ಬೆಂಗಳೂರಿನ ಹನುಮಂತನಗರ, ಬನಶಂಕರಿ, ಕೆಂಗೇರಿ ಹಲವೆಡೆ ಇಂದು ವಿದ್ಯುತ್ ಕಡಿತ
ಬೆಂಗಳೂರು: ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಇಂದು (ಜನವರಿ 21) ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಶಾಂತಿನಗರ, ಇಸ್ರೋ ಲೇಔಟ್, ಹನುಮಂತನಗರ, ಕೆಂಗೇರಿ ಏರಿಯಾ ಸೇರಿದಂತೆ ಹಲವೆಡೆ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ. ಬೆಂಗಳೂರಿನ ದಕ್ಷಿಣ ವಲಯದಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಶಾಂತಿನಗರ, ನಂಜಪ್ಪ ವೃತ್ತ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಸಿದ್ದಾಪುರ, ಸೋಮೇಶ್ವರನಗರ, ಜೆಪಿ ನಗರ 1ನೇ ಹಂತ, ಶಾಕಾಂಬರಿ ನಗರ, ಸಾರಕ್ಕಿ ಮಾರುಕಟ್ಟೆ, ಆರ್‌ಬಿಐ ಲೇಔಟ್, ಜೆಪಿ ನಗರ 5ನೇ ಹಂತ, ದೊರೆಸಾನಿಪಾಳ್ಯ, ಬನಶಂಕರಿ, ಮಾರತ್‌ವ್ಯೂ , ಚೌಡೇಶ್ವರಿ ದೇವಸ್ಥಾನ ರಸ್ತೆ, ಗಾಂಧಿನಗರ ರಸ್ತೆ, ಭೋಗನಹಳ್ಳಿ ಮುಖ್ಯರಸ್ತೆ, ಪಾಣತ್ತೂರು ಮುಖ್ಯರಸ್ತೆ, ವರ್ತೂರು ರಸ್ತೆ, ಹೊಂಗಸಂದ್ರ, ಗೊಟ್ಟಿಗೆರೆ ಮುಖ್ಯರಸ್ತೆ, ಬಿಡಿಎ 2ನೇ ಹಂತ, ತುಳಸೀಪುರ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ದೊಡ್ಡತೋಗೂರು, ಪರಪ್ಪನ ಅಗ್ರಹಾರ ಸುತ್ತಮುತ್ತಲಿನ ಪ್ರದೇಶ ಮತ್ತು ಕಳಸವನಹಳ್ಳಿಯಲ್ಲಿ ಕರೆಂಟ್ ಇರುವುದಿಲ್ಲ.
ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ 12ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ದೂರವಾಣಿ ನಗರ, ಸುದ್ದಗುಂಟೆ ಪಾಳ್ಯ, ಕೆಜಿ ಪುರ ಮುಖ್ಯ ರಸ್ತೆ, ಡಿಫೆನ್ಸ್ ಕಾಲೋನಿ, ನಾರಾಯಣಪುರ, ಬಿಡಿಎಸ್ ನಗರ, ಬೈರತಿ, ಬೈರತಿ ಗ್ರಾಮ, ಎಚ್‌ಬಿಆರ್ 4ನೇ ಬ್ಲಾಕ್, ಎಚ್‌ಬಿಆರ್ 5ನೇ ಬ್ಲಾಕ್ ಮತ್ತು ಚನ್ನಸಂದ್ರದಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯವಾಗಲಿದೆ.
ಬೆಂಗಳೂರಿನ ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಶ್ರೀರಾಮಪುರಂ, ಪ್ಲಾಟ್‌ಫಾರ್ಮ್ ರಸ್ತೆ, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಎಚ್‌ಎಂಟಿ ಇಂಡಸ್ಟ್ರಿ, ಸಾಯಿನಗರ 2ನೇ ಹಂತ, ಬಿಎಚ್‌ಇಎಲ್ ಲೇಔಟ್, ಕೊಡಿಗೇಹಳ್ಳಿ, ಕೆಂಪನಹಳ್ಳಿ, ಅಮೃತನಗರ, ಹೆಗಡೆ ನಗರ, ಕೋಗಿಲು, ದ್ವಾರಕಾ ನಗರ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಹೆಸರಘಟ್ಟ ರಸ್ತೆ, ಭುವನಘಟ್ಟ ರಸ್ತೆ , ಟಿ ದಾಸರಹಳ್ಳಿ, ಕಂಠೀರವ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಕರೆಂಟ್ ಇರುವುದಿಲ್ಲ.
ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಇಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಿದ್ಯಾಪೀಠ, ಶಂಕರನಾಗ್ ವೃತ್ತ, ಹನುಮಂತನಗರ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಭೂಮಿಕಾ ಲೇಔಟ್, ಬಿಎಚ್‌ಇಎಲ್ ಲೇಔಟ್, ಆಂಧ್ರಹಳ್ಳಿ ಸರ್ಕಲ್, ಡಿ ಗ್ರೂಪ್ ಲೇಔಟ್, ಕೆಂಗೇರಿ ಮುಖ್ಯರಸ್ತೆ, ಉಳ್ಳಾಲ ನಗರ, ಬಿಇಎಲ್ 1ನೇ ಹಂತ, ಬಿಇಎಲ್ 1ನೇ ಹಂತದಲ್ಲಿ ಇಂದು ಪವರ್ ಕಟ್ ಇರಲಿದೆ