ಸಿನಿಮಾಸುದ್ದಿ

ಮಗನ ‘ಹೃದಯಂ‘ ಚಿತ್ರದ ದೃಶ್ಯ ಹಂಚಿಕೊಂಡ ನಟ ಮೋಹನ್ ಲಾಲ್..!

ಮಲೆಯಾಳಿಗಳು ಮತ್ತು ಇತರ ಮಲೆಯಾಳಂ ಚಿತ್ರಾಭಿಮಾನಿಗಳು ಅತ್ಯಂತ ನಿರೀಕ್ಷೆಯಿಂದ ಕಾಯುತ್ತಿರುವ ಮಾಲಿವುಡ್‍ನ (Mollywood) ಸಿನಿಮಾಗಳ ಪಟ್ಟಿಯಲ್ಲಿ, ಹೃದಯಂ (Hridayam) ಕೂಡ ಒಂದು. ರೋಮ್ಯಾಂಟಿಕ್ ಕಥಾ ಹಂದರವುಳ್ಳ ಈ ಸಿನಿಮಾದಲ್ಲಿ ಪ್ರಣವ್ ಮೋಹನ್‍ಲಾಲ್ (Pranav Mohanlal) ಮತ್ತು ಕಲ್ಯಾಣಿ ಪ್ರಿಯದರ್ಶನ್ (Kalyani Priyadarshini) ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಣವ್ ತಂದೆ ನಟ ಮೋಹನ್ ಲಾಲ್ (Mohanlal), ಈ ಚಿತ್ರದ ದೃಶ್ಯದ ತುಣುಕನ್ನು ಇಂದು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದಾರೆ.

ನಟ ಮೋಹನ್ ಲಾಲ್ ಅವರು, ಸಾಮಾಜಿಕ ಮಾಧ್ಯಮದ ತಮ್ಮ ಅಧಿಕೃತ ಖಾತೆಗಳ ಮೂಲಕ ಹೃದಯಂ ಚಿತ್ರದ ದೃಶ್ಯದ ತುಣುಕನ್ನು ಹಂಚಿಕೊಂಡಿದ್ದಾರೆ. ಮೋಹನ್ ಲಾಲ್ ಹಂಚಿಕೊಂಡಿರುವ ಆ ವಿಡಿಯೋ ದೃಶ್ಯದಲ್ಲಿ ಮನಸ್ಸನ್ನು ತಟ್ಟುವ ಹಿತವಾದ ಸಂಗೀತ ಮತ್ತು ಜೋಡಿಗಳು ಅಗಲುವ ಸನ್ನಿವೇಶ ತೋರಿಸಲಾಗಿದೆ. ಈ ರೊಮ್ಯಾಂಟಿಕ್ ಸಿನಿಮಾ , ಅರುಣ್ (ಪ್ರಣವ್ ಮೋಹನ್ ಲಾಲ್ ) ಮತ್ತು ದರ್ಶನಾ (ದರ್ಶನ ರಾಜೇಂದ್ರನ್) ಎಂಬ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕಥೆಯನ್ನು ಆಧರಿಸಿದೆ.

ಹೃದಯಂ ಸಿನಿಮಾ 2020ರಲ್ಲಿ ಬಿಡುಗಡೆ ಆಗಬೇಕಿತ್ತು, ಆದರೆ ಬಹಳಷ್ಟು ಸಿನಿಮಾಗಳಂತೆ, ಈ ಚಿತ್ರದ ಬಿಡುಗಡೆ ಕೂಡ ಕೊರೋನಾ ಸಾಂಕ್ರಾಮಿಕದ ಕಾರಣದಿಂದ ಹಲವಾರು ಬಾರಿ ಮುಂದೂಡಲ್ಪಟ್ಟಿತ್ತು. ಈ ಸಿನಿಮಾವನ್ನು 2022ರ ಜನವರಿ ತಿಂಗಳಲ್ಲಿ ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಮಾಡುವ ಆಶಯವನ್ನು ಚಿತ್ರ ತಂಡ ಹೊಂದಿದೆ, ಆದರೆ ಇನ್ನೂ ಸಿನಿಮಾ ಬಿಡುಗಡೆಯ ಅಧಿಕೃತ ದಿನಾಂಕ ನಿಗದಿ ಆಗಿಲ್ಲ.

Related Articles

Leave a Reply

Your email address will not be published. Required fields are marked *

Back to top button