ಹಿಂಗೋಲಿ, ನ.18- ಮಹಾರಾಷ್ಟ್ರದ ಹಿಂಗೋಲಿ ಕಂದಾಯ ಇಲಾಖೆಯು ಲೇಸರ್ ಇಂಟರ್‍ಫೆರೋಮೀಟರ್ ಗ್ರಾವಿಟೇಷನಲ್ ವೇವ್ ಅಬ್ಸರ್ವೇಟರಿ (ಎಲ್‍ಐಜಿಒ) ಯೋಜನೆಯ ಪ್ರಾಧಿಕಾರಿಗಳಿಗೆ ಇಲ್ಲಿ 25 ಹೆಕ್ಟೇರ್ ಭೂಮಿಯನ್ನು ಹಸ್ತಾಂತರಿಸಿದೆ. ಭಾರತದಲ್ಲಿ ಈ ಬಗೆಯ ಯೋಜನೆ ಇದೇ ಪ್ರಥಮ ವಾದದ್ದಾಗಿದೆ ಎಂದು ಹಿರಿಯ ಜಿಲ್ಲಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತುತ ಅಮೆರಿಕದಲ್ಲಿ ಇಂಥ ಎರಡು ಪ್ರಯೋಗಾಲಯಗಳಿವೆ (ವಾಷಿಂಗ್ಟನ್‍ನ ಹ್ಯಾನ್‍ಫೋರ್ಡ್‍ನಲ್ಲಿ ಮತ್ತು ಲೂಸಿಯಾದ ಲಿವಿಂಗ್‍ಸ್ಟನ್‍ನಲ್ಲಿ) ಇವು ಗುರುತ್ವಾಕರ್ಷಣಾ ಅಲೆಗಳನ್ನು ಅಧ್ಯಯನ ಮಾಡುತ್ತವೆ.ಗುರುತ್ವಾಕರ್ಷಣಾ ತರಂಗಗಳ ಸಂಶೋಧನೆಗಾಗಿ ಲಿಗೋ ಇಂಡಿಯಾ ಮೆಗಾ ವಿಜ್ಞಾನ ಪ್ರಸ್ತಾವನೆಗೆ 2016ರಲ್ಲಿ ಕೇಂದ್ರ ಸರ್ಕಾರವು ತಾತ್ವಿಕ ಒಪ್ಪಿಗೆ ನೀಡಿತ್ತು.