ಬಹುದೊಡ್ಡ ದಾಖಲೆ ಬರೆದ ಪುನೀತ್ ಅವರ ಗಂಧದಗುಡಿ ಟೀಸರ್…!
ಕನ್ನಡ ಚಿತ್ರರಂಗದಲ್ಲಿ ಬಾಲ್ಯದಿಂದಲೇ ಹಲವಾರು ಪ್ರಶಸ್ತಿಗಳನ್ನು ಹಾಗೂ ದಾಖಲೆಗಳನ್ನು ಮಾಡುತ್ತಾ ಬಂದ ಶ್ರೇಷ್ಠ ನಟ ಎಂದರೆ ಅದು ಪುನೀತ್ ರಾಜಕುಮಾರ್. ಹೌದು ಬಾಲ್ಯದಿಂದಲೇ ಅವರು ತಮ್ಮ ತಂದೆಯೊಂದಿಗೆ ಅನೇಕ ಸಿನಿಮಾಗಳಲ್ಲಿ ನಟಿಸುವುದರೊಂದಿಗೆ ಹಾಡುಗಳನ್ನು ಹಾಡುತ್ತಾ ಅನೇಕ ದಾಖಲೆಗಳನ್ನು ಬರೆದವರು. ಇನ್ನೂ ಇಂತಹ ಮಹಾನ್ ನಟ ಇಂದು ನಮ್ಮ ಜೊತೆಗೆ ಇಲ್ಲವೆಂದು ನೆನೆಸಿಕೊಂಡರೆ ನಿಜಕ್ಕೂ ದುಃಖವಾಗುತ್ತದೆ.
ಹೌದು ಸಿನಿಮಾರಂಗದಲ್ಲಿ ಹಲವಾರು ಕನಸುಗಳನ್ನು ಕಂಡಿದ್ದ ಪುನೀತರಾಜಕುಮಾರ್ ಅವರು ಇದೀಗ ಇಹಲೋಕ ತ್ಯಜಿಸಿದ್ದು ಕನ್ನಡಿಗರಿಗೆ ತುಂಬಾ ದುಃಖವಾಗಿದೆ. ಪುನೀತ್ ರಾಜಕುಮಾರ್ ಅವರು ಇನ್ನೂ ಹಲವಾರು ವಿಭಿನ್ನ ಪಾತ್ರಗಳಲ್ಲಿ ನಟಿಸುವ ಬಯಕೆಯನ್ನು ಹೊಂದಿದ್ದರು. ಆದರೆ ದೇವರ ಆಟ ಬಲ್ಲವರಾರು ಎಂಬಂತೆ ಅವರು ತಮ್ಮ ಕನಸುಗಳನ್ನು ಬದಿಗೊತ್ತಿ ಇಹಲೋಕ ತ್ಯಜಿಸಿದ್ದರು. ಅವರು ನಮ್ಮೊಂದಿಗೆ ಇಲ್ಲ ಎಂಬ ಭಾವನೆ ಇಲ್ಲವಾದರೂ ಕೂಡ ಅವರನ್ನು ಕಳೆದುಕೊಂಡ ದುಃಖ ಇದೀಗ ಕನ್ನಡಿಗರ ಮನಸ್ಸಿನಲ್ಲಿದೆ. ಇದೀಗ ಪುನೀತ್ ಅವರು ಅಭಿನಯಿಸಿದ ಗಂಧದಗುಡಿ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಹೌದು ಇದೀಗ ಗಂಧದಗುಡಿ ಟೀಸರ್ ಯೂಟ್ಯೂಬ್ ನಲ್ಲಿ ದಾಖಲೆಯನ್ನು ಬರೆದಿದೆ.
ಆದರೆ ಅವರು ಅಭಿನಯಿಸಿದ ಚಿತ್ರ ಜೇಮ್ಸ್ ಯಾವಾಗ ಬಿಡುಗಡೆಯಾಗುತ್ತದೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ಮಧ್ಯದಲ್ಲಿ 07/12/21 ನೇ ಮಂಗಳವಾರ ತಾನೇ ಪುನೀತ್ ಅಭಿನಯದ ಗಂಧದಗುಡಿ ಟೀಸರ್ ಬಿಡುಗಡೆಯಾಗಿದೆ. ಹೌದು ಪಿ ಆರ್ ಕೆ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಣವಾದ ಗಂಧದಗುಡಿ ಟೀಸರ್ ಇದೀಗ ಬಿಡುಗಡೆಯಾಗಿದ್ದು ದಾಖಲೆಯನ್ನು ಬರೆದಿದೆ. ಯೂಟ್ಯೂಬ್ ನಲ್ಲಿ ಟೀಸರ್ ದಾಖಲೆಯ ವೀಕ್ಷಣೆ ಕಂಡಿದ್ದು, ಕನ್ನಡದ ಕೆಜಿಎಫ್ ಸಿನಿಮಾದ ನಂತರ ಈ ರೀತಿ ದಾಖಲೆ ಕಂಡಿರುವುದು ಪುನೀತ್ ಅವರು ಅಭಿನಯಿಸಿದ ಗಂಧದಗುಡಿ ಸಿನಿಮಾ ಟೀಸರ್. ಇದೀಗ ಈ ಟೀಸರ್ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿಯಲ್ಲಿದೆ. ಅಷ್ಟೇ ಅಲ್ಲದೆ ಪುನೀತ್ ಅವರ ಸಾಕಷ್ಟು ಅಭಿಮಾನಿಗಳು ದುಃಖದ ನಡುವೆಯೂ ಕೂಡ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ತೆರೆಮೇಲೆ ಪುನೀತ್ ಅವರನ್ನು ನೋಡುವ ಭಾಗ್ಯ ಸಿಗುತ್ತದೆ ಎಂಬ ಒಂದು ಸಂತಸ ಮೂಡಿದೆ.
ಗಂಧದಗುಡಿ ಟೀಸರ್ ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚಿಸಿದ್ದು, ಪರಿಸರದ ನಡುವೆ ಪುನೀತ್ ಅವರ ಅಭಿನಯವನ್ನು ನೋಡುವ ಭಾಗ್ಯ ಅವರ ಅಭಿಮಾನಿಗಳಿಗೆ ಸಿಕ್ಕಿದೆ. ಈ ಮೂಲಕ ಮತ್ತೊಮ್ಮೆ ಕನ್ನಡವನ್ನು ಎತ್ತಿ ಹಿಡಿಯಲಾಗಿದೆ. ಹೀಗೆ ಚಿತ್ರರಂಗದಲ್ಲಿ ಕನ್ನಡದ ಸಿನಿಮಾಗಳು ಒಂದರ ಮೇಲೆ ಮತ್ತೊಂದು ದಾಖಲೆಯನ್ನು ಬರೆಯುತ್ತ ಬಂದಿವೆ. ಇನ್ನು ಇದೀಗ ಪುನೀತ್ ಅವರು ನಮ್ಮೊಂದಿಗೆ ಇಲ್ಲವಾದರೂ ಕೂಡ ಅವರ ಅಭಿನಯ ನಮ್ಮೊಂದಿಗೆ ಸದಾ ಇರುತ್ತದೆ ಎಂದು ಹೇಳಬಹುದು.
ಯೂಟ್ಯೂಬ್ ನಲ್ಲಿ ಗಂಧದಗುಡಿ ಟೀಸರ್ 30 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, ಭಾರತ ಚಿತ್ರರಂಗದಲ್ಲಿ ಮತ್ತೊಮ್ಮೆ ಕನ್ನಡದ ಚಿತ್ರ ಸುದ್ದಿಯಾಗಿದೆ. ಪಿ ಆರ್ ಕೆ ಪ್ರೊಡಕ್ಷನ್ ಹೌಸ್ ಮೂಲಕ ಯೂಟ್ಯೂಬ್ನಲ್ಲಿ ಗಂಧದಗುಡಿ ಟೀಸರ್ ಬಿಡುಗಡೆಯಾಗಿದೆ. ಒಂದೇ ದಿನಕ್ಕೆ ಇಷ್ಟೊಂದು ವೀಕ್ಷಣೆ ಪಡೆದಿರುವ ಈ ಸಿನಿಮಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದೆ. ಇನ್ನು ಪುನೀತ್ ಅವರ ಅಭಿಮಾನಿಗಳು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ಅವರನ್ನು ನೆನೆದು ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಅನೇಕ ಅಭಿಮಾನಿಗಳು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ.