ಇತ್ತೀಚಿನ ಸುದ್ದಿವಿದೇಶಸುದ್ದಿ
ಬರೋಬ್ಬರಿ 34 ದಿನಗಳ ನಂತರ ಉಕ್ರೇನ್ ಮತ್ತು ರಷ್ಯಾ ನಡುವೆ ಶಾಂತಿ ಮಾತುಕತೆ!
ಕೀವ್ : ಊರೆಲ್ಲಾ ಉರಿದು ಹೋದ್ಮೇಲೆ ಇಬ್ಬರು ನಾಯಕರಿಗೆ ಬುದ್ದಿ ಬಂದಂತೆ ಕಾಣುತ್ತಿದ್ದು, ಬರೋಬ್ಬರಿ 34 ದಿನಗಳ ನಂತರ ಉಕ್ರೇನ್ ಮತ್ತು ರಷ್ಯಾ ನಡುವೆ ಶಾಂತಿ ಮಾತುಕತೆ ಫಲ ಕೊಡುತ್ತಿದೆ.
6ನೇ ಸುತ್ತಿನ ಮಾತುಕತೆಯಲ್ಲಿ ಸೇನೆ ವಾಪಸಾತಿಗೆ ರಷ್ಯಾ ಒಪ್ಪಿಕೊಂಡಿದೆ. ಮೊದಲ ಹಂತದಲ್ಲಿ ಕಿವ್ ಮತ್ತು ಚೆರ್ನಿವ್ ನಿಂದ ರಷ್ಯಾ ಸೇನೆ ಹಿಂತಿರುಗಲಿದೆ. ಸದ್ಯದಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಆದ್ರೆ ಸೇನೆ ವಾಪಸ್ ಬಗ್ಗೆ ಪುಟಿನ್ ಆಡುತ್ತಿರುವ ಮಾತುಗಳನ್ನು ನಂಬಲಾಗದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಿಡಿಕಾರಿದ್ದಾರೆ.