ಪ್ರಯಾಣದ (Travelling) ವೇಳೆ ಕೆಲ ಪ್ರಯಾಣಿಕರಿಗೆ (Passengers) ಹಾಡು ಕೇಳುವ ಹುಚ್ಚು ಇರುತ್ತದೆ. ಇಯರ್ ಫೋನ್ ಹಾಕಿ ಸಹ ಪ್ರಯಾಣಿಕರಿಗೆ ತೊಂದರೆ ಅಗದಿದ್ರೆ ಪರವಾಗಿಲ್ಲ. ಆದ್ರೆ ಕೆಲವರು ಸ್ಪೀಕರ್ ಆನ್ (Mobile Speaker) ಮಾಡಿಕೊಂಡು ಹಾಡು ಕೇಳುತ್ತಾರೆ. ಇನ್ನುಂದಿಷ್ಟು ಜನ ಬಸ್ (Bus) ನಲ್ಲಿಯೇ ಇಡೀ ಸಿನಿಮಾ ನೋಡ್ತಾರೆ. ಈ ನಡವಳಿಕೆ ಇತರ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತದೆ.
ಬಸ್ ಪ್ರಯಾಣ ಅಂದ್ರೆ ಒಂದು ನಿರ್ಧಿಷ್ಟ ಸ್ಥಳದಲ್ಲಿ ಸುಮಾರು 50ಕ್ಕೂ ಹೆಚ್ಚು ಜನರು ಕುಳಿತಿರುತ್ತಾರೆ, ಮಕ್ಜಳು, ಹಿರಿಯರು, ವೃದ್ಧರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಪ್ರಯಾಣಿಕರು ಇರುತ್ತಾರೆ, ಆದ್ರೆ ಯಾರೋ ಓರ್ವ ಪ್ರಯಾಣಿಕ ಮೊಬೈಲ್ ಜೋರಾಗಿ ಶಬ್ಧ ಮಾಡಿಕೊಂಡು ಹಾಡು ಕೇಳೋದು ಮತ್ತೊಬ್ಬರಿಗೆ ಅಹಿತಕರವಾಗಿರುತ್ತದೆ.
ಈ ಹಿನ್ನೆಲೆ ಪ್ರಯಾಣಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸ ಸುತ್ತೋಲೆ ಹೊರಡಿಸಿದೆ. ಸಾರಿಗೆ ನಿಗಮದ ಹೊಸ ಆದೇಶವನ್ನು ಸಾರ್ವಜನಿಕರು ಸಹ ಸ್ವಾಗತಿಸಿದ್ದಾರೆ. ಬಸ್ ಪ್ರಯಾಣದ ವೇಳೆ ಜೋರಾಗಿ ಶಬ್ಧ ಮಾಡುವವರು ಈ ನಿಯಮವನ್ನು ಪಾಲಿಸಬೇಕು.