ರಾಜ್ಯ
ಬಿಬಿಎಂಪಿ ಪಶುಪಾಲನಾ ವಿಭಾಗ ವತಿಯಿಂದ ರೇಬಿಸ್ ಜಾಗೃತಿ ಕಾರ್ಯಕ್ರಮ
ಬಿಬಿಎಂಪಿ ಪಶುಪಾಲನಾ ವಿಭಾಗ ವತಿಯಿಂದ ರೇಬೀಸ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮಕ್ಕೆ ವಿಶೇಷ ಆಯುಕ್ತರು ಡಿ.ರಂದೀಪ್ ರವರು ಚಾಲನೆ ನೀಡಿದರು. ರೆಬೀಸ್ಗೆ ತುತ್ತಾಗಿರುವ ಪ್ರಾಣಿಗಳನ್ನು ಸಾಗಿಸಲು ಮತ್ತು ರೇಬೀಸ್ ಶಂಕಿತ ಪ್ರಾಣಿಗಳನ್ನು ಬೇರ್ಪಡಿಸಲು ಎರಡು ಆಂಬುಲೆನ್ಸ್ ವಾಹನಗಳನ್ನು ರೋಟರಿ ಕ್ಲಬ್ ಬೆಂಗಳೂರು ಸದ್ಯದಲ್ಲೇ ನೀಡಲಿದೆ. ಜೊತೆಗೆ ರೋಟರಿ ಕ್ಲಬ್ ಬೆಂಗಳೂರು ರವರು ನಗರದ ನಾಗರೀಕರಲ್ಲಿ ರೇಬೀಸ್ ಬಗ್ಗೆ ಜಾಗೃತಿ ಮೂಡಿಸಲು ನಗರದಾದ್ಯಂತ ಬೀದಿ ನಾಟಕ, ಸಾಮಾಜಿಕ ಜಾಲತಾಣಗಳಲ್ಲಿ ರೇಬೀಸ್ ಬಗ್ಗೆ ಜಾಗೃತಿ ಮೂಡಿಸುವುದು, ಬಸ್-ಆಟೋಗಳು, ಹೋಟೆಲ್, ಉದ್ಯಾನಗಳಲ್ಲಿ ಭಿತ್ತಿಪತ್ರಗಳ ಮೂಲಕ ಅರಿವು ಮೂಡಿಸಲಿದೆ.