ್ರದ ಘೋಷಣೆಯನ್ನು ಕೂಡ ಮಾಡಿದ್ದರು. “ಹಿಂದಿನದ್ದು ಮುಗಿದಿದೆ ಭವಿಷ್ಯ ಏನನ್ನು ಹೊತ್ತು ತರಲಿದೆ ನೋಡೋಣ. #15YearsOfKrrish #Krrish4“ ಎಂದು ಅಡಿ ಬರಹವುಳ್ಳ ಪೋಸ್ಟ್ ಮೂಲಕ ಅವರು ಚಿತ್ರದ ಕಥಾ ವಸ್ತುವಿನ ಬಗ್ಗೆ ಚಿಕ್ಕ ಸುಳಿವನ್ನು ಬಿಟ್ಟುಕೊಟ್ಟಿದ್ದರು. 2013ರಲ್ಲಿ ಬಿಡುಗಡೆ ಆಗಿದ್ದ ಕ್ರಿಶ್ 3ರಲ್ಲಿ, ಹೃತಿಕ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು ಮತ್ತು ಪ್ರಿಯಾಂಕ ಚೋಪ್ರಾ(Priyanka Chopra), ವಿವೇಕ್ ಒಬೆರಾಯ್(Vivek Oberoi) ಮತ್ತು ಕಂಗನಾ ರಣಾವತ್(Kangana Ranaut) ಅವರನ್ನು ಒಳಗೊಂಡಿದ್ದ ತಾರಾಗಣವಿತ್ತು. ಆ ವರ್ಷ ಬಾಕ್ಸ್ ಆಫೀಸ್(Box Office)ನಲ್ಲಿ ಜಯಭೇರಿ ಬಾರಿಸಿದ್ದ ಚಿತ್ರವದು. ಕ್ರಿಶ್ 4ರಲ್ಲಿ ಏನೆಲ್ಲಾ ಇರಲಿದೆ ? ಇಲ್ಲಿದೆ ಮಾಹಿತಿ.
ಕ್ರಿಶ್ 4ಗೆ ಹೃತಿಕ್ ಸಿದ್ಧತೆ
ಸಂಗೀತ ನಿರ್ದೇಶಕ ರಾಜೇಶ್ ರೋಶನ್, ಕ್ರಿಶ್ 4ರ ಸಂಗೀತದ ಬಗ್ಗೆ ಮಾತನಾಡುತ್ತಾ, “ ನಾವು ಕ್ರಿಶ್ 4ರ ಸಂಗೀತದ ಕೆಲಸವನ್ನು ಇನ್ನೂ ಆರಂಭಿಸಿಲ್ಲ, ಆದರೆ ಅಂತಿಮ ಸ್ಕ್ರಿಪ್ಟ್ ಸಿದ್ಧವಾದ ಕೂಡಲೇ ಆರಂಭಿಸುತ್ತೇವೆ. ರಾಕೇಶ್ ಅವರು ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದಾರೆ. ಸಮಯ ಕಳೆದಂತೆ ನೀವು ಕೂಡ ಶಬ್ಧ ಮತ್ತು ಸಂಗೀತ ಹೊಸ ತಂತ್ರಗಳೊಂದಿಗೆ ಬೆಳೆಯುತ್ತೀರಿ, ಅದನ್ನು ನಾನು ಕ್ರಿಶ್ 4ರ ಸಂಯೋಜನೆಯಲ್ಲಿ ಬಳಸಿಕೊಳ್ಳಲು ಬಯಸುತ್ತೇನೆ. ಈಗ ಪ್ರತಿ ಮನೆಗಳಲ್ಲೂ ಸಂಗೀತ ಸಿಸ್ಟಮ್ ಹೆಚ್ಚು ಸುಧಾರಿತವಾಗಿದೆ, ಈ ಆವಿಷ್ಕಾರಗಳಿಗೆ ಹೊಂದಿಕೊಳ್ಳಲು ಆಧುನಿಕ ತಂತ್ರಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಬಹುಶಃ ಹೃತಿಕ್ ಹಾಡಬಹುದು, ಒಂದು ಹಾಡಂತೂ ಖಂಡಿತಾ ಇರುತ್ತದೆ“ ಎಂದು ಹೇಳಿದ್ದಾರೆ.
ಈ ಸೂಪರ್ ಹೀರೋ ಸಿನಿಮಾದ 4ನೇ ಭಾಗವು ಟೈಮ್ ಟ್ರಾವೆಲ್ ಕುರಿತ ಕಥೆಯನ್ನು ಕೂಡ ಹೊಂದಿದೆ. “ಕೋಯಿ ಮಿಲ್ ಗಯಾ ಮತ್ತು ಕ್ರಿಶ್ ಒಂದೇ ಕಡೆ ಸೇರುವಂತ ಕಥೆಯೊಂದನ್ನು ಹಣೆಯಲು ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ. ಜಾದೂವನ್ನು ಹಿಂದಕ್ಕೆ ತರುವ ಆಲೋಚನೆ ಜಾರಿಯಲ್ಲಿರುವಾಗ, ನಿರ್ಮಾಪಕರು ಸಮಯದ ಪ್ರಯಾಣದ ಪರಿಕಲ್ಪನೆಯ ಗುರಿ ಹೊಂದಿದ್ದಾರೆ. ಕ್ರಿಶ್ ಸರಣಿ ಬಲವಾದ ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿದೆ ಮತ್ತು ಎಲ್ಲಾ ಸಿನಿಮಾಗಳ ಮೂಲಕ ಕಾಲದ ಅನುಕ್ರಮವಾದ ಪ್ರಾಮುಖ್ಯತೆ ಹೊಂದಿದೆ. ಕೋಯಿ ಮಿಲ್ ಗಯಾದಲ್ಲಿಮ ರೋಹಿತ್ ಮೆಹರಾ ಜಾದೂ ಜೊತೆ ಸಂವಹನ ನಡೆಸಲು ತನ್ನ ತಂದೆಯ ಸಲಕರಣೆಗಳನ್ನು ಬಳಸುತ್ತಾನೆ, ಆದರೆ ಕ್ರಿಶ್‍ನಲ್ಲಿ ರೋಹಿತ್ ಸ್ವಂತ ಆಸಕ್ತಿಯಿಂದ ಟೈಮ್ ಮೆಶಿನ್ ಅಭಿವೃದ್ಧಿ ಪಡಿಸುತ್ತಾನೆ. ಟೈಮ್ ಟ್ರಾವೆಲ್ ಕ್ರಿಶ್ 4ರ ಪ್ರಮುಖ ಅಂಶವಾಗಿದೆ” ಎಂದು ಮೂಲಗಳು ತಿಳಿಸಿವೆ.