ದೇಶ
Trending

ಬಿಹಾರಕ್ಕೆ ಸಿಡಿಲಾಘಾತ; 48 ಗಂಟೆಯಲ್ಲಿ 60 ಜನರು ಸಾವು

ಬಿಹಾರ: ಸಿಡಿಲಿನ ಹೊಡೆತಕ್ಕೆ ಬಿಹಾರದಲ್ಲಿ ಕಳೆದ 48 ಗಂಟೆಗಳಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದಾರೆ. ಮಳೆ, ಮಿಂಚಿನಿಂದ ರಾಜ್ಯ ವಿವಿಧ ಜಿಲ್ಲೆಯಲ್ಲಿ 63 ಮಂದಿ ಸಾವನ್ನಪ್ಪಿದ್ದು, ಸರ್ಕಾರದಿಂದ ಅಧಿಕೃತವಾಗಿ 25 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿದೆ. ಅದರಲ್ಲೂ ನಳಂದ ಜಿಲ್ಲೆಯಲ್ಲಿಯೇ 22 ಮಂದಿ ಸಾವನ್ನಪ್ಪಿದ್ದಾರೆ ಎಂದು ದತ್ತಾಂಶ ತಿಳಿಸಿದೆ.ದತ್ತಾಂಶದ ಪ್ರಕಾರ, ಮಿಂಚು, ಮಳೆ ಸಂಬಂಧಿತ ಬಹುತೇಕ ಸಾವುಗಳು ಬಿಹಾರದಲ್ಲಿ ವರದಿಯಾಗಿದೆ. 22 ಮಂದಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ.

ಬಿಹಾರಶರೀಫ್​​ನ ನಗ್ಮಾದಲ್ಲಿ 6, ದರ್ಭಾಂಗದಲ್ಲಿ 6, ಬೇಗುಸರಾಯ್​ನಲ್ಲಿ 5, ಮಧುಬನಿಯಲ್ಲಿ 4, ಜಮುಯಿ 3 ಮಂದಿ, ಸಮಸ್ತಿಪುರದಲ್ಲಿ 2, ಸಹರ್ಸಾದಲ್ಲಿ 4, ಔರಂಗಾಬಾದ್‌ನಲ್ಲಿ 2, ಪಾಟ್ನಾದಲ್ಲಿ 3, ಅರಾರಿಯಾದಲ್ಲಿ 1, ಗಯಾದಲ್ಲಿ 3, ಭೋಜ್‌ಪುರದಲ್ಲಿ 5, ಜೆಹಾನಾಬಾದ್, ಅರ್ವಾಲ್, ಮುಜಫರ್ ಪುರ್ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಡಿಲಿನಿಂದ ಹೆಚ್ಚಿನ ಸಾವು ಸಂಭವಿಸಿರುವ ಕುರಿತು ಸಂತಾಪ ವ್ಯಕ್ತಪಡಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಸಂತ್ರಸ್ತ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿದ್ದು, ತಕ್ಷಣ ತಲಾ 4 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಸೂಚಿಸಿದ್ದಾರೆ.

ಬಿಹಾರದಲ್ಲಿ ಹವಾಮಾನ ಬದಲಾವಣೆಯ ಪರಿಣಾಮ ಕುರಿತು ಮಾತನಾಡಿರುವ ತಜ್ಞರು, ಬಿಹಾರದಲ್ಲಿ ಬಿಸಿಲಿನ ತಾಪದ ನಡುವೆ ಹವಾಮಾನ ವೈಪರೀತ್ಯ ಕಂಡಿದೆ. ರಾತ್ರಿಯಲ್ಲಿ ಗಾಳಿ ವೇಗವಾಗಿ ಬೀಸುತ್ತಿದ್ದಾಗ, ಕೆಲವು ಪ್ರದೇಶದಲ್ಲಿ ಒತ್ತಡ ಕಂಡು ಬಂದಿದೆ. ಪರಿಣಾಮ, ಗುಡುಗು ಮಿಂಚಿನ ಮಳೆಯಾಗಿದೆ. ಪ್ರತಿ ವರ್ಷ ಮಿಂಚಿನಿಂದ ಹಲವು ಸಾವು ಸಂಭವಿಸುತ್ತಿದ್ದು, ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕಿದೆ.

ರ್ಕಾರಿ ಅಂಕಿಅಂಶಗಳ ಪ್ರಕಾರ (ಬಿಹಾರ ವಿಪತ್ತು ನಿರ್ವಹಣೆ), 2019-20ರಲ್ಲಿ 253 ಜನರು ಸಾವನ್ನಪ್ಪಿದ್ದು, 48 ಜನರು ಗಾಯಗೊಂಡಿದ್ದಾರೆ. 2020-21ರಲ್ಲಿ 459 ಜನರು ಸಾವನ್ನಪ್ಪಿದ್ದು, 68 ಜನರು ಗಾಯಗೊಂಡಿದ್ದಾರೆ. 2021-22ರಲ್ಲಿ 280 ಜನರು ಸಾವನ್ನಪ್ಪಿದ್ದು, 56 ಜನರು ಗಾಯಗೊಂಡಿದ್ದಾರೆ. 2022-23ರಲ್ಲಿ 400 ಜನರು ಸಾವನ್ನಪ್ಪಿದ್ದು, 77 ಜನರು ಗಾಯಗೊಂಡಿದ್ದಾರೆ. 2023-24ರಲ್ಲಿ 242 ಜನರು ಸಾವನ್ನಪ್ಪಿದ್ದು, 37 ಜನರು ಗಾಯಗೊಂಡಿದ್ದಾರೆ. ಈ ವರ್ಷ ಇಲ್ಲಿಯವರೆಗೆ 60 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಆದರೆ ಸರ್ಕಾರಿ ಅಂಕಿಅಂಶಗಳ ಪ್ರಕಾರ 25 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಬಿಹಾರದ ವಿಪತ್ತು ನಿರ್ವಹಣಾ ಇಲಾಖೆಯ ವರದಿಯ ಪ್ರಕಾರ, ಬಿಹಾರದಲ್ಲಿ ಪ್ರತಿ ವರ್ಷ 10 ಲಕ್ಷ ಜನರಲ್ಲಿ 2.65 ಜನರು ಸಿಡಿಲಿನಿಂದ ಸಾವನ್ನಪ್ಪುತ್ತಿದ್ದಾರೆ ಈ ಅಂಕಿ ಅಂಶವು ರಾಷ್ಟ್ರೀಯ ಸರಾಸರಿ 2.55 ಸಾವುಗಳಿಗಿಂತ ಹೆಚ್ಚಾಗಿದೆ. ಬಿಹಾರ ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ, ಹೆಚ್ಚಿನ ಮಿಂಚಿನ ಘಟನೆಗಳು ಬಿಹಾರದ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಕಂಡುಬರುತ್ತವೆ. ಮೇ ಮತ್ತು ಸೆಪ್ಟೆಂಬರ್ ನಡುವೆ ಮಿಂಚಿನಿಂದಾಗಿ ಹೆಚ್ಚಿನ ಸಾವುಗಳು ಸಂಭವಿಸುತ್ತವೆ.

ಜಾರ್ಖಂಡ್‌ನಲ್ಲಿ ವಜ್ರಮಾರ ಎಂಬ ಹಳ್ಳಿಯಲ್ಲಿ ಹೀಗೆ ಹಲವು ವರ್ಷದ ಹಿಂದೆ ಜನರು ಮಿಂಚಿನಿಂದ ಸಾವನ್ನಪ್ಪುತ್ತಿದ್ದರು. ಇದನ್ನು ತಪ್ಪಿಸಲು ಗ್ರಾಮದಲ್ಲಿ ಅನೇಕ ಮಿಂಚು ನಿಗ್ರಹಗಳನ್ನು ಸ್ಥಾಪಿಸಲಾಯಿತು. ಇದರಿಂದ ಸಾವಿನ ಸಂಖ್ಯೆ ನಿಂತಿತು. ಇದೇ ರೀತಿಯ ತಂತ್ರವನ್ನು ಬಾಂಗ್ಲಾದೇಶದಲ್ಲಿ ಕೂಡ ಅನುಸರಿಸಲಾಗುತ್ತಿದೆ.

2017 ರಲ್ಲಿ ಬಾಂಗ್ಲಾದೇಶದಲ್ಲಿ ಸಿಡಿಲಿನಿಂದ 308 ಜನರು ಸಾವನ್ನಪ್ಪಿದ್ದರು. ಮಿಂಚಿನಿಂದಾಗಿ ನಿರಂತರ ಸಾವುಗಳ ನಂತರ, ಅಲ್ಲಿ ತಾಳೆ ಮರಗಳನ್ನು ನೆಡಲಾಯಿತು. ತಾಳೆ ಮರಗಳು ಎತ್ತರವಾಗಿರುವುದರಿಂದ ಮಿಂಚನ್ನು ಅವುಗಳ ಕಡೆಗೆ ಆಕರ್ಷಿಸುತ್ತವೆ. ಇದರಿಂದಾಗಿ ಮಿಂಚಿನಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button