ವಿದೇಶ
ಬ್ರಿಟನ್ ಸಂಸತ್ ನಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪ : ಆಕ್ರೋಶ ವ್ಯಕ್ತಪಡಿಸಿದ ಭಾರತ
ಲಂಡನ್ : ಯುಕೆ ಆಲ್‌ಪಾರ್ಟಿ ಮಾರ್ಲಿಮೆಂಟರಿ ಗ್ರೂಪ್ ಸದಸ್ಯರು ಬ್ರಿಟನ್ ಸಂಸತ್‌ನಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪ ಮಾಡಿರುವುದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಭಾರತ ಕಾಶ್ಮೀರವು ಭಾರತದ ಅವಿಭಾಜ್ಯ ಪ್ರದೇಶವಾಗಿದೆ, ಯಾವುದೇ ವೇದಿಕೆಯಲ್ಲಾಗಲಿ ವಿಷಯ ಪ್ರಸ್ತಾಪಿಸುವ ಮೊದಲು ಆ ವಿಷಯ ಕುರಿತ ವಾಸ್ತವಾಂಶದ ಅರಿವಿರಬೇಕು ಎಂದು ಭಾರತ ಹೇಳಿದೆ.
ಬ್ರಿಟನ್ ಸಂಸತ್‌ನ ಕೆಳಮನೆಯಲ್ಲಿ ಕೆಲವು ಸಂಸದರು ಕಾಶ್ಮೀರ ವಿಷಯ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಕೋರಿದ್ದವು. ಪಾಕಿಸ್ತಾನ ಮೂಲದ, ಲೇಬರ್ ಪಾರ್ಟಿ ಸಂಸದ ನಾಜ್ ಶಾ ಭಾರತದ ಪ್ರಧಾನಿ ಕುರಿತು ಬಳಸಿದ ಭಾಷೆ ವಿರುದ್ಧ ಭಾರತ ಕಿಡಿ ಕಾರಿದೆ.
ಕಾಶ್ಮೀರ ವಿವಾದ ಕುರಿತು ಭಾರತ ಹಾಗೂ ಪಾಕಿಸ್ತಾನ ರಾಜಕೀಯವಾದ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈ ವಿಷಯದಲ್ಲಿ ಪರಿಹಾರ ಕ್ರಮ ಸೂಚಿಸುವುದು ಇಲ್ಲವೇ ಮಧ್ಯಸ್ಥಿಕೆ ವಹಿಸುವುದು ಬ್ರಿಟನ್‌ನ ಕೆಲಸವಲ್ಲ ಎಂದು ಹೇಳಿದ್ದಾರೆ.