ವಿದೇಶ
Trending

ಬಡ ದೇಶಗಳಿಗೆ ಲಸಿಕೆಗಾಗಿ ನೀಡಲಾಗುವ ಹಣಕ್ಕೆ ಕತ್ತರಿ ಹಾಕಿದ ಡೊನಾಲ್ಡ್ ಟ್ರಂಪ್ ಸರ್ಕಾರ

ವಾಷಿಂಗ್ಟನ್ : ಡೊನಾಲ್ಡ್ ಟ್ರಂಪ್ ಸರ್ಕಾರವು ವ್ಯಾಕ್ಸಿನ್ ಗಾಗಿ ಮೀಸಲಾಗಿಟ್ಟಿರುವ GAVI ( Global Alliance for Vaccines and Immunization ) ಹಣವನ್ನು ಕಡಿತಗೊಳಿಸಲು ನಿರ್ಧರಿಸಿದೆ. ಇದೊಂದು ಜಾಗತಿಕ ಆರೋಗ್ಯ ಸಂಸ್ಥೆಯಾಗಿದ್ದು, ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಲಸಿಕೆಗಳನ್ನು ನೀಡುತ್ತದೆ.USAID ಸಂಸ್ಥೆಯು ಅಮೆರಿಕಾ ಕಾಂಗ್ರೆಸ್‌ಗೆ ಕಳುಹಿಸಿದ 281 ಪುಟಗಳ ವರದಿಯಲ್ಲಿ ಈ ನಿರ್ಧಾರವನ್ನು ಸೇರಿಸಲಾಗಿದೆ. ಅಮೆರಿಕದ ಈ ನಿರ್ಧಾರದಿಂದ ಲಸಿಕೆಗಳನ್ನು ಪಡೆಯುವ ಬಡ ರಾಷ್ಟ್ರಗಳಿಗೆ ತೊಂದರೆಯಾಗಲಿದೆ. ಯಾವ ಅನುದಾನವನ್ನು ಮುಂದುವರಿಸಬೇಕು ಮತ್ತು ಯಾವುದನ್ನು ರದ್ದುಗೊಳಿಸಬೇಕು ಎನ್ನುವುದನ್ನು ಈ ಸಂಸ್ಥೆ ನಿರ್ಧರಿಸುತ್ತದೆ.ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಅಮೆರಿಕಾವು ಮಲೇರಿಯಾಗೆ ಸಂಬಂಧ ಪಟ್ಟಂತೆ ಆರೋಗ್ಯ ವಲಯದಲ್ಲಿ ನೀಡಲಾಗುವ ಬೆಂಬಲವನ್ನು ಕಡಿಮೆ ಮಾಡಲಿದೆ. ಆದರೆ, ಆದರೆ HIV, ಕ್ಷಯರೋಗ ಮತ್ತು ಆಹಾರ ಭದ್ರತೆಗೆ ನೀಡಲಾಗುತ್ತಿರುವ ಸಹಾಯವನ್ನು ಮುಂದುವರಿಸಲಿದೆ. ಈ ಸಹಾಯವು, ವಿವಿಧ ಆಂತರಿಕ ಸಂಘರ್ಷಗಳನ್ನು ಮತ್ತು ನೈಸರ್ಗಿಕ ವಿಕೋಪಗಳನ್ನು ಎದುರಿಸುತ್ತಿರುವ ದೇಶಗಳಿಗೆ ಮಾತ್ರ ಸಿಗುತ್ತಿದೆ.USAID ಸಂಸ್ಥೆಯಲ್ಲಿ ಸುಮಾರು ಆರು ಸಾವಿರ ಉದ್ಯೋಗಿಗಳು ಈ ಹಿಂದೆ ಇದ್ದರು, ಈಗ ಕೇವಲ 869 ಉದ್ಯೋಗಿಗಳು ಮಾತ್ರ ಕೆಲಸ ಮಾಡುತ್ತಿದ್ದಾರೆ. ಟ್ರಂಪ್ ಆಡಳಿತವು ಸುಮಾರು 900 ವಿವಿಧ ಅನುದಾನಗಳನ್ನು ಮಾತ್ರ ಮುಂದುವರಿಸಲು ನಿರ್ಧರಿಸಿದೆ.5,340 ಕ್ಕೂ ಹೆಚ್ಚು ಅನುದಾನಗಳನ್ನು ರದ್ದುಗೊಳಿಸಲು ಟ್ರಂಪ್ ಸರ್ಕಾರ ನಿರ್ಧರಿಸಿದೆ. ಈ ಸಂಸ್ಥೆಯ ತಮ್ಮ ವಾರ್ಷಿಕ ಬಜೆಟ್‌ನಲ್ಲಿ ಸುಮಾರು $40 ಬಿಲಿಯನ್ ಕಡಿತಗೊಳಿಸುವ ಯೋಜನೆಯನ್ನು ಹಾಕಿಕೊಂಡಿದೆ. ಈ ಸಂಸ್ಥೆಯನ್ನು ಸ್ಟೇಟ್ ಡಿಪಾರ್ಟ್‌ಮೆಂಟ್‌ನೊಂದಿಗೆ ವಿಲೀನಗೊಳಿಸುವ ನಿರ್ಧಾರಕ್ಕೂ ಟ್ರಂಪ್ ಸರ್ಕಾರ ಬಂದಿದೆ.GAVI ಯು ಸ್ವಿಜರ್ಲ್ಯಾಂಡಿನ ಜಿನೀವಾದಲ್ಲಿ ತಮ್ಮ ಪ್ರಧಾನ ಕಚೇರಿಯನ್ನು ಹೊಂದಿದೆ. ಇದು, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದೊಂದಿಗೆ ನಡೆಯುತ್ತಿರುವ ಸಂಸ್ಥೆ. “ಅಮೆರಿಕಾದ ಬೆಂಬಲ ನಮಗೆ ಅತ್ಯಂತ ನಿರ್ಣಾಯಕ. ಅಮೆರಿಕಾದ ಸಹಕಾರದೊಂದಿಗೆ ಮುಂದಿನ ಐದು ವರ್ಷಗಳಲ್ಲಿ 8 ಮಿಲಿಯನ್ ಜೀವಗಳನ್ನು ಉಳಿಸಬಹುದಾಗಿದೆ. ಮತ್ತು, ಲಕ್ಷಾಂತರ ಮಕ್ಕಳಿಗೆ ಆರೋಗ್ಯಕರವಾದ ಭವಿಷ್ಯವನ್ನು ನೀಡಬಹುದಾಗಿದೆ” ಗವಿಯ ಅಧಿಕಾರಿಗಳು ಹೇಳಿದ್ದಾರೆ.ಅಮೆರಿಕಾವು ತನ್ನ ಆರ್ಥಿಕ ಸಹಾಯವನ್ನು ಹಿಂದಕ್ಕೆ ಪಡೆದುಕೊಂಡರೆ, ಲಸಿಕೆಗಳ ಮೂಲಕ ತಡೆಗಟ್ಟಬಹುದಾದ ರೋಗಗಳಿಂದ ಜನರನ್ನು ರಕ್ಷಿಸಲು ಭಾರೀ ಹೊಡೆತ ಬೀಳಲಿದೆ. ಇಷ್ಟೇ ಅಲ್ಲದೇ, ಇಂತಹ ರೋಗಗಳು ಅಮೆರಿಕಾದಲ್ಲಿ ಹರಡುವುದೂ ಹೆಚ್ಚಾಗಲಿದೆ ಎಂದು ಜಾನ್ಸ್ ಹಾಪ್ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಅಂತರರಾಷ್ಟ್ರೀಯ ಲಸಿಕೆಗಳ ಪ್ರವೇಶ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ವಿಲಿಯಂ ಮಾಸ್ ಹೇಳಿದ್ದಾರೆ.ಇದುವರೆಗೆ ಅಂದರೆ, ಕಳೆದ 25 ವರ್ಷಗಳಲ್ಲಿ ಅಮೆರಿಕಾದ ಬೆಂಬಲದಿಂದಾಗಿ 18 ಮಿಲಿಯನ್ ಜೀವಗಳನ್ನು ಉಳಿಸಲು ಸಹಾಯವಾಗಿತ್ತು. 19 ದೇಶಗಳು Gavi ಯ ಬೆಂಬಲದಿಂದ ರೋಗಮುಕ್ತವಾಗಿ ಹೊರಬರಲು ಸಾಧ್ಯವಾಯಿತು. ಅಮೆರಿಕವು ಗವಿಯ ಬಜೆಟಿನ ವಾರ್ಷಿಕ ಕಾಲು ಭಾಗದಷ್ಟು ಹಣವನ್ನು ನೀಡುತ್ತಿದೆ. Gavi ಸಂಸ್ಥೆಯು ಬಡ ದೇಶಗಳಿಗೆ ಲಸಿಕೆಗಳನ್ನು ನೀಡುವಲ್ಲಿ ಸಹಾಯ ಮಾಡುತ್ತದೆ.


Related Articles

Leave a Reply

Your email address will not be published. Required fields are marked *

Back to top button