ಇತ್ತೀಚಿನ ಸುದ್ದಿರಾಜ್ಯಸುದ್ದಿ
ಬೆಂಗಳೂರು ಚೋಳೂರುಪಾಳ್ಯದಲ್ಲಿ ನಾಲ್ಕು ಅಂಗಡಿಗಳ ಸರಣಿ ಕಳ್ಳತನ

ಮೊನ್ನೆಯಷ್ಟೇ ಆವಲಹಳ್ಳಿ ಪೊಲೀಸರು ಮಂಕೀಕ್ಯಾಪ್ ಧರಿಸಿ ಕೆಅರ್ ಪುರಂ ಮತ್ತು ಹೊಸಕೋಟೆಯಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮತ್ತೊಂ್ಯ ತಂಡವು ನಗರದ ಚೋಳೂರುಪಾಳ್ಯದ ಮುಖ್ಯರಸ್ತೆಯಲ್ಲಿರುವ ಮೆಡಿಕಲ್ ಶಾಪ್, ಬೇಕರಿ, ನಂದಿನಿ ಮಿಲ್ಕ್ ಪಾರ್ಲರ್ ಹಾಗೂ ಇನ್ನೊಂದು ಅಂಗಡಿಗೆ ನುಗ್ಗಿ ಕಳ್ಳತನ ಮಾಡಿದೆ. ನಾಲ್ವರ ತಂಡ ಎರಡು ಸ್ಕೂಟರ್ ಗಳ ಮೇಲೆ ಬಂದು ಅಂಗಡಿಗಳನ್ನು ದೋಚುವ ಕೃತ್ಯ ಸಿಸಿಟಿವಿ ಕೆಮೆರಾಗಳಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ ಕಾರು ಮತ್ತು ಬೇರೆ ವಾಹನಗಳು ವಿರಳವಾಗಿ ಚಲಿಸುತ್ತಿದ್ದರೂ ಕಳ್ಳರು ತಮ್ಮ ಕರಾಮತ್ತ್ತು ನಡೆಸುತ್ತಾರೆ.