ರಾಜ್ಯ

ಮೈಸೂರು ದಸರಾ: ಆನೆಗಳಿಗೆ ಭಾರ ಹೊರುವ ತಾಲೀಮು, ಮಾವುತರು, ಕಾವಾಡಿಗರಿಗೆ ಉಪಾಹಾರ ಕೂಟ, ಸಚಿವರು-ಶಾಸಕರು ಭಾಗಿ

ಮೈಸೂರು: ದಸರಾ ಉತ್ಸವದಲ್ಲಿ ಚಾಮುಂಡಿ ದೇವಿಯ ವಿಗ್ರಹವನ್ನು ಹೊರುವ ಅಭಿಮನ್ಯು ಮತ್ತು ಇತರ ಆತರ ಆನೆಗಳಿಗೆ ಶುಕ್ರವಾರ ಭಾರ ಹೊರುವ ತಾಲೀಮು ಮೈಸೂರು ಅರಮನೆ ಆರವರಣದಲ್ಲಿ ಆರಂಭವಾಗಿದೆ.

ಈ ಸಂದರ್ಭದಲ್ಲಿ ಇಂದು ಬೆಳಗ್ಗೆ ಅರಮನೆಯಲ್ಲಿ ಮಾವುತರಿಗೆ ಮತ್ತು ಕಾವಾಡಿಗರಿಗೆ ಉಪಾಹಾರವನ್ನು ಒದಗಿಸಲಾಯಿತು. ಮೈಸೂರು ಜಿಲ್ಲಾಡಳಿತ, ಕೆ ಆರ್ ಕ್ಷೇತ್ರದ ಶಾಸಕ ಎಸ್ ಎ ರಾಮದಾಸ್ ಉಪಾಹಾರ ಆತಿಥ್ಯವನ್ನು ಏರ್ಪಡಿಸಿದ್ದರು.

ಎಲ್ಲರಿಗೂ ಕೈಯಾರೆ ಉಪಾಹಾರಗಳನ್ನು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಶಾಸಕರು, ಜಿಲ್ಲಾಧಿಕಾರಿಗಳಾದ ಬಗಾದಿ ಗೌತಮ್ ತಿನಬಡಿಸಿದರು. ನಂತರ ಮಾವುತರು, ಕಾವಾಡಿಗರೊಂದಿಗೆ ಕುಳಿತು ಸಚಿವರು, ಶಾಸಕರು ಸಹ ಉಪಾಹಾರ ಸೇವಿಸಿದರು. ಆನೆಗಳ ಪಾಲನೆ, ಪೋಷಣೆ ಮಾಡುತ್ತಿರುವ ಕಾವಾಡಿಗರು ಹಾಗೂ ಮಾವುತರ ಕಾರ್ಯವನ್ನು ಪ್ರಶಂಸಿಸಿ ಅವರ ಯೋಗಕ್ಷೇಮ ವಿಚಾರಿಸಿದರು.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೌಂಟ್ ಡೌನ್ ಆರಂಭವಾಗಿದ್ದು ಇಂದಿನಿಂದ ನಾಲ್ಕೈದು ದಿನಗಳ ಕಾಲ ತೀವ್ರ ತಾಲೀಮು ಮೈಸೂರು ಅರಮನೆ ಆವರಣದಲ್ಲಿ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button