ಬೆಸ್ಕಾಂ ಜಲಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಸಾರ್ವಜನಿಕರಿಂದ ದೂರು.
ಬೆಂಗಳೂರಿನ ಎಂಜಿ ರಸ್ತೆಯ ಬೆಸ್ಕಾಂ ಕಚೇರಿಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಮತ್ತು ಎಸ್‌ಪಿ ವಂಶಿಕೃಷ್ಣ ನೇತೃತ್ವದಲ್ಲಿ ದಾಳಿ ಮಾಡಿದ್ದು, ಕಡತಗಳು ಮತ್ತು ಲೆಕ್ಕಪತ್ರಗಳನ್ನು ಪರಿಶೀಲಿಸಲಾಗುತ್ತಿದೆ. ಸಾರ್ವಜನಿಕರಿಂದ ದೂರುಗಳ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ದಾಳಿ ಮಾಡಲಾಗಿದೆ.
ಬೆಂಗಳೂರು, ಡಿಸೆಂಬರ್ 19: ಸಾರ್ವಜನಿಕರಿಂದ ದೂರು ಹಿನ್ನೆಲೆಯಲ್ಲಿ ನಗರದ ಎಂ.ಜಿ.ರಸ್ತೆಯ ಬೆಸ್ಕಾಂ ಮತ್ತು ಜಲಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರಿಂದ ದಾಳಿ ಮಾಡಲಾಗಿದೆ. ಬೆಂಗಳೂರಿನಾದ್ಯಂತ 45 ಕಡೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ. ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ, ಎಸ್‌ಪಿ ವಂಶಿಕೃಷ್ಣ ನೇತೃತ್ವದಲ್ಲಿ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ಸದ್ಯ ಬೆಸ್ಕಾಂ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರಿಂದ ಕಡತ ಪರಿಶೀಲಿಸಲಾಗುತ್ತಿದೆ.
ಇಂದು ಲೋಕಾಯುಕ್ತ ಅಧಿಕಾರಿಗಳಿಂದ ಬೃಹತ್ ದಾಳಿ ಮಾಡಲಾಗಿದ್ದು, ಸ್ವತಃ ಖುದ್ದು ಲೋಕಾಯುಕ್ತ ಬಿ.ಎಸ್ ಪಾಟೀಲ್ ಫೀಲ್ಡ್ ಗಿಳಿದ್ದರು. ಹಲವು ಬಾರಿ ಎರಡು ಇಲಾಖೆಗಳ ಮೇಲೆ ಲೋಕಾಯುಕ್ತಕ್ಕೆ ದೂರು ಬಂದ ಹಿನ್ನಲೆ ದಾಳಿ ಮಾಡಲಾಗಿದ್ದು, ಈ ಸಂಬಂಧ ಸಾರ್ವಜನಿಕರಿಂದ ಬೆಸ್ಕಾಂ ಮೇಲೆ 83, ಬಿಡ್ಯೂಎಸ್ಎಸ್ಬಿ ಮೇಲೆ 63 ದೂರುಗಳು ಬಂದಿವೆ. ಈ ಸಂಬಂಧ ಸರ್ಚ್ ವಾರೆಂಟ್ ಪಡೆದು ದಾಳಿ ಮಾಡಲಾಗಿದ್ದು, ಭಷ್ಟ್ರಚಾರ, ಅರ್ಜಿ ವಿಲೇವಾರಿಯಲ್ಲಿ ತಡೆ, ಸಾಕಷ್ಟು ಭಷ್ಟ್ರಚಾರ ಆರೋಪ ಕೇಳಿಬಂದಿದೆ.
ಅಧಿಕಾರಿಗೆ ತರಾಟೆ ಕ್ರೆಸೆಂಟ್ ಟವರ್ನಲ್ಲಿರುವ ಅಧೀಕ್ಷಕ ಎಂಜಿನಿಯರ್ ಕಚೇರಿಯಲ್ಲಿ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಹಾಗೂ ಅಧಿಕಾರಿಗಳಿಂದ ಪರಿಶೀಲನೆ ಮಾಡಲಾಗಿದೆ. ಅಧಿಕಾರಿಗಳ ರಿಜಿಸ್ಟರ್ ನಿರ್ವಾಹಣೆ ಮಾಡದ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಎಂ. ಅಮರನಾಥ್ ರೆಡ್ಡಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಬೆಂಗಳೂರು ಸೇರಿದಂತೆ ಹಲವೆಡೆ ಲೋಕಾಯುಕ್ತ ದಾಳಿ ಮಾಡಲಾಗಿತ್ತು. ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಪಡೆದಿದ್ದ ಲೋಕಾಯುಕ್ತ ಅಧಿಕಾರಿಗಳು ಬೆಳಂಬೆಳಗ್ಗೆ ಬೆಂಗಳೂರು ಸೇರಿ ರಾಜ್ಯದ ಆರು ಜಿಲ್ಲೆಯಲ್ಲಿ ಲೋಕಾಯುಕ್ತ ರೇಡ್ ಮಾಡಿದ್ದರು. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಗದಗ, ಕಲಬುರುಗಿ, ರಾಯಚೂರು, ತುಮಕೂರು ಮತ್ತು ಚಿತ್ರದುರ್ಗದಲ್ಲಿ ದಾಳಿ ನಡೆದಿದ್ದರೆಬೆಂಗಳೂರಿನಲ್ಲಿಯೇ 5 ಕಡೆ ದಾಳಿ ನಡೆಸಲಾಗಿತ್ತು.
ಮಾಹಿತಿ ಪ್ರಕಾರ ದೊಡ್ಡ ತಿಮ್ಮಿಂಗಿಲಗಳು ಅಂದರೆ ಅದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಹೆಚ್ಒ, ಸುನಿಲ್ ಕುಮಾರ್ ಮತ್ತು ಡಿಎಸ್ಪಿ ನಂಜುಡಯ್ಯ. ನಂಜುಂಡಯ್ಯ ಅವರ ರಾಜಾನುಕುಂಟೆ ಬಳಿ ಇರುವ ನಿವಾಸಕ್ಕೆ ಎಂಟ್ರಿ ಕೊಟ್ಟಿದ್ದ ಲೋಕಾ ಅಧಿಕಾರಿಗಳೇ ಶಾಕ್ ಆಗಿದ್ದರು. ಇದು ಮನೆಯೋ ಅಥವಾ ಅರಮನೆಯೋ ಎಂದು, ಮನೆಯೊಳಗೆ ಐಶಾರಾಮಿ ವ್ಯವಸ್ಥೆ, ಸ್ವಿಮ್ಮಿಂಗ್ ಪೂಲ್, ಜಿಮ್, ಥಿಯೇಟರ್ ನಂತಹ ಐಶಾರಾಮಿ ವ್ಯವಸ್ಥೆ ಮಾಡಿಕೊಂಡಿರುವುದು ಪತ್ತೆಯಾಗಿತ್ತು.
ನ್ಯೂಸ್10ಕನ್ನಡ ರಿಪೋರ್ಟರ್ – ಸುನಿಲ್ ಗೌಡ 🖋️