ಫಲಾನುಭವಿಗಳ ಸಮಾವೇಶ ಯಶಸ್ವಿಗೊಳಿಸಿ-ನಾಡಗೌಡ
ಮುಂಜಾನೆ ವಾರ್ತೆ ಸುದ್ದಿ ತಾಳಿಕೋಟಿ: ಪಟ್ಟಣದಲ್ಲಿ ಮಾರ್ಚ್ 11ರಂದು ಶ್ರೀಸಂಗಮೇಶ್ವರ ಸಭಾ ಭವನದಲ್ಲಿ ನಡೆಯಲಿರುವ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರೆಂಟಿ ಯೋಜನೆ ಫಲಾನುಭವಿಗಳ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ಸೋಪು ಮತ್ತು ಡಿಟರ್ಜೆಂಟ್ ಕಂಪನಿಯ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾವೇಶದ ಸಿದ್ಧತೆಗಳ ಪರಶೀಲನೆ ಗಾಗಿ ಕರೆದ ಕಾರ್ಯಕರ್ತರ ಸಭೆಯ ನಂತರ ಅವರು ಪತ್ರಿಕೆಯೊಂದಿಗೆ ಮಾತನಾಡಿದರು. ಕಾಂಗ್ರೆಸ್ ಪಕ್ಷವು ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಐದು ಗ್ಯಾರಂಟಿಗಳ ಭರವಸೆಯನ್ನು ಅನುಷ್ಠಾನಕ್ಕೆ ತಂದಿದೆ. ಈ ಯೋಜನೆಗಳಿಂದ ಸುಮಾರು ಶೇ.90 ರಷ್ಟು ಜನರು ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಈ ಯೋಜನೆಗಳು ರಾಷ್ಟ್ರ ವ್ಯಾಪಿಯಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಇದು ಕರ್ನಾಟಕ ಕಾಂಗ್ರೆಸ್ ಪಕ್ಷದ ಒಂದು ಐತಿಹಾಸಿಕವಾದ ಕಾರ್ಯವಾಗಿದೆ ಈ ಯೋಜನೆ ಮಹತ್ವವನ್ನು ಜನರ ಮುಂದಿಡಲು ಹಾಗೂ ಅವುಗಳ ಅನುಷ್ಠಾನದ ಕುರಿತು ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಅದನ್ನು ಇನ್ನಷ್ಟು ಪ್ರಭಾವಪೂರ್ಣವಾಗಿ ಮಾಡುವ ಉದ್ದೇಶದಿಂದ ರಾಜ್ಯಾದ್ಯಂತ ಅದರ ಫಲಾನುಭವಿಗಳ ಸಮಾವೇಶವನ್ನು ಮಾಡಲಾಗುತ್ತಿದೆ ಪಟ್ಟಣದಲ್ಲಿ ಈ ಸಮಾವೇಶವು ಮಾರ್ಚ್ 10 ರಂದು ನಡೆಯಬೇಕಾಗಿತ್ತು ಆದರೀಗ ಕಾರಣಾಂತರಗಳಿಂದ ಇದು ಮಾರ್ಚ್ 11 ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಫಲಾನುಭವಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿಕೊಂಡರು. ಈ ಸಮಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಬೂಬ ಚೋರಗಸ್ತಿ. ಜಿಲ್ಲಾ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ (ನಾವದಗಿ). ಮುಖಂಡರಾದ ಸುರೇಶ ನಾಡಗೌಡ (ಬಿಂಜಲಬಾವಿ). ಪ್ರಭುಗೌಡ ಮದರಕಲ್ಲ.ಸಿ.ಬಿ.ಅಸ್ಕಿ. ವಿಜಯಸಿಂಗ ಹಜೇರಿ.ಶರಣಗೌಡ ದೇಶಮುಖ. ಇಬ್ರಾಹಿಂ ಮನ್ಸೂರ. ಫಯಾಜ ಉತ್ನಾಳ. ಪುರಸಭೆ ಸದಸ್ಯರಾದ ಅಕ್ಕ ಮಹಾದೇವಿ ಕಟ್ಟಿಮನಿ. ಮಲ್ಲಿಕಾರ್ಜುನ ಪಟ್ಟಣಶೆಟ್ಟಿ. ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ರಫೀಕ ಬೇಪಾರಿ ಮತ್ತಿತರರು ಇದ್ದರು