ದೇಶಸುದ್ದಿ

ಮೂರನೇ ಬಾರಿಗೆ ತಾಯಿಯಾದ ಮಹಿಳೆ ಒಂದೇ ಸಲಕ್ಕೆ 7 ಮಕ್ಕಳನ್ನು ಹೆತ್ತಳು..!

ಒಂದು, ಎರಡು, ಮೂರು ಮಕ್ಕಳನ್ನು ಹೆತ್ತ ತಾಯಂದಿರನ್ನು ನೋಡಿರಬಹುದು ಅದರೆ ಇಲ್ಲೊಬ್ಬಳು ಮಹಿಳೆ ಬರೋಬ್ಬರಿ 7 ಮಕ್ಕಳಿಗೆ (7 Childrens) ಒಂದೇ ಬಾರಿ ಜನ್ಮ (Birth) ನೀಡಿದ್ದಾರೆ. ಮಹಿಳೆಯ ಹೊಟ್ಟೆಯಲ್ಲಿ ಅಷ್ಟೊಂದು ಮಕ್ಕಳನ್ನು ನೋಡಿದ ವೈದ್ಯರೇ ಅಚ್ಚರಿಗೊಂಡಿದ್ದು, ಇದು ಪವಾಡವೇ ಸರಿ ಎಂದು ಹೇಳಿದ್ದಾರೆ. ಅಂದಹಾಗೆಯೇ ಈ ಘಟನೆ ನಡೆದಿದ್ದು ಎಲ್ಲಿ ಗೊತ್ತಾ?

ಪಾಕಿಸ್ತಾನದಲ್ಲಿ (Pakistan) ಈ ಘಟನೆ ನಡೆದಿದೆ. ಅಲ್ಲಿನ ಖೈಬರ್​ ಫಖ್ತಂಖ್ವಾ ಅಬೋಟಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಏಕಕಾಲದಲ್ಲಿ 7 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಪ್ರಾರಂಭದಲ್ಲಿ ಅಲ್ಟ್ರಾಸೌಂಡ್​ ಮತ್ತು ಇನ್ನಿತರ ವರದಿಯನ್ನು ಗಮನಿಸಿದ ವೈದ್ಯರು  5 ಮಕ್ಕಳು ಮಹಿಳೆಯ ಹೊಟ್ಟೆಯಲ್ಲಿದ್ದಾರೆ ಎಂದು ಹೇಳಿದರು. ಆದರೆ ಹೆರಿಗೆ ವೇಳೆ 7 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಹಾಗೂ 7 ಮಕ್ಕಳು ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ.

ಯಾರ್​ ಮೊಹಮ್ಮದ್​ ​ ಅವರ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ತಕ್ಷಣ ಅಲ್ಲಿನ ಜಿನ್ನಾ ಅಂತರಾಷ್ಟ್ರಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈ ವೇಳೆ 7 ಮಕ್ಕಳಲ್ಲಿ ನಾಲ್ಕು ಗಂಡು ಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳಿಗೆ ಮೊಹಮ್ಮದ್​ ಪತ್ನಿ ಜನ್ಮ ನೀಡಿದರು.

Related Articles

Leave a Reply

Your email address will not be published. Required fields are marked *

Back to top button