ದೇಶ

“ಭವಿಷ್ಯದ ಯುದ್ಧಕ್ಕೆ ವಾಯುಸೇನಾ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ”

ನವದೆಹಲಿ, ಅ.1- ವಾಯು ಪಡೆಯನ್ನು ಬಳಸಿಕೊಂಡು ದೇಶ ರಕ್ಷಿಸುವುದು ನಮ್ಮ ಮೊದಲ ಆದ್ಯತೆ, ಜೊತೆಯಲ್ಲೇ ಸೂಕ್ತ ತರಬೇತಿಯೊಂದಿಗೆ ಭವಿಷ್ಯದ ಯುದ್ಧಕ್ಕೆ ಸಜ್ಜುಗೊಳ್ಳಲು ನಾವು ಪೂರ್ಣ ಪ್ರಮಾಣದ ಸಾಮಥ್ರ್ಯ ಹೊಂದಿದ್ದೇವೆ ಎಂದು ವಾಯುಸೇನೆಯ ಮುಖ್ಯಸ್ಥ ವಿವೇಕ್ ರಾಮ್ ಚೌದರಿ ಹೇಳಿದ್ದಾರೆ.

ನಿರ್ಗಮಿತ ಏರ್ ಮಾರ್ಷೇಲ್ ಆರ್.ಕೆ.ಎಸ್.ಬದೋರಿಯಾ ಅವರ ಸ್ಥಾನಕ್ಕೆ ನೇಮಕವಾಗಿರುವ ವಿ.ಆರ್.ಚೌದರಿ ನಿನ್ನೆಯಷ್ಟೇ ಅಧಿಕಾರ ಸ್ವೀಕರಿಸಿದರು. ಇಂದು ಎಎನ್‍ಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ವಾಯುಪಡೆಯನ್ನು ಸಮರ್ಪಕ ಹಾಗೂ ಸರಿಯಾಗಿ ಬಳಕೆ ಮಾಡಿ ದೇಶವನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆ.

ಎರಡನೆಯದಾಗಿ ಭವಿಷ್ಯದ ಯುದ್ಧಕ್ಕೆ ಸಜ್ಜಾಗಲು ವಾಯುಸೇನೆಯ ಸಿಬ್ಬಂದಿಗಳನ್ನು ಪ್ರೇರೆಪಿಸುವುದು, ಅಗತ್ಯವಾದ ತರಬೇತಿ ಮತ್ತು ಶಸ್ತ್ರಾಸ್ತ್ರಾ ನೀಡಿ ಸಿದ್ದ ಪಡಿಸುವುದು ನಮ್ಮ ಆದ್ಯತೆಯಾಗಿದೆ ಎಂದಿದ್ದಾರೆ. ಆತ್ಮನಿರ್ಭರ ಭಾರತದಲ್ಲಿ ಭಾರತೀಯ ಸೇನೆ ಎಲ್ಲಾ ಆತ್ಮಗೌರವಗಳೊಂದಿಗೆ ಸ್ವಾವಲಂಭಿಯಾಗಲು ಮಹತ್ವದ ಹೆಜ್ಜೆ ಇಡಲಾಗುತ್ತದೆ. ಗಡಿಯಲ್ಲಿ ಎದುರಾಗುವ ವಿಕೋಪ ಪರಿಸ್ಥಿತಿಗಳನ್ನು ನಿಭಾಯಿಸಲು ನಾವು ಪೂರ್ಣ ಪ್ರಮಾಣದ ಸಾಮಥ್ರ್ಯ ಹೊಂದಿದ್ದೇವೆ.

ಇರುವ ಸಲಕರಣೆಗಳನ್ನೇ ಬಳಸಿಕೊಂಡು ನಮ್ಮ ಮಾನವ ಸಂಪನ್ಮೂಲಕ್ಕೆ ಸರಿಯಾದ ತರಬೇತಿ ನೀಡಬೇಕಿದೆ ಎಂದು ಹೇಳಿದರು. ವಾಯುಸೇನೆ 83 ಲಘು ಯುದ್ಧ ವಿಮಾನಗಳು (ಎಲ್‍ಸಿಎ), ಅತ್ಯಾಧುನಿಕ ಮಧ್ಯಮ ಯುದ್ಧ ವಿಮಾನಗಳು ಮತ್ತು ಎಂಕೆ2 ಲಘು ಯುದ್ಧ ವಿಮಾನಗಳನ್ನು ಖರೀದಿಸಲು ವಾಯುಸೇನೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಹೇಳಿದರು.

ಹೆಚ್ಚುವರಿ ವಾಯುಮಾರ್ಗದರ್ಶಿ ಆಯುಧಗಳು ಮತ್ತು ಲಭ್ಯ ಇರುವ ಒಟ್ಟಾರೆ ಶಸ್ತ್ರಾಸ್ತ್ರಾಗಳು ಉತ್ತಮ ಸ್ಥಿತಿಯಲ್ಲಿವೆ. ಮುಂದಿನ ದಿನಗಳಲ್ಲಿ ಆತ್ಮನಿರ್ಭರ ಭಾರತದ ಅಡಿ ನಮಗೆ ಅಗತ್ಯ ಸಲಕರಣೆಗಳನ್ನು ಖರೀದಿಸಲು ಆಧ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button