ದೇಶ
Trending

ಕಾನೂನು

ತಾಯಿ-ತಂದೆ ಆಸ್ತಿಯಲ್ಲಿ ಪಾಲು ಕೇಳಿ ಮಕ್ಕಳು ನ್ಯಾಯಾಲಯದ ಮೊರೆ ಹೋಗುತ್ತಾರೆ. ಅದೇ ರೀತಿ ಮಕ್ಕಳ ಆಸ್ತಿಯಲ್ಲಿ ಪೋಷಕರಿಗೆ ಪಾಲು ಕೇಳುವ ಅಧಿಕಾರ ಇದೆಯಾ? ಕಾನೂನು ಏನು ಹೇಳುತ್ತದೆ?

ತಂದೆ-ತಾಯಿ ಆಸ್ತಿಯಲ್ಲಿ ಮಕ್ಕಳಿಗೆ ಪಾಲು ಎಂಬುದರ ಬಗ್ಗೆ ಕೇಳಿರುತ್ತೇವೆ. ಆಸ್ತಿಯಲ್ಲಿ ಇರೋ ಮಕ್ಕಳಿಗೆ ಎಷ್ಟು ಪ್ರಮಾಣದಲ್ಲಿ ಹಂಚಿಕೆಯಾಗಬೇಕು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ. ಆದ್ರೆ ಮಕ್ಕಳ ಮಾಡಿರುವ ಆಸ್ತಿಯಲ್ಲಿ ಪೋಷಕರಿಗಿರುವ ಅಧಿಕಾರದ ಕುರಿತು ಗೊತ್ತಿದೆಯಾ? ಪೋಷಕರು ಮಕ್ಕಳ ಆಸ್ತಿಯಲ್ಲಿ ತಮ್ಮ ಹಕ್ಕು ಕೇಳಬಹುದೇ? ತಂದೆ -ತಾಯಿಯ ಆಸ್ತಿಯಲ್ಲಿ ತಮ್ಮ ಹಕ್ಕನ್ನು ಅಥವಾ ಪಾಲನ್ನು ನೀಡಬೇಕೆಂದು ನ್ಯಾಯಾಲಯದ ಮೊರೆ ಹೋಗಿರುತ್ತಾರೆ. ಅದೇ ರೀತಿ ಪೋಷಕರು ಸಹ ನ್ಯಾಯಾಲಯದ ಮೊರೆ ಹೋಗಬಹುದೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಭಾರತೀಯ ಕಾನೂನು ಪ್ರಕಾರ, ಸಾಮಾನ್ಯ ಪರಿಸ್ಥಿತಿಯಲ್ಲಿ ತಂದೆ-ತಾಯಿ ತಮ್ಮ ಮಕ್ಕಳ ಆಸ್ತಿಯಲ್ಲಿ ಪಾಲು ಕೇಳುವ ಅಧಿಕಾರ ಹೊಂದಿರುವುದಿಲ್ಲ. ಆದ್ರೆ ಕೆಲವು ವಿಶೇಷ ಪ್ರಕರಣಗಳಲ್ಲಿ ಮಾತ್ರ ಪೋಷಕರು ಮಕ್ಕಳ ಆಸ್ತಿಯಲ್ಲಿ ಅಧಿಕಾರವನ್ನು ಕೇಳಬಹುದಾಗಿದೆ. ಈ ಸಂಬಂಧ ಸರ್ಕಾರ ಹಿಂದೂ ಉತ್ತರಾಧಿಕಾರತ್ವ ಅಧಿನಿಯಮ 2005ರ ಬಗ್ಗೆ ಅಧ್ಯಯನ ನಡೆಸಿತ್ತು. ಇದೇ ಅಧಿನಿಯಮ ವಿಭಾಗ-8ರಲ್ಲಿ ಪೋಷಕರು ಹಕ್ಕು ಮತ್ತು ಅಧಿಕಾರದ ಬಗ್ಗೆ ವ್ಯಾಖ್ಯಾನಿಸಲಾಗಿದೆ. ಇದರಲ್ಲಿ ಪೋಷಕರು ಮಕ್ಕಳ ಆಸ್ತಿಯಲ್ಲಿ ಅಧಿಕಾರ ಕೇಳಬಹುದು ಎಂದು ಹೇಳಲಾಗಿದೆ.

ಯಾವಾಗ ಸಿಗುತ್ತೆ ಅಧಿಕಾರ?ಹಿಂದೂ ಉತ್ತರಾಧಿಕಾರತ್ವ ಕಾನೂನಿನ ಪ್ರಕಾರ, ಮಕ್ಕಳು ದುರ್ಘಟನೆ ಅಥವಾ ಅನಾರೋಗ್ಯ ಅಥವಾ ಯಾವುದೇ ಕಾರಣದಿಂದ ಮೃತರಾದ್ರೆ, ಈ ಸಮಯದಲ್ಲಿ ಅವರು ಅವಿವಾಹಿತ/ಅಪ್ರಾಪ್ತರಾಗಿದ್ದರೆ ಪೋಷಕರು ಅಧಿಕಾರಕ್ಕಾಗಿ ಧಾವೆ ಹೂಡಬಹುದು. ಇಲ್ಲಿ ಇನ್ನೂ ಒಂದು ವಿಷಯವನ್ನು ಉಲ್ಲೇಖಿಸಲಾಗಿದ್ದು, ಈ ಪರಿಸ್ಥಿತಿಯಲ್ಲಿ ಮಕ್ಕಳ ಆಸ್ತಿಯ ಮೇಲೆ ಪೋಷಕರಿಗೆ ಸಂಪೂರ್ಣ ಹಕ್ಕು ಸಿಗುವುದಿಲ್ಲ. ಬದಲಿಗೆ ತಾಯಿ ಮತ್ತು ತಂದೆ ಇಬ್ಬರಿಗೂ ಪ್ರತ್ಯೇಕ ಹಕ್ಕು ಇರುತ್ತದೆ. ಮೊದಲು ತಾಯಿ, ನಂತರ ತಂದೆ!ಮಕ್ಕಳ ಆಸ್ತಿಯಲ್ಲಿ ಮೊದಲು ತಾಯಿಗೆ ಆದ್ಯತೆ ನೀಡಲಾಗುತ್ತದೆ. ಈ ಸಮಯದಲ್ಲಿ ಮಕ್ಕಳ ಆಸ್ತಿಯಲ್ಲಿ ತಾಯಿ ಮೊದಲ ಮತ್ತು ತಂದೆ ಎರಡನೇ ಉತ್ತರಾಧಿಕಾರಿ ಆಗಿರುತ್ತಾರೆ. ಮೊದಲ ಉತ್ತರಾಧಿಕಾರಿ ಇಲ್ಲದಿರುವ ಪ್ರಕರಣದಲ್ಲಿ ತಂದೆಯೇ ವಾರಸುದಾರ ಎಂದು ಪರಿಗಣಿಸಲಾಗುತ್ತದೆ. ಈ ರೀತಿಯಾದಾಗ ಇನ್ನಿತರ ಉತ್ತರಾಧಿಕಾರಿಗಳನ್ನು ಸಮಾನ ಪಾಲುದಾರರು ಅಥವಾ ವಾರಸುದಾರರು ಎಂದು ಪರಿಗಣಿಸಲಾಗುತ್ತದೆ.

ಮಗ ಮತ್ತು ಮಗಳಿಗೆ ಪ್ರತ್ಯೇಕ ರೂಲ್ಸ್ಹಿಂದೂ ಉತ್ತರಾಧಿಕಾರ ಕಾನೂನು ಹೇಳುವ ಪ್ರಕಾರ, ಮಕ್ಕಳ ಆಸ್ತಿಯ ಮೇಲೆ ಅಧಿಕಾರ ಹೊಂದುವುದು ಹೊಂದಿರುವ ಸಂಬಂಧದ ಮೇಲೆ ನಿರ್ಧರಿತವಾಗುತ್ತದೆ. ಮಗ ಮತ್ತು ಮಗಳು ಆಸ್ತಿಯಲ್ಲಿ ಅಧಿಕಾರ ಪಡೆಯುವ ಕಾನೂನು ಪ್ರತ್ಯೇಕವಾಗಿವೆ. ಮಗಳ ಆಸ್ತಿಯಾಗಿದ್ರೆ ಅದರ ಮೇಲೆ ಆಕೆಯ ಮಕ್ಕಳು ಮತ್ತು ಗಂಡ ಮೊದಲ ವಾರಸುದಾರರಾಗಿರುತ್ತಾರೆ. ಮಗಳು ಅವಿವಾಹಿತೆಯಾಗಿದ್ರೆ ಆಸ್ತಿಗೆ ತಾಯಿಯೇ ಮೊದಲ ವಾರಸುದಾರಳಾಗಿರುತ್ತಾಳೆ. ತಂದೆ ಎರಡನೇ ಸ್ಥಾನದಲ್ಲಿರುತ್ತಾರೆ. ಮಗಳಿಗೆ ಮಕ್ಕಳು ಇರದಿದ್ದರೆ ಆಸ್ತಿ ಆಕೆಯ ಗಂಡನಿಗೆ ಹೋಗುತ್ತದೆ. ಅಂದರೆ ಮಗಳ ವಿಷಯದಲ್ಲಿ ಹೆತ್ತವರು ಅಂತಿಮವಾಗಿ ಆಸ್ತಿಯ ಹಕ್ಕು ಪಡೆಯುವ ಹಕ್ಕನ್ನು ಪಡೆಯುತ್ತಾರೆ.

ವಸಂತ ಏನ್ ಎಸ್ ಕಾನೂನು ಸಲಹೆಗಾರರು

Related Articles

Leave a Reply

Your email address will not be published. Required fields are marked *

Back to top button