ರಾಜ್ಯಸುದ್ದಿ

ಬೈ ಎಲೆಕ್ಷನ್​​ನಲ್ಲಿ BJPಯಿಂದ 1 ವೋಟಿಗೆ ₹10 ಸಾವಿರ? ವಿಡಿಯೋ ರಿಲೀಸ್ ಮಾಡಿದ DK Shivakumar..!

ಬೆಂಗಳೂರು: ರಾಜ್ಯದಲ್ಲಿ ಶನಿವಾರ (ಅ.30) ಸಿಂಧಗಿ ಹಾಗೂ ಹಾನಗಲ್​ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ (by election) ನಡೆಯುತ್ತಿದೆ. ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಮತದಾನಕ್ಕೆ 2 ದಿನ ಬಾಕಿ ಇರುವಾಗ ಬಿಜೆಪಿ ಒಂದು ವೋಟಿಗೆ 10 ಸಾವಿರ ರೂಪಾಯಿಗಳನ್ನು (10 thousand rupees for single vote ) ಮತದಾರರಿಗೆ ನೀಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar )​​ ಗಂಭೀರ ಆರೋಪ ಮಾಡಿದ್ದಾರೆ.

ಜೊತೆಗೆ ಮತದಾರರಿಗೆ ಕಮಲದ ಚಿಹ್ನೆ ಇರುವ ಕವರ್​ ಒಳಗೆ 2 ಸಾವಿರ ಮುಖಪುಟದ 5 ನೋಟುಗಳನ್ನು ನೀಡಿರುವುದು. ಮತದಾರರು ಅದನ್ನು ತೆಗೆದು ನೋಡುತ್ತಿರುವ 2 ವಿಡಿಯೋಗಳನ್ನು ಮಾಧ್ಯಮಗಳಿಗೆ ಡಿಕೆಶಿ ನೀಡಿದರು. ಒಂದು ವಿಡಿಯೋದಲ್ಲಿ ಮಹಿಳೆ ಕವರ್​ ತೆರೆದು ಹಣ ನೋಡಿದ್ರೆ, ಮತ್ತೊಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕುರ್ಚಿಯ ಮೇಲೆ ಕುಳಿತುಕೊಂಡು ಕವರ್​ ತೆಗೆದು ಹಣ ಎಣಿಸುತ್ತಿರುವ ದೃಶ್ಯ ಇದೆ. ಹಣದ ಕವರ್​ ಮೇಲೆ ಕಮಲದ ಚಿಹ್ನೆ, ಅಭ್ಯರ್ಥಿ ಫೋಟೋ ಇರುವುದನ್ನು ಕಾಣಬಹುದಾಗಿದೆ.

ಇಷ್ಟು ಭ್ರಷ್ಟ ಚುನಾವಣೆ, ಭ್ರಷ್ಟ ಪಕ್ಷ ನಾವ್ ನೋಡಿಲ್ಲ

ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ ಡಿಕೆಶಿ, ಸಿಂದಗಿ‌, ಹಾನಗಲ್ ಚುನಾವಣೆಯಲ್ಲಿ ಬಿಜೆಪಿ ವೋಟಿಗಾಗಿ ನೋಟಿನ ಮಳೆಯನ್ನು ಸುರಿಸುತ್ತಿದ್ದಾರೆ.  ಮತದಾರರಿಗೆ 5, 10 ಸಾವಿರ ಹಣ ಹಂಚಿಕೆ ಮಾಡಲಾಗುತ್ತಿದೆ. ಒಂದು ವೋಟಿಗೆ 10 ಸಾವಿರ ರೂಪಾಯಿ ಕೊಡುತ್ತಿದ್ದಾರೆ. ಬಿಜೆಪಿಯವರು ಈ ರೀತಿ ಚುನಾವಣೆ ಮಾಡ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದರು. ಈ ರೀತಿ ಚುನಾವಣೆ ಮಾಡಿದ್ರೆ ಜನಕ್ಕೆ ಏನ್ ಮಾಡ್ಬೇಕು ಅನ್ಕೋತೀರಿ. ಇಷ್ಟು ಭ್ರಷ್ಟ ಚುನಾವಣೆ, ಭ್ರಷ್ಟ ಪಕ್ಷ ನಾವ್ ನೋಡಿಲ್ಲ. ಅವರ ಪಾರ್ಟಿಯವರೇ ನಮಗೆ ಈ ವಿಡಿಯೋಗಳನ್ನ ಕಳುಹಿಸಿದ್ದಾರೆ. ದುಡ್ಡಿನ ಕವರ್, ಕಮಲದ ಫೋಟೋ ಇದೆ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳು ಪರ್ಮನೆಂಟ್ ಆಗಿ ಹುಬ್ಬಳ್ಳಿಯಲ್ಲೇ ಇರಲಿ. ಎಲ್ಲಾ ಮಂತ್ರಿಗಳೂ ಇದೇ ಕೆಲಸ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button