ಬೆಂಗಳೂರಿನಲ್ಲಿ ಹೆಣ್ಮಕ್ಕಳಿಗಿಲ್ಲ ಸೇಫ್ಟಿ: ಹೋಟೆಲ್ಗೆ ಬಂದ ಯುವತಿ ಜೊತೆ ಅಸಭ್ಯ ವರ್ತನೆ; ಸಿಸಿಟಿವಿಯಲ್ಲಿ ಸೆರೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಣ್ಮಕ್ಕಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಬಿಎಂಟಿಸಿ ಬಸ್, ಮೆಟ್ರೋ, ಮಾಲ್ಗಳಲ್ಲಿ ಹೆಣ್ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುವ ಕಾಮುಕರಿಗೆ ಕಡಿವಾಣ ಹಾಕುವವರಿಲ್ಲದಂತಾಗಿದೆ. ಇದೇ ರೀತಿಯ ಮತ್ತೊಂದು ಘಟನೆ ವಿಜಯನಗರದಲ್ಲಿ ನಡೆದಿದ್ದು ಕಾಮುಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಜಯನಗರದ ನಮ್ಮೂಟ ಹೋಟೆಲ್ ಬಳಿ ಹೆಣ್ಮಕ್ಕಳ್ಳನ್ನ ಟಚ್ ಮಾಡಿ ವಿಕೃತ ಸುಖ ಪಡುತ್ತಿದ್ದ ಕಾಮುಕರ ಕೃತ್ಯ ಸೆರೆಯಾಗಿದೆ. ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮೂವರು ಕಾಮುಕರು ಹೋಟೆಲ್ಗೆ ಬರುವ ಯುವತಿಯರು, ಮಹಿಳೆಯರನ್ನು ಟಾರ್ಗೆಟ್ ಮಾಡಿ ಬೇಕು ಬೇಕು ಅಂತಲೇ ಟಚ್ ಮಾಡಿ ವಿಕೃತಿ ಮೆರೆಯುತ್ತಿದ್ದದ್ದು ಪತ್ತೆಯಾಗಿದೆ. ಬೇಕು ಬೇಕಂತಲೇ ಯುವತಿಯನ್ನು ಟಚ್ ಮಾಡಿ ವಿಕೃತಿ ಮೆರೆದ ಕಾಮುಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವತಿಯನ್ನ ಟಚ್ ಮಾಡೋ ಮೊದಲು ಮೂವರು ಕಾಮುಕರು ಪ್ಲಾನ್ ಮಾಡಿಕೊಂಡಿದ್ದು ಒಬ್ಬ ಟಚ್ ಮಾಡೋ ಉದ್ದೇಶದಿಂದ ಹೋದ್ರೆ, ಮತ್ತಿಬ್ಬರು ವಾಚ್ ಮಾಡ್ತಾರೆ. ಬಳಿಕ ಏನಾದ್ರು ಗಲಾಟೆಯಾದ್ರೆ ಏನು ತಪ್ಪಿಲ್ಲ ಎಂಬಂತೆ ಎಸ್ಕೇಪ್ ಆಗ್ತಾರೆ. ಇದೇ ರೀತಿ ವಿಜಯನಗರದ ನಮ್ಮೂಟ ಹೋಟೆಲ್ ಬಳಿ ಯುವತಿಯನ್ನು ಕಾಮುಕ ಟಚ್ ಮಾಡಿ ಅಟ್ಟಹಾಸ ಮೆರೆದಿದ್ದಾನೆ. ಈ ವೇಳೆ ಗಲಾಟೆ ನಡೆದಿದ್ದು ಸಂಪೂರ್ಣ ದೃಶ್ಯ ಸೆರೆಯಾಗಿದೆ. ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಹೋಟೆಲ್ ಕ್ಯಾಶಿಯರ್ ಸುಕನ್ಯಾ ಕೊಟ್ಟ ದೂರಿನ ಮೇರೆಗೆ ಎಫ್ಐಆರ್
ಇನ್ನು ವಿಜಯನಗರ ಆರ್ಪಿಸಿ ಲೇಔಟ್ನಲ್ಲಿರುವ ನಮ್ಮೂಟ ಹೋಟೆಲ್ನಲ್ಲಿ 2023 ಡಿಸಂಬರ್ 30 ರ ಸಂಜೆ 7.30 ಕ್ಕೆ ಈ ಘಟನೆ ನಡೆದಿತ್ತು. ತಡವಾಗಿ ಅಂದರೆ 2024 ರ ಜನವರಿ 10 ರಂದು ಈ ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದೆ. ಹೋಟೆಲ್ ಗೆ ಬಂದ ಮೂವರು ಹುಡುಗರು ದೋಸೆ ತಿನ್ನುತ್ತ ಅಲ್ಲೇ ನಿಂತು ಹರಟೆ ಹೊಡೆಯುತ್ತಿದ್ದರು. ಈ ವೇಳೆ ಹೋಟೆಲ್ ಗೆ ಬಂದ ಯುವತಿ ಜೊತೆಗೆ ಅನುಚಿತ ವರ್ತನೆ ತೋರಿದ್ದಾರೆ. ಓರ್ವ ಕಾಮುಕ ಯುವತಿಯ ಹಿಂಬದಿಗೆ ಕೈ ನಿಂದ ಹೊಡೆದು ಅನುಚಿತ ವರ್ತನೆ ತೋರಿದ್ದಾನೆ. ಉಳಿದಿಬ್ಬರು ಅದನ್ನು ನೋಡಿ ಖುಷಿ ಪಟ್ಟಿದ್ದಾರೆ. ಈ ವೇಳೆ ಯುವತಿ ಯುವಕರ ಜೊತೆ ಗಲಾಟೆ ಮಾಡಿ ಕೂಗಾಡಿದ್ದು ಸ್ಥಳೀಯರೆಲ್ಲರೂ ಜಮಾಯಿಸಿದ್ದಾರೆ. ಜನ ಸೇರುತ್ತಿದ್ದಂತೆ ಮೂವರು ಯುವಕರು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.