
ಬೆಂಗಳೂರು, ಏಪ್ರಿಲ್ 9: ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ (Bangalore Water Price Hike) ಮಾಡುವ ವಿಚಾರವಾಗಿ ಬೆಂಗಳೂರು ಜಲ ಮಂಡಳಿ (BWSSB) ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ (Ram Prasath Manohar) ಮಾಹಿತಿ ನೀಡಿದ್ದು, ಡೊಮೆಸ್ಟಿಕ್ ಕನೆಕ್ಷನ್ಗೆ ಗರಿಷ್ಠ ಲೀಟರ್ಗೆ ಒಂದು ಪೈಸೆ ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ, ಒಟ್ಟಾರೆಯಾಗಿ ಗೃಹ ಬಳಕೆದಾರರಿಗೆ ತಿಂಗಳಿಗೆ 20-30 ರೂ. ಹೆಚ್ಚುವರಿ ಹೊರೆಯಾಗುವ ಸಾಧ್ಯತೆ ಇದೆ. ನೀರು ಬಳಕೆಯ ಆಧಾರದ ಮೇಲೆ ಸ್ಲ್ಯಾಬ್ಗಳನ್ನು ನಿಗದಿಪಡಿಸಲಾಗಿದ್ದು, ಎಷ್ಟು ಬಳಕೆಗೆ ಎಷ್ಟು ದರ ಏರಿಕೆಯಾಲಿದೆ ಎಂಬ ಬಗ್ಗೆ ರಾಮ್ ಪ್ರಸಾತ್ ಮನೋಹರ್ ವಿವರಗಳನ್ನು ನೀಡಿದ್ದಾರೆ.
ನೀರಿನ ದರ ಏರಿಕೆ ವಿವರ ಹೀಗಿದೆ…
- ಡೊಮೆಸ್ಟಿಕ್ ಕನೆಕ್ಷನ್ಗೆ ಗರಿಷ್ಠ ಲೀಟರ್ಗೆ ಒಂದು ಪೈಸೆ ಹೆಚ್ಚಳವಾಗಲಿದೆ.
- 0-8 ಸಾವಿರದೊಳಗೆ ಸ್ಲ್ಯಾಬ್ಗೆ ಲೀಟರ್ಗೆ 0.15 ಪೈಸೆ ಹೆಚ್ಚಳವಾಗಲಿದೆ.
- 8-25 ಸಾವಿರದೊಳಗಿನ ಸ್ಲ್ಯಾಬ್ಗೆ ಲೀಟರ್ಗೆ 0.40 ಪೈಸೆ ಹೆಚ್ಚಳವಾಗಲಿದೆ.
- 25 ಸಾವಿರ ಲೀಟರ್ಗಿಂತ ಹೆಚ್ಚು ಬಳಕೆ ಮಾಡಿದ್ರೆ 0.80 ಪೈಸೆ ಏರಿಕೆಯಾಗಲಿದೆ.
- 50 ಸಾವಿರದಿಂದ 1 ಲಕ್ಷ ಲೀಟರ್ ನೀರು ಬಳಕೆಗೆ 1 ಪೈಸೆ ಹೆಚ್ಚಳವಾಗಲಿದೆ.
ಪ್ರತಿ ವರ್ಷ ಏಪ್ರಿಲ್ 1ರಿಂದ ಶೇಕಡಾ 3ರಷ್ಟು ನೀರಿನ ದರ ಹೆಚ್ಚಳವಾಗಲಿದೆ. ಇದೀಗ ಸದ್ಯದ ತೀರ್ಮಾನದಿಂದಾಗಿ ಗೃಹ ಬಳಕೆದಾರರಿಗೆ ತಿಂಗಳಿಗೆ 20-30 ರೂ. ಹೆಚ್ಚುವರಿ ಹೊರೆಯಾಗಬಹುದು. ವಾಣಿಜ್ಯ ಬಳಕೆದಾರರಿಗೆ ಪ್ರತಿ ತಿಂಗಳು 50-60 ರೂ. ಹೊರೆಯಾಗಬಹುದು ಎಂದು ಅವರು ಹೇಳಿದ್ದಾರೆ.
ಬೆಂಗಳೂರು ಜಲ ಮಂಡಳಿ 2014 ರಿಂದ ಈವರೆಗೆ ನಗರದಲ್ಲಿ ನೀರು ಪೂರೈಕೆ ದರ ಹೆಚ್ಚಳ ಮಾಡಿಲ್ಲ. ಮಂಡಳಿ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದೆ. ಹೀಗಾಗಿ ಲೀಟರಿಗೆ ಒಂದು ಪೈಸೆಯಷ್ಟಾದರೂ ದರ ಏರಿಕೆ ಮಾಡಲೇಬೇಕಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಇತ್ತೀಚೆಗೆ ಹೇಳಿದ್ದರು. ಸದ್ಯ ವಸತಿ ಕಟ್ಟಡಗಳಿಗೆ ಪೂರೈಕೆ ಮಾಡುವ ನೀರಿಗೆ ಒಟ್ಟು ನಾಲ್ಕು ಸ್ಲ್ಯಾಬ್ಗಳಲ್ಲಿ ದರ ನಿಗದಿಪಡಿಸಲಾಗಿದೆ. ಇದೀಗ ಗೃಹಗಳಕೆಯ ನೀರಿನ ದರ ಹೆಚ್ಚಳದ ಬಗ್ಗೆಯೂ ನೆಲಮಂಡಳಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.