ಭಾಷೆ, ನೆಲ, ಜಲ, ಗಡಿ ರಕ್ಷಣೆ ವಿಚಾರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸದಾ ಸಿದ್ಧವಾಗಿರುತ್ತದೆ: ಎಂ.ಎಸ್.ಶ್ರೀನಿವಾಸ್
ಮಾಲೂರು:
ಆಟೋ ಚಾಲಕರು ಸಂಚಾರ ನಿಯಮ ಪಾಲನೆ ಜತೆಗೆ ಸಮವಸ್ತ್ರಧರಿಸಿ ಕಡ್ಡಾಯವಾಗಿ ವಿಮೆ ಮಾಡಿಸಿ ಕೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣದ ತಾಲ್ಲೂಕು ಅಧ್ಯಕ್ಷ ಎಂ.ಎಸ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಮುಖ್ಯ ರಸ್ತೆಯ ಮಾರಿಕಾಂಬ ವೃತ್ತದ ಬಳಿ ಇರುವ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣದ ಆಟೋ ಘಟಕದ ವತಿಯಿಂದ ಶುಕ್ರವಾರ ಹಮ್ಮಿಕೊoಡಿದ್ದ 69ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣದ ತಾಲೂಕು ಅಧ್ಯಕ್ಷ ಎಂ ಎಸ್ ಶ್ರೀನಿವಾಸ್ ಕೋಲಾರ ಜಿಲ್ಲೆ ಆಂದ್ರಪ್ರದೇಶ ಹಾಗೂ ತಮಿಳುನಾಡು ಗಡಿಯಲ್ಲಿದೆ. ಮಾಲೂರು ಗಡಿ ತಾಲ್ಲೂಕು ಆದರೂ ಕನ್ನಡಭಾಷೆ ಮಾತಾಡುವುದರಲ್ಲಿ ಏನು ಕೊರತೆ ಇಲ್ಲ ಎಂಬುದು ಹೆಮ್ಮೆಯ ವಿಷಯವಾಗಿದೆ ಜೊತೆಗೆ ಭಾಷೆ, ಜಲ ನೆಲ, ಗಡಿ ರಕ್ಷಣೆ ವಿಚಾರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣ ಸದಾ ಸಿದ್ದ ಎಂದು ತಿಳಿಸಿದರು.
ಆಟೋ ಚಾಲಕರನ್ನು ಅವರ ಇಡೀ ಕುಟುಂಬದವರು ಅವಲಂಬಿಸಿ ಕೊಂಡಿರುವುದರಿಂದ ಆಟೋಚಾಲಕರು ಸರ್ಕಾರದ ಸಾರಿಗೆ ಸಂಚಾರಿ ನಿಯಮ ಪಾಲನೆ ಮಾಡಬೇಕು ಮತ್ತು ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಆಟೋಚಾಲಕರು ತಮ್ಮನ್ನೇ ನಂಬಿರುವ ಕುಟುಂಬ ಇರುವುದರಿಂದ ತಮ್ಮ ಹೆಸರಲ್ಲಿ ಹಾಗೂ ಆಟೋಗೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಪುರಸಭಾ ಅಧ್ಯಕ್ಷೆ ಕೋಮಲ್ ನಾರಾಯಣ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಆಟೋ ಚಾಲಕರ ಸೇವೆ ಅತ್ಯಂತ ಒಳ್ಳೆ ಸೇವೆ, ತಮ್ಮನ್ನು ನಂಬಿ ಬರುವ ಪ್ರಯಾಣಕರನ್ನು ಅವರು ಸೇರಬೇಕಾದ ಸ್ಥಳಕ್ಕೆ ಪ್ರಾಮಾಣಿಕವಾಗಿ ಕರದುಕೊಂಡು ಹೋಗುತ್ತೀರಿ ನಿಮಗೆ ಭಗವಂತ ಮತ್ತು ತಾಯಿ ಭುವನೇಶ್ವರಿ ಹೆಚ್ಚು ಆರೋಗ್ಯ ಭಾಗ್ಯ ನೀಡಲಿ ಎಂದು ಶುಭಕೋರಿದರು.
ಈ ಕಾರ್ಯಕ್ರಮದಲ್ಲಿ ಆರಕ್ಷಕ ನಿರೀಕ್ಷಕರು ವಸಂತ್, ಅಧ್ಯಕ್ಷೆ ಕೋಮಲ್ ನಾರಾಯಣ್, ಸಹಾಯಕ ಸಬ್ ಇನ್ಸ್ಪೆಕ್ಟರ್, ಮುನೇಗೌಡ, ಜಿಲ್ಲಾ ಉಪಾಧ್ಯಕ್ಷ ಎನ್.ವಿ.ಮುರಳಿಧರ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎ.ರಾಜಪ್ಪ, ಗೌರವಾಧ್ಯಕ್ಷರು ಶಂಕರಪ್ಪ, ಉಪಾಧ್ಯಕ್ಷರಾದ ರಾಮನಾಥಪುರ ನಾರಾಯಣಸ್ವಾಮಿ, ತೊರ್ನಹಳ್ಳಿ ರಾಮಕೃಷ್ಣಪ್ಪ,
ತಾಲೂಕು ಪ್ರಧಾನ ಕಾರ್ಯದರ್ಶಿ ಮುನಿರಾಜು, ಯುವ ಘಟಕ ಅಧ್ಯಕ್ಷ ಸಂತೋಷ್, ರಾಮಾಂಜಿ, ಶಂಕರ್, ನಗರ ಘಟಕ ಅಧ್ಯಕ್ಷ ಸಿ.ಎನ್.ನವೀನ್, ಎಂ.ಸಿ.ರವಿ, ಜಬಿವುಲ್ಲಾ, ಹುಲ್ಕೂರು ತಿಮ್ಮರಾಯಪ್ಪ, ಆಟೋ ಘಟಕದ ಅಧ್ಯಕ್ಷ ಅಮೀರ್, ನಾಗರಾಜ್, ವೆಂಕಟೇಶಪ್ಪ, ವೆಂಕಟೇಶ್, ನಾಗಪ್ಪ, ವಿಜಿ, ನಾಗೇಶ್ ಇತರರು ಹಾಜರಿದ್ದರು.