
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ ) ಬೂದನೂರು ಹೊಸಹಳ್ಳಿ ತಾಲೂಕು, ಡಿ ಆರ್ ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ವರ್ಧಮಾನ್ ಐ ಆಸ್ಪತ್ರೆ ಮಂಡ್ಯ ಇವರ ಸಹಭಾಗಿತ್ವದಲ್ಲಿ ಕನ್ನಲ್ಲಿ ಗ್ರಾಮದ ಡೈರಿ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಡಿ ಆರ್ ಎಂ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ.ರವಿ ಕುಮಾರ್ ರವರು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಉತ್ತಮ ಆರೋಗ್ಯ ಮನುಷ್ಯನ ಅತೀ ಮುಖ್ಯ ಜವಾಬ್ದಾರಿ. ಅನಾರೋಗ್ಯ ಬಂದಲ್ಲಿ ಕೂಡಲೇ ಆಸ್ಪತ್ರೆಗಳಿಗೆ ಭೇಟಿ ನೀಡಿ ಗುಣ ಮುಖವಾಗುವಂತೆ ಎಚ್ಚರಿಕೆ ವಹಿಸಬೇಕು, ಸಂಘ ಸಂಸ್ಥೆಗಳ ಮೂಲಕ ಅರೋಗ್ಯ ವಿಮೆಗೆ ಸಂಬಂದಿಸಿದ ಕಾರ್ಡ್ ಬಳಸಿಕೊಳ್ಳಬೇಕು, ನಿಯಮ ಮತ್ತು ಸೂಚನೆಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.ಈ ದಿನ ಉಚಿತವಾಗಿ ಬಿಪಿ. ಶುಗರ್ ತಪಾಸಣೆ,ಕಣ್ಣಿನ ತಪಾಸಣೆ, ರಕ್ತ ತಪಾಸಣೆ, ಇ ಸಿ ಜಿ ಮಾಡಲಾಗುತ್ತಿದ್ದು ಎಲ್ಲರೂ ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕು ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಡಾ.ವಿಷ್ಣು ಹಾಗೂ ಇತರ ವೈದಾಧಿಕಾರಿಗಳು ಶಂಕರ್,ಟಿ. ಪಿ.ಚಂದ್ರು ಹಾಗೂ ಆರೋಗ್ಯ ಸಹಾಯಕಿಯರು, ವಲಯದ ಮೇಲ್ವಿಚಾರಕ ಅಶೋಕ್,ಸೇವಾಪ್ರತಿನಿಧಿಗಳು , ವಿ ಎಲ್ ಇ ಸೇವಾದಾರರು. ಆಶಾಕಾರ್ಯಕರ್ತೆಯರು. ಊರಿನವರು ಉಪಸ್ಥಿತರಿದ್ದರು.ಈ ಶಿಬಿರದಲ್ಲಿ 150 ಕ್ಕೂ ಹೆಚ್ಚಿನ ಜನರು ತಪಾಸಣೆಯಲ್ಲಿ ಭಾಗಿಯಾದರು.