ಬಿಬಿಎಂಪಿ ಗಂಡಾ`ಗುಂಡಿ’ಯಲ್ಲಿ ಕೋಟಿ ಕೋಟಿ ಲೂಟಿ..!
ಬೆಂಗಳೂರು, ಡಿ.20- ನಯಾಪೈಸೆ ಪ್ರಯೋಜನವಿಲ್ಲದ ಫೈಥಾನ್ ಯಂತ್ರಗಳಿಗೆ ಅನಗತ್ಯವಾಗಿ ಕೋಟ್ಯಂತರ ರೂ.ವೆಚ್ಚ ಮಾಡುತ್ತಿರುವುದಲ್ಲದೆ ಉಪಯುಕ್ತವಿಲ್ಲದ ಆ ಯಂತ್ರಗಳ ಮಾಲೀಕತ್ವದ ಸಂಸ್ಥೆಗೆ ಮತ್ತೊಮ್ಮೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗ ವಹಿಸುವ ಅವಕಾಶ ನೀಡುತ್ತಿರುವ ಬಗ್ಗೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ದೂರು ನೀಡಿದ್ದಾರೆ.
ನಗರದ ಮುಖ್ಯ ರಸ್ತೆಗಳಲ್ಲಿ ಗುಂಡಿ ಮುಚ್ಚಲು ಬಿಬಿಎಂಪಿ ತನ್ನ ಸ್ವಂತ ಜಾಗದಲ್ಲಿ ಟಾರ್ ಪ್ಲಾಂಟ್ ನಿರ್ಮಿಸಿ ನಿರ್ವಹಣೆಯ ಗುತ್ತಿಗೆಯನ್ನು ಏಜೆನ್ಸಿಯೊಂದಕ್ಕೆ ನೀಡಿದೆ. ಆದರೂ ಕಳೆದ ಹಲವಾರು ವರ್ಷಗಳಿಂದ ಫೈಥಾನ್ ಯಂತ್ರಗಳ ಹೆಸರಿನಲ್ಲಿ ಹತ್ತಾರು ಕೋಟಿ ನಾಗರೀಕರ ತೆರಿಗೆ ಹಣ ತಿಂದು ತೇಗಿರುವ ಅಮೆರಿಕನ್ ರೋಡ್ ಟೆಕ್ನಾಲಜಿಸ್ ಸಂಸ್ಥೆಗೆ ಮತ್ತೊಂದು ಗುತ್ತಿಗೆ ನೀಡುವ ಅವಶ್ಯಕತೆ ಏನಿತ್ತು ಎನ್ನುವುದರ ಬಗ್ಗೆ ರಮೇಶ್ ಅವರು ಸಿಎಂ ಬೊಮ್ಮಾಯಿ ಹಾಗೂ ಬಿಬಿಎಂಪಿ ಆಡಳಿತಾಜಾಕಾರಿ ರಾಕೇಶ್ ಸಿಂಗ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಅಮೆರಿಕಾದಿಂದ ಪೈಥಾನ್ ಯಂತ್ರ ಗಳನ್ನು ಬಳಕೆ ಮಾಡಿ ಕೊಳ್ಳುವ ಕುರಿತಂತೆ ಅಮೆರಿಕನ್ ರೋಡ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಇದುವರೆಗೂ ಕೋಟ್ಯಂತರ ರೂ.ವೆಚ್ಚ ಮಾಡಿದ್ದರೂ ರಸ್ತೆ ಗುಂಡಿಗಳಿಗೆ ಮಾತ್ರ ಮುಕ್ತಿ ಸಿಕ್ಕಿಲ್ಲ.
ವಾರ್ಡ್ ಮಟ್ಟದ ರಸ್ತೆಗಳಿಗೆ ಪ್ರತಿವರ್ಷ ಆಯಾ ವಾರ್ಡ್‍ಗಳ ಅನುದಾನದಲ್ಲಿ ತಲಾ 20 ಲಕ್ಷ ರೂ.ಗಳಂತೆ ಸುಮಾರು 40 ಕೋಟಿ ಖರ್ಚು ಮಾಡಲಾಗುತ್ತಿದೆ. ಉಳಿದಂತೆ ಬಿಬಿಎಂಪಿ ವ್ಯಾಪ್ತಿಯ 1900 ಕಿ.ಮೀ ಉದ್ದದ ಆರ್ಟಿರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳಿಗೆ ಸಂಬಂಧಿಸಿದ ದೋಷಗಳ ಹೊಣೆ ಗಾರಿಕೆ ಅವ ಇರುವ ರಸ್ತೆಗಳನ್ನು ಹೊರತುಪಡಿಸಿ ಇನ್ನುಳಿದ ರಸ್ತೆ ಗುಂಡಿಗಳನ್ನು ಮುಚ್ಚಲು ಪಾಲಿಕೆಯ ರಸ್ತೆ ಮೂಲಭೂತ ಸೌಕರ್ಯಗಳ ಇಲಾಖೆಯಿಂದ ಬೇರೆ ಗುತ್ತಿಗೆ ದಾರರಿಗೆ ಗುತ್ತಿಗೆ ನೀಡಿ ಪ್ರತಿವರ್ಷ 60 ರಿಂದ 70 ಕೋಟಿ ರೂ. ಗಳಿಗೂ ಹೆಚ್ಚು ಹಣ ಬಳಕೆ ಮಾಡಲಾಗುತ್ತಿದೆ. ಆದರೂ ನಗರ ಗುಂಡಿಮುಕ್ತವಾಗಿಲ್ಲ.
ಈ ಎಲ್ಲ ಅಂಶಗಳನ್ನು ಗಮನಿಸಿದರೆ ರಸ್ತೆ ಮೂಲಭೂತ ಸೌಕರ್ಯ ಇಲಾಖೆ ಅಧಿಕಾರಿಗಳು ಅಮೆರಿಕನ್ ಸಂಸ್ಥೆಯೊಂದಿಗೆ ಶಾಮೀಲ್ಲಾಗಿ ಪ್ರತಿವರ್ಷ ಕೋಟಿ ಕೋಟಿ ವಂಚನೆ ಮಾಡುತ್ತಿರುವುದು ಬಹಿರಂಗಗೊಂಡಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ಆರು ವರ್ಷಗಳ ಅವ ಯಲ್ಲಿ ಪೈಥಾನ್ ಯಂತ್ರಗಳ ಮೂಲಕ ರಸ್ತೆಗುಂಡಿ ಮುಚ್ಚ ಲಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿ 35,68 ಕೋಟಿ ರೂ.ಗಳನ್ನು ಪಾವತಿಸಿಕೊಂಡಿರುವ ದಾಖಲೆ ಲಭ್ಯವಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ. ಅದರಲ್ಲೂ ಕಳೆದ ಆರು ತಿಂಗಳಿನಿಲ್ಲೆ ಅಮೆರಿಕನ್ ಸಂಸ್ಥೆಗೆ 6.18 ಕೋಟಿ ರೂ. ಬಿಡುಗಡೆ ಮಾಡಿರುವ ದಾಖಲೆಯನ್ನು ಸಿಎಂಗೆ ನೀಡಿದ್ದೇನೆ ಎಂದು ಅವರು ವಿವರಿಸಿದರು.
ಈಗಾಗಲೆ ಜೆಎಂಸಿ ಸಂಸ್ಥೆ ಯವರು ರಸ್ತೆ ದೋಷ ಗಳ ಹೊಣೆಗಾರಿಕೆ ಪೂರ್ಣಗೊಂಡಿ ರುವ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯದಲ್ಲಿ ತೊಡಗಿಸಿಕೊಂಡಿ ದ್ದರು. ಮತ್ತೆ ಅಮೆರಿಕನ್ ಸಂಸ್ಥೆಗೆ ಗುಂಡಿ ಮುಚ್ಚುವ ಗುತ್ತಿಗೆ ನೀಡಲು ಮುಂದಾಗಿರುವ ಬಿಬಿಎಂಪಿ ಮುಖ್ಯ ಆಯುಕ್ತರ ಕ್ರಮ ಕಾನೂನುಬಾಹಿರ ಎಂದು ಅವರು ಆರೋಪಿಸಿದರು.
ಇದರ ಜೊತೆಗೆ 2013 ರಿಂದ 2020ರವರಗೆ ಸಾವಿರಾರು ಕೋಟಿ ಹಣ ಲೂಟಿ ಮಾಡಲಾಗಿದೆ ಎಂದು ಉಚ್ಚ ನ್ಯಾಯಾಲಯದಲ್ಲಿ ಪಿಐಎಲ್ ದಾಖಲಿಸಲಾಗಿದೆ.
ಇಂತಹ ಸಂದರ್ಭದಲ್ಲಿ ಅಮೆರಿಕನ್ ಸಂಸ್ಥೆಗೆ ನೀಡಿರುವ ಗುಂಡಿ ಮುಚ್ಚುವ ಕಾರ್ಯವನ್ನು ಸ್ಥಗಿತಗೊಳಿಸಬೇಕು ಹಾಗೂ ಸದರಿ ಸಂಸ್ಥೆಗೆ ಬಿಡುಗಡೆ ಮಾಡಿರುವ 35 ಕೋಟಿ ರೂ.ಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಸಿಎಂ ಬಸವರಾಜ್ ಬೊಮ್ಮಾಯಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಒತ್ತಾಯಿಸಿದ್ದಾರೆ.