ಇತ್ತೀಚಿನ ಸುದ್ದಿರಾಜಕೀಯ

ಬಿಜೆಪಿಯಿಂದ ಸ್ಪರ್ಧಿಸಿವುದು ಖಚಿತ: ಮಾಜಿಶಾಸಕ ಪಿಳ್ಳಮುನಿಶಾಮಪ್ಪ ಸ್ಪಷ್ಟನೆ

ದೇವನಹಳ್ಳಿ :ಕಾಂಗ್ರೇಸ್ ಹಾಗೂ ಜೆಡಿಎಸ್‌ನ ಕೆಲ ಮುಖಂಡರು ಕಾಂಗ್ರೆಸ್ ನಿಂದ ಕೆ.ಎಚ್.ಮುನಿಯಪ್ಪ ಸ್ಪರ್ಧಿಸುತ್ತಿರುವುದರಿಂದ ಇಬ್ಬರು ಒಂದೇ ಸಮುದಾಯದವಾರಿಗುರುವುದರಿಂದ ಪಿಳ್ಳಮುನಿಶಾಮಪ್ಪನವರು ಬಿಜೆಪಿಯಿಂದ ಸ್ಪರ್ಧಿಸುವುದಿಲ್ಲ ಎಂದು ಇಲ್ಲಸಲ್ಲದ ಪ್ರಚಾರಮಾಡಿ ತಾಲೂಕಿನಲ್ಲಿ ಗೊಂದಲ ಸೃಷ್ಠಿಮಾಡುತ್ತಿದ್ದಾರೆ ನನಗೆ ಬಿಜೆಪಿಯಿಂದ ಪಕ್ಷದ ವರಿಷ್ಠರು ಟಿಕೇಟ್ ನೀಡುವ ವಿಶ್ವಾಸವಿದೆ ನನ್ನ ಎದುರಾಳಿ ಯಾರೇ ಆದರೂ ಸರಿ ನಾನು ಸ್ಪರ್ಧಿಸುವುದು ಖಚಿತ ತಾಲೂಕಿನ ಜನತೆ ಉಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಕೆ.ಎಚ್.ಮುನಿಯಪ್ಪನವರು ಹಿರಿಯ ರಾಜಕಾರಣಿ ಅವರ ಪಕ್ಷದಿಂದ ಅವರು ಸ್ಪರ್ಧಿಸುತ್ತಿದ್ದಾರೆ ನಾನು ಬಿಜಿಯಿಂದ ಸ್ಪರ್ಧಿಸುತ್ತಿದ್ದೇನೆ . ಇಬ್ಬರು ಒಂದೇ ಸಮುದಾಯವೆಂದ ಮಾತ್ರಕ್ಕೆ ನಾನು ಸ್ಪರ್ಧೆಯಿಂದ ಏಕೆ ಹಿಂದೆ ಸರಿಯಬೇಕು, ನಾನು ದೇವನಹಳ್ಳಿ

ತಾಲೂಕಿನಲ್ಲಿ ಕಳೆದ 30 ವರ್ಷದಿಂದ ಒಂದೇ ಪಕ್ಷದಲ್ಲಿ ಕೆಲಸ ಮಾಡಿ ಶಾಸಕನಾಗಿ ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಆದರೆ ತಾಲೂಕಿನಲ್ಲಿ ಆದ ಬದಲಾವಣೆ, ಅಕ್ರಮ, ಅನ್ಯಾಯಗಳನ್ನು ಸಹಿಸದೆ ನಾನು ಬಿಜೆಪಿ ಸೇರ್ಪಡೆಗೊಂಡೆ, ನಾನು ಪಕ್ಷಕ್ಕೆ ಸೇರುವಾಗ ಪಕ್ಷದ ವರಿಷ್ಠರು ನನಗೆ ಟಿಕೇಟ್ ನೀಡುವುದಾಗಿ ತಿಳಿಸಿದರು. ಅವರು ನನಗೆ ಟಿಕೇಟ್ ನೀಡುತ್ತಾರೆಂಬ ವಿಶ್ವಾಸವಿದೆ ಒಂದು ವಾರದಲ್ಲಿ ಎಲ್ಲದಕ್ಕೂ ತೆರೆಬೀಳಲಿದೆ, ಕೆ.ಎಚ್.ಮುನಿಯಪ್ಪನವರೆ ಅಲ್ಲದೆ ಬೇರೆ ಯಾರೇ ಬಂದು ದೇವನಹಳ್ಳಿಯಲ್ಲಿ ಸ್ಪರ್ಧೆ ಮಾಡಿದರು ನಾನು ಸ್ಪರ್ಧಿಸುತ್ತೇನೆ. 2023ಕ್ಕೆ ದೇವನಹಳ್ಳಿ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಬಾವುಟ ಹಾರಿಸಿಯೇ ತೀರುತ್ತೇನೆ. ತಾಲೂಕಿನ ಜನತೆ ಬದಲಾವಣೆ ಬಯಸುತ್ತಿದ್ದಾರೆ. ನಾಳೆಯಿಂದ ತಾಲೂಕಿನ ಪ್ರತಿ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಲಿದ್ದೇನೆ ಎಂದರು.
ಬಯಪ ಮಾಜಿ ಅಧ್ಯಕ್ಷ ಎಸ್.ಎಲ್.ಎನ್ ಅಶ್ವಥ್‌ನಾರಾಯಣ್ ಮಾತನಾಡಿ ಪಿಳ್ಳಮುನಿಶಾಮಪ್ಪನವರು ಶುದ್ದ ಹಸ್ತದ ವ್ಯಕ್ತಿ ಅವರು ಶಾಸಕರಾಗಿದ್ದಾಗ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳೇ ಅವರ ಗೆಲುವಿಗೆ ಕಾರಣವಾಗಲಿದೆೆ, ವಿರೋಧಪಕ್ಷಗಳು ಮೆಚ್ಚುವಂತಹ ಉತ್ತಮ ವ್ಯಕ್ತಿ ಪಿಳ್ಳಮುನಿಶಾಮಪ್ಪನವರು. ಒಂದೇ ಸಮುದಾಯದವರು ರಾಜ್ಯದ ಅನೇಕ ಕಡೆ ಸ್ಪರ್ಧಿಸುತ್ತಿದ್ದಾರೆ ಕೆ.ಎಚ್.ಮುನಿಯಪ್ಪನವರು ನಮ್ಮ ಪಕ್ಷದ ಅಭ್ಯರ್ಥಿ ಒಂದೇ ಸಮುದಾಯ ಎಂದ ಮಾತ್ರಕ್ಕೆ ಪಿಳ್ಳಮುನಿಶಾಮಪ್ಪನವರು ಸ್ಪರ್ಧಿಸುವುದು ಬೇಡವೆಂದು ಕೆಲವರು ತಾಲೂಕಿನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಪಿಳ್ಳಮುನಿಶಾಮಪ್ಪನವರು ದೇವನಹಳ್ಳಿ ಕ್ಷೇತ್ರದಿಂದ ಸ್ಪರ್ದಿಸುವುದು ಖಚಿತ ಗೆಲ್ಲುವುದು ಖಚಿತ ಕಾಂಗ್ರೇಸ್‌ನ ಹಾಗೂ ಜೆಡಿಎಸ್ ಅನೇಕ ಅತೃಪ್ತ ಮುಖಂಡರು ಬಿಜೆಪಿ ಪಕ್ಷಕ್ಕೆ ಅತಿ ಶೀಘ್ರದಲ್ಲೇ ಸೇರ್ಪಡೆಯಾಗಲಿದ್ದಾರೆ. ಮುಂದಿನ ದಿನಗಳಲ್ಲಿ ಸೇರ್ಪಡೆ ಪರ್ವ ಪ್ರಾರಂಭವಾಗಲಿದೆ ಎಂದರು.
ಇದೆ ವೇಳೆ ಪುರಸಭೆ ಸದಸ್ಯ ಬಾಂಬೆನಾರಾಯಣಸ್ವಾಮಿ, ಬಿಜೆಪಿ ಮುಖಂಡರಾದ ದೇಸುನಾಗರಾಜ್, ಟೌನ್ ಅಧ್ಯಕ್ಷ ಸಂದೀಪ್, ಮಂಜುನಾಥ್, ನಾರಾಯಣಸ್ವಾಮಿ, ಮುಂತಾದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button