ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯರಿಂದ ರಾಜ್ಯಪಾಲರಿಗೆ ದೂರು!
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜಟಾಪಟಿ ರಾಜ್ಯಪಾಲರ ಅಂಗಳಕ್ಕೆ ತಲುಪಿದೆ. ಅಂಕಪಟ್ಟಿ, ಪರೀಕ್ಷೆ ಫಲಿತಾಂಶ ಸೇರಿದಂತೆ ಹಲವು ವಿಚಾರವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ಗೆ ದೂರು ನೀಡಲಾಗಿದೆ. ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯರಿಂದ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಬೆಂಗಳೂರು ಅಕ್ರಮಗಳ ಅಡ್ಡೆಯಾಗುತ್ತಿದೆ. ಉತ್ತಮ ಆಡಳಿತ ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ.ಕೆ.ಆರ್ ವೇಣುಗೋಪಾಲ ಹಾಗೂ ಕುಲಸಚಿವ ಕೊಟ್ರೇಶ್ ವಿರುದ್ಧ ದೂರು ನೀಡಲಾಗಿದೆ.
ಕಾನೂನು ಬಾಹಿರವಾಗಿ ಸಿಂಡಿಕೇಟ್ ಸಭೆ ಹಾಗೂ ವಿಶ್ವವಿದ್ಯಾಲಯದ ಆಡಳಿತ ನಡೆಸುತ್ತಿದ್ದಾರೆ. ತಕ್ಷಣ ಇವರಿಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರತೀ ವರ್ಷ 8 ಭಾರೀ ಸಭೆ ನಡೆಸಬೇಕೆಂಬ ನಿಯಮವಿದೆ. ಕಳೆದ 2 ವರ್ಷಕ್ಕೂ ಹೆಚ್ಚು ಅವಧಿಗೆ ಕೇವಲ 13 ಸಭೆಯನ್ನ ಮಾತ್ರ ನಡೆಸಿದ್ದಾರೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಸದಸ್ಯರಿಗೆ ಓದಿ ತಿಳಿಸುವುದಿಲ್ಲ ಎಂಬ ಆರೋಪವೂ ಕೇಳಿಬಂದಿದೆ. 7 ಜನ ಸಿಂಡಿಕೇಟ್ ಸದಸ್ಯರಿಂದ ರಾಜ್ಯಪಾಲರಿಗೆ ಈ ಸಂಬಂಧ ದೂರು ಸಲ್ಲಿಸಲಾಗಿದೆ. ಕೂಡಲೇ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಲಾಗಿದೆ.