ಸುದ್ದಿ

ಬೆಂಗಳೂರಿನ ಎಂಟು ವಲಯಗಳ ಪೈಕಿ ಬೊಮ್ಮನಹಳ್ಳಿ ಡೇಂಜರ್​​​​ ಝೋನ್​​ ..

ಬೆಂಗಳೂರು :  ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ತೀವ್ರವಾಗಿ ಹೆಚ್ಚುತ್ತಿದೆ. ಎಲ್ಲರಲ್ಲೂ ಆತಂಕವನ್ನು ಸೃಷ್ಟಿಮಾಡಿದೆ. ಬೆಂಗಳೂರಲ್ಲಿ ಮತ್ತೆ ಕೊರೋನಾ ಮಹಾ ಸ್ಫೋಟವಾಗಿದೆ.  ಕೊರೋನಾ ಬೆಂಗಳೂರಿನ ದಿಕ್ಕು-ದಿಕ್ಕುಗಳಿಗೆ ಶಾಕ್​​ ಕೊಡುತ್ತಿದ್ದು,  ಎಂಟು ವಲಯಗಳ ಪೈಕಿ ಬೊಮ್ಮನಹಳ್ಳಿ ಝೋನ್​​ ಡೇಂಜರ್​​​​ ಆಗಿದೆ.

ಬೊಮ್ಮನಹಳ್ಳಿ ವಲಯದಲ್ಲಿ 412 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಮಹದೇವಪುರದಲ್ಲಿ 717 ಕೇಸ್​ , ಬೆಂಗಳೂರು ಪೂರ್ವ ದಲ್ಲಿ 744 ಕೇಸ್​ , ಬೆಂಗಳೂರು ದಕ್ಷಿಣದಲ್ಲಿ 483 ಕೇಸ್​, ಯಲಹಂಕದಲ್ಲಿ  232 ಕೇಸ್​ ಪತ್ತೆ ಯಾಗಿದೆ. ಬೆಂಗಳೂರು ಪಶ್ಚಿಮದಲ್ಲೂ 325 ಕೇಸ್​, ಆರ್​​.ಆರ್​​.ನಗರದಲ್ಲಿ 197 ಕೇಸ್​, ದಾಸರಹಳ್ಳಿ ವಲಯದಲ್ಲಿ 37 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.  ಇವತ್ತು ಬೆಂಗಳೂರಿನಲ್ಲಿ 3 ಸಾವಿರಕ್ಕೂ ಹೆಚ್ಚು ಕೇಸ್​ ಪತ್ತೆಯಾಗುವ ಸಾಧ್ಯತೆ ಇದೆ.

Related Articles

Leave a Reply

Your email address will not be published. Required fields are marked *

Back to top button