ರಾಜಕೀಯ

ಬಿಎಸ್​ವೈ ವಿರುದ್ಧ ಗುಂಪು ಕಟ್ಟಿದ್ರೆ, ಹೆತ್ತವರಿಗೆ ದ್ರೋಹ ಮಾಡಿದ ರೀತಿ -ಈಶ್ವರಪ್ಪ

ಬೆಂಗಳೂರು: ನಾನು ಇವತ್ತು ಬೆಳೆಯುವುದಕ್ಕೆ ಕಾರಣ ಒಂದು ಸಂಘ, ಮತ್ತೊಂದು ಯಡಿಯೂರಪ್ಪ ಅವರು. ನಾನು ಏನಾದರೂ ಯಡಿಯೂರಪ್ಪ ವಿರುದ್ಧ ಗುಂಪು ಕಟ್ಟಿದರೆ, ಅದು ನಮ್ಮ ತಂದೆ ತಾಯಿಗೆ ಮಾಡಿದ ದ್ರೋಹದ ರೀತಿ ಎಂದು ಸಚಿವ ಕೆ.ಎಸ್​ ಈಶ್ವರಪ್ಪ ಮಾಜಿ ಸಿಎಂ ಬಿಎಸ್​​ ಯಡಿಯೂರಪ್ಪ ಅವರನ್ನು ನೆನೆದು ಭಾವುಕರಾಗಿದ್ದಾರೆ.

ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಪದಗ್ರಹಣ ಸಮಾರಂಭದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ.

ಪಾದಯಾತ್ರೆಗೆ ಮಲ್ಲಿಕಾರ್ಜುನ ಖರ್ಗೆ, ವೀರಪ್ಪಮೊಯ್ಲಿ, ಅಜಯಸಿಂಗ್, ಮೋಟಮ್ಮ, ಮಲ್ಲಾಜಮ್ಮ ಸೇರಿದಂತೆ ಅನೇಕರು ಹೋಗಿದ್ದರು. ಇವರು ಮನೆಯಲ್ಲಿದ್ದಾಗ ಸೋಂಕು ಇರಲಿಲ್ಲ. ಪಾದಯಾತ್ರೆಗೆ ಹೋಗಿದ್ದಕ್ಕೆ ಕೊರೊನಾ ಬಂತು. ದಯವಿಟ್ಟು ನೀವು ಆರೋಗ್ಯವಾಗಿರಿ, ನಮ್ಮನ್ನು ಆರೋಗ್ಯವಾಗಿ ಇರೋದಕ್ಕೆ ಬಿಡಿ ಅಂತಾ ಮೊದಲಿನಿಂದಲೂ ಅವರಿಗೆ ಮನವಿ ಮಾಡಿದೆ.ಕೋವಿಡ್ ಮುಗಿದ ನಂತರ ನೀವು ಎಷ್ಟಾದರೂ ಪಾದಯಾತ್ರೆ ಮಾಡಿ. ಇದರಲ್ಲಿ ಯಾವುದೇ ರಾಜಕಾರಣ ಇಲ್ಲ ಎಂದರು.

ಇನ್ನು ನಮ್ಮ ಪಕ್ಷ ಬೇರೆ ಇರಬಹುದು, ಅವರ ಪಕ್ಷ ಬೇರೆ ಇರಬಹುದು. ಆದರೆ ಅವರುಗಳು ಸಹ ನಮ್ಮ ಸ್ನೇಹಿತರೇ.. ಕಾಂಗ್ರೆಸ್ ಅಧಿಕಾರದಲ್ಲಿ ಇರುವ ರಾಜ್ಯದಲ್ಲಿ ಕೋವಿಡ್ ಜಾಸ್ತಿ ಇಲ್ವಾ. ಎಲ್ಲದಕ್ಕೂ ರಾಜಕಾರಣ ಬೆರೆಸುವುದು ಒಳ್ಳೆಯದಲ್ಲ.. ಮೇಕೆದಾಟು ಪಾದಯಾತ್ರೆಯಲ್ಲಿ ಕೇವಲ ಕಾರ್ಯಕರ್ತರಿಗೆ ಸೋಂಕು ತಗುಲಲಿಲ್ಲ.. ಅವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದು ಅಷ್ಟೇ ಅಲ್ಲ, ಅವರು ಸೋಂಕು ಅಂಟಿಸಿಕೊಂಡು, ಅವರ ಊರಿನವರಿಗು ಸೋಂಕು ಅಂಟಿಸಿದರು. ಈ ಉದ್ದೇಶದಿಂದಲೇ ಕೋವಿಡ್ ಮುಗಿದ ಮೇಲೆ ಪಾದಯಾತ್ರೆ ನಡೆಸಿ ಎಂದಿದ್ದು. ಇದರಲ್ಲಿ ಅವರು ರಾಜಕಾರಣ ಮಾಡ್ತೀವಿ ಅಂದ್ರೆ, ನಾವು ಏನು ಮಾಡಲು ಆಗುತ್ತದೆ ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button