ಇತ್ತೀಚಿನ ಸುದ್ದಿಸುದ್ದಿ

ಬಿಬಿಎಂಪಿ ಅಧಿಕಾರಿಗಳಿಗೆ ಚಳಿ ಬಿಡಿಸಿದ ಉಪಲೋಕಾಯುಕ್ತ 50 ಹೆಚ್ಚು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ.

ಈ ವೇಳೆ ಬಿಬಿಎಂಪಿ ಅಧಿಕಾರಿಗಳಿಗೆ ಉಪಲೋಕಾಯುಕ್ತ ನ್ಯಾ.ವೀರಪ್ಪ ಚಳಿ ಬಿಡಿಸಿದ್ದಾರೆ. ಲಾಲ್​ಬಾಗ್ ರಸ್ತೆಯ ಕಚೇರಿ ಭೇಟಿ ವೇಳೆ ಅಧಿಕಾರಿಗಳೇ ಇರಲಿಲ್ಲ. ಅಧಿಕಾರಿಗಳೆಲ್ಲಾ ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಅಸಿಸ್ಟೆಂಟ್​​ಗಳು ಹೇಳಿದ್ದಾರೆ. ವೈಕುಂಠ ಏಕಾದಶಿ ಮಾಡಲು ದೇವಸ್ಥಾನಕ್ಕೆ ಹೋದರೆ ಇಲ್ಲಿ ಯಾರು ಕೆಲಸ ಮಾಡುತ್ತಾರೆ ಎಂದು ಬಿಬಿಎಂಪಿ ಅಧಿಕಾರಿಗಳ ಮೇಲೆ ಉಪಲೋಕಾಯುಕ್ತರು ಗರಂ ಆಗಿದ್ದಾರೆ.

ಬಿಬಿಎಂಪಿ ಕಂದಾಯ ಅಧಿಕಾರಿ (ಆರ್‌ಒ) ಮತ್ತು ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಕಚೇರಿಗಳಲ್ಲಿ ಖಾತೆ ಹಂಚಿಕೆ, ಇ-ಖಾತಾ ನೋಂದಣಿಯಲ್ಲಿ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಅನಧಿಕೃತ ಕಟ್ಟಡಗಳಿಗೆ ನಾಮಕಾವಸ್ಥೆ ನೋಟಿಸ್ ನೀಡಿ, ಕಾಮಗಾರಿ ನಡೆಯಲು ಬಿಟ್ಟಿರುವ ಬಗ್ಗೆ 2023ರ ಆಗಸ್ಟ್‌ನಲ್ಲಿಯೇ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಶುಕ್ರವಾರ ದಿಢೀರ್ ದಾಳಿ ನಡೆಸಲಾಯಿತು’ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಹೆಬ್ಬಾಳ ಉಪವಿಭಾಗದ ಮುನಿರೆಡ್ಡಿ ಪಾಳ್ಯದ ಎಆರ್‌ಒ ಕಚೇರಿಗೆ ಖುದ್ದು ಭೇಟಿ ನೀಡಿದರು. ಆಗ ಎಆರ್‌ಒ ಕಚೇರಿಯಲ್ಲಿ ಇರಲಿಲ್ಲ, ಹಾಜರಾತಿಗೆ ಸಹಿ ಮಾಡಿರಲಿಲ್ಲ. ಕರೆ ಮಾಡಿ ವಿಚಾರಿಸಿದಾಗ, ‘ಕೇಂದ್ರ ಕಚೇರಿಗೆ ಹೋಗಿದ್ದೇನೆ’ ಎಂದರು. ವಿವರಣೆ ನೀಡಲು ಲೋಕಾಯುಕ್ತರು ಸೂಚಿಸಿದರು’ ಎಂದು ವಿವರಿಸಿದೆ.

ದಾಸರಹಳ್ಳಿ ವಿಭಾಗದ ಎಆರ್‌ಒ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಗಳ ಮೇಲೆ ದಾಳಿ ನಡೆಸಿದ ವೇಳೆ ಅಧಿಕಾರಿ ಯೊಬ್ಬರು ಪರಾರಿಯಾಗಿದ್ದಾರೆ. ಬ್ಯಾಗು, ಕಡತಗಳನ್ನು ಕಚೇರಿಯಲ್ಲಿ ಬಿಟ್ಟು ಓಡಿ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಭಾಗದ 24 ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಯಿತು. ಈ ವೇಳೆ ಕರ್ತವ್ಯಲೋಪದ ಹಲವು ಅಂಶಗಳು ಪತ್ತೆಯಾದವು’ ಎಂದು ತಿಳಿಸಿದೆ.

ಅಮ್ಮನ ಬದಲು ಮಗ ಕೆಲಸ,

ಬಂಧನಸೌತ್ ಎಂಡ್‌ವೃತ್ತದ ಬಳಿ ಇರುವ ಎಆರ್‌ಒ ಕಚೇರಿಯ ‘ಕೇಸ್ ವರ್ಕರ್’ ಕವಿತಾ ಅವರ ಬದಲಿಗೆ, ಅವರ ಮಗ ನವೀನ್ ಎಂಬಾತ ಕರ್ತವ್ಯ ನಿರ್ವಹಿಸುತ್ತಿರು ವುದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ದಾಳಿ ನಡೆಸಿದ ವೇಳೆ ಪತ್ತೆಯಾಗಿದೆ.ನ್ಯಾಯಮೂರ್ತಿ ಬಿ.ವೀರಪ್ಪ ಅವರ ಸೂಚನೆಯಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ, ನವೀನ್‌ನನ್ನು ಬಂಧಿಸಲಾಗಿದೆ.ಕಚೇರಿಗೆ ಮಧ್ಯಾಹ್ನ 4ರ ವೇಳೆಗೆ ದಾಳಿ ನೆಡೆಸಿದಾಗ ಕಚೇರಿಯಲ್ಲಿ ಯಾರೂ ಇಲ್ಲದೇ ಇರುವ ಬಗ್ಗೆ ಉಪ ಲೋಕಾಯುಕ್ತರು ಪ್ರಶ್ನೆ ಮಾಡಿದರು. ಹಾಜರಾತಿ ಪುಸ್ತಕ ತರಿಸಿ, ಪರಿಶೀಲನೆ ವೇಳೆ ಕವಿತಾ ಬದಲಿಗೆ ನವೀನ್ ಹಾಜರಿದ್ದರು. ಇದನ್ನು ಪ್ರಶ್ನಿಸಿದಾಗ ನವೀನ್, ‘ಅಮ್ಮ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾರೆ. ಅವರ ಬದಲಿಗೆ ನಾನು ಕೆಲಸಕ್ಕೆ ಬಂದಿದ್ದೇನೆ’ ಎಂದು ಉತ್ತರಿಸಿದರು.ಕವಿತಾ ಅವರಿಗೆ ಉಪ ಲೋಕಾಯುಕ್ತರೇ ಕರೆ ಮಾಡಿದಾಗ, ಮನೆಯಲ್ಲಿ ತಿಥಿ ಕಾರ್ಯಕ್ರಮ ನಡೆಯುತ್ತಿದೆ’ ಎಂದು ತಿಳಿಸಿದರು.

ಕೆ.ಆ‌ರ್.ಪುರ: ₹93,000 ನಗದು ಪತ್ತೆ’

ಕೆ.ಆರ್.ಪುರದ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯ ಮೇಲಿನ ದಾಳಿ ವೇಳೆ ದಾಖಲೆ ಇಲ್ಲದ ₹93,000 ನಗದು ಪತ್ತೆಯಾಗಿದೆ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಳಿ ₹50,000 ಮತ್ತು ಸಹಾಯಕ ಎಂಜಿನಿಯರ್ ಬಳಿ ₹43,000 ನಗದು ಇತ್ತು’ ಎಂದು ಲೋಕಾಯುಕ್ತವು ತಿಳಿಸಿದೆ.’ನಗದಿನ ವಿವರಗಳನ್ನು ಕಚೇರಿ ನಗದು ವಹಿಯಲ್ಲಿ ನಮೂದಿಸಿಲ್ಲ. ಜತೆಗೆ ಸಂಬಂಧಿತ ಅಧಿಕಾರಿಗಳು ಸಮಪರ್ಕ ವಿವರಣೆಯನ್ನೂ ನೀಡಿಲ್ಲ. ನಗದು ವಶಕ್ಕೆ ಪಡೆದು, ಮುಂದಿನ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದೆ.

ವಾಹನಗಳ ರಹದಾರಿ ನೀಡಲು ₹35.000 ಲಂಚ ಪಡೆಯುವಾಗ ವೇಳೆ ಶಾಂತಿನಗರದ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಯೊಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ಅರ್ಬಾಜ್ ಖಾನ್ ಎಂಬುವವರು ತಮ್ಮ ಆಟೊಗಳ ರಹದಾರಿ (ಪರ್ಮಿಟ್) ಪಡೆಯಲು ಶಾಂತಿನಗರದ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅವರ ವಾಹನಗಳ ರಹದಾರಿ ಪತ್ರಗಳು ಸಿದ್ದವಾಗಿದ್ದು, ಅವನ್ನು ನೀಡಲು ಪ್ರಥಮ ದರ್ಜೆ ಸಹಾಯಕ ವೆಂಕಟೇಶ್ ₹35,000 ಲಂಚ ಕೇಳಿದ್ದರು. ಈ ಬಗ್ಗೆ ಅರ್ಬಾಜ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ನ್ಯೂಸ್10ಕನ್ನಡ ರಿಪೋರ್ಟರ್ – ಸುನಿಲ್ ಗೌಡ 🖋️

Related Articles

Leave a Reply

Your email address will not be published. Required fields are marked *

Back to top button