ಕರ್ನಾಟಕ ಅನೇಕ ದೇವಾಲಯಗಳ ಐತಿಹಾಸಿಕ ಪುರಾಣದ ಜೊತೆಗೆ ಅನೇಕ ವೈಶಿಷ್ಟಗಳನ್ನು ಹೊಂದಿರುತ್ತದೆ. ಅದರಲ್ಲಿ ಒಂದು ಹಾಸನಾಂಬಾ ದೇವಾಲಯ (Hasanamba Temple). ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಈ ದೇವಾಲಯದಲ್ಲಿ ವರ್ಷದ ಹಿಂದೆ ಹೊತ್ತಿಸಿದ ದೀಪ ಉರಿಯುತ್ತಲೇ ಇರುತ್ತದೆ. ದೇವಿಗೆ ಇಟ್ಟ ಪ್ರಸಾದ ಹಾಳಾಗುವುದಿಲ್ಲ. ಹೂವುಗಳು ಬಾಡುವುದಿಲ್ಲ. ಈ ರೀತಿ ಅನೇಕ ಪವಾಡಗಳಿಗೆ (Miracle) ಸಾಕ್ಷಿಯಾಗಿರುವ ಹಾಸನಾಂಬಾ ದೇವಾಲಯದ ಬಾಗಿಲು ದೀಪಾವಳಿಯ (deepavali) ಸಮಯದಲ್ಲಿ 12 ದಿನಗಳ ಕಾಲ ತೆಗೆಯಲಾಗುತ್ತದೆ. ಈ ವೇಳೆ ಧಾರ್ಮಿಕ ವಿಧಿ ವಿಧಾನಗಳು ನಡೆಸಲಾಗುವುದು.

ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಹಾಸನ ಜಿಲ್ಲೆಯ (Hassan District) ಅಧಿದೇವತೆಯಾಗಿರುವ ಹಾಸನಂಬೆ ದೇಗುಲ ದರ್ಶನಕ್ಕೆ ದೂರ ದೂರುಗಳಿಂದ ಜನರು ಆಗಮಿಸುತ್ತಾರೆ. ಇಂದಿನಿಂದ ಹಾಸನಾಂಬೆ ಭಕ್ತರಿಗೆ ದರ್ಶನ ನೀಡಲಿದ್ದು, ನ.6 ರವರೆಗೆ ಹಾಸನಾಂಬೆ ದೇವಾಲಯ ಬಾಗಿಲು ತೆರೆಯಲಿದೆ. ಮೊದಲ ಹಾಗೂ ಕೊನೆಯ ದಿನ ಸಾರ್ವಜನಿಕರಿಗೆ ಅವಕಾಶವಿಲ್ಲ.
ಏನಿ ದೇಗುಲದ ಇತಿಹಾಸ (Hasanamba temple history)
ಸುಮಾರು 12ನೇ ಶತಮಾನದಲ್ಲಿ ಹಾಸನದ ಚನ್ನಪಟ್ಟಣ ಪಾಳೆಗಾರನಾದ ಶ್ರೀ ಕೃಷ್ಣ ನಾಯ್ಕರು ಪ್ರಯಾಣ ನಡೆಸಿದಾಗ ಮಾರ್ಗ ಮಧ್ಯೆಯಲ್ಲಿ ಆದಿಶಕ್ತಿ ಸ್ವರೂಪಿಣಿಯಾಗಿ ದೇವರು ಪ್ರತ್ಯಕ್ಷಳಾದಳು. ಈ ವೇಳೆ ಆಕೆ ತಾನು ಇಲ್ಲಿ ಹುತ್ತದ ಸ್ವರೂಪದಲ್ಲಿ ನೆಲೆಸುವೆ. ಗುಡಿಯನ್ನು ಕಟ್ಟುವಂತೆ ಸೂಚನೆ ನೀಡಿದಳಂತೆ. ಅದರಂತೆ ಶ್ರೀ ಕೃಷ್ಣ ನಾಯ್ಕರು ದೇವಿಗೆ ಗುಡಿ ಕಟ್ಟಿಸಿದರು.