ಪ್ರೀತಿಯ ಅಕ್ಕನಿಗೆ ಗೌರವ ಡಾಕ್ಟರೇಟ್
ರೈತರು, ಸಹಕಾರ ಸಂಘಗಳ ಸಂಸ್ಥಾಕರದ ಎಲ್ .ಲಿಂಗಯ್ಯ ಲಲಿತಮ್ಮನವರ ಜೇಷ್ಟ ಪುತ್ರಿ ಮೈಸೂರು ಸ್ಯಾಂಡ್ಲ್ ಸೋಪ್ ಕಾರ್ಖಾನೆ ಆಕೌಂಟ್ ವಿಭಾಗದ ಮುಖ್ಯ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಗೋಪಾಲಕೃಷ್ಣ ರವರೊಂದಿಗೆ ಮದುವೆ.
ನಂತರ ದಿನಗಳಲ್ಲಿ ಸಮಾಜಸೇವೆ ಕತ್ತರಿಗುಪ್ಪೆ ಮುಂತಾದಕಡೆಯಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವುದರೊಂದಿಗೆ ಮಕ್ಕಳಿಗೆ ಪುಸ್ತಕಗಳು ನೀಡುವುದು ಮಕ್ಕಳನ್ನೂ ಪ್ರವಾಸಕ್ಕೆ ಕರೆದುಕೊಂಡು ಹೋಗುವುದರೊಂದಿಗೆ ಸಮಾಜಸೇವೆ ತೊಡಗಿಕೊಂಡವರು ನಂತರ ಕಾವೇರಿ ಹೋರಾಟ ಕಾಂಗ್ರೆಸ್ ನೊಂದಿಗೆ ಒಡನಾಟ ಆರಂಭಿಸಿದರು.
ಕಾಂಗ್ರೆಸ್ ಪಕ್ಷ ಇವರ ನಿರಂತರ ಹೋರಾಟ ನೋಡಿ ಕಳೆದ ಬಾರಿ ಬೆಂಗಳೂರು ನಗರಸಭೆ ವಾರ್ಡ್ 164 ರಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಕಡಿಮೆ ಅಂತರದಿಂದ ಸೋಲು ಕಂಡರು.
ತದನಂತರ ಧೃತಿಗೆಡದೆ ನಿರಂತರ ಜನಸೇವೆಯನ್ನು ಮಾಡುತ್ತಾಬಂದಿದ್ದಾರೆ.
ಕೋವಿಡ್ ಸಮಯದಲ್ಲಿ ಜನಸೇವೆ
ಕೋವಿಡ್ ಮೊದಲ ಅಲೆಯಲ್ಲಿ ಜನರ ಪರದಾಟವನ್ನೂ ನೋಡಿದ ಇವರು ಕೋವಿಡ್ ನಿಂದಾಗಿ ಮನೆಯಿಂದ ಹೊರಗೆ ಬಾರದೆ ಮನೆಯಲ್ಲಿಯೇ ಇದ್ದಂತಹ ಜನರಿಗೆ ದಿನ ನಿತ್ಯ ತರಕಾರಿಯನ್ನು ಬಡವರಿಗೆ ಉಚಿತವಾಗಿ 3 ತಿಂಗಳಿಗೂ ಅಧಿಕ ದಿನ ವಿತರಣೆ ಮಾಡಿದುಂಟ್ಟು.
ಇದೆ ಕೋವಿಡ್ ಸಂಧರ್ಭದಲ್ಲಿ ರೈತರು ಬೆಳೆದ ತರಕಾರಿ ಮಾರಾಟವಾಗದೆ ಇದ್ದಾಗ ರೈತರ ಬಳಿ ನೇರವಾಗಿ ಹೋಗಿ ತರಕಾರಿಯನ್ನೂ ಹಣ ನೀಡಿ ತಂದು ಬಡಜನರಿಗೆ ಉಚಿತವಾಗಿ ನೀಡಿರುವುದುಂಟು.
ಕೋವಿಡ್ 2 ಅಲೆಯಲ್ಲಿ ನೇರವಾಗಿ ರೈತರಿಂದ ತರಕಾರಿಗಳನ್ನು ತಂದು ಮನೆಯಲ್ಲಿ ತಿಂಡಿ ಮಾಡಿಕೊಂಡು ಬಿಸಿ ಬಿಸಿ ತಿಂಡಿಗಳನ್ನೂ ರಸ್ತೆಪಕ್ಕದಲ್ಲಿ ಇರುವ ಬಡವರಿಗೂ ಅಸ್ಪತ್ರೆ ರೋಗಿಗಳನ್ನೂ ಕಾಯುತ್ತ ಕುಳುತಿರುವ ಜನರಿಗೆ ತಿಂಡಿ ನೀಡುತ್ತಾ ಬಂದಿದ್ದರೆ.
ಇದಲ್ಲದೆ ಸಮಾಜಿಕ ಕಾಳಜಿಯಿಂದ ನಗೆಹಬ್ಬ ಬಸವನಗುಡಿಯ ಸುತ್ತಮುತ್ತ ಗಿಡ ನೆಡುವುದು ಮಹಿಳಾ ದಿನಚರಣೆ ಕನ್ನಡ ರಾಜ್ಯೋತ್ಸವ ಮುಂತಾದ ಅನೇಕ ಸಮಾಜಸೇವೆಯನ್ನು ಗುರುತಿಸಿ. ಇವರಿಗೆ ಏಷ್ಯಾ ವೇದಿಕ್ ಕಲ್ಚರ್ ವತಿಯಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು ಇನ್ನೂ ಕಾರ್ಯಕ್ರಮದಲ್ಲಿ ಮಾಜಿ ಹೈಕೋರ್ಟ್ ನ್ಯಾಯಾಧೀಶರು ಹಾಗೂ ಪೊಲೀಸ್ ಅಧಿಕಾರಿಗಳು ಹಿರಿಯ ವೈದ್ಯರು ರಾಜಕೀಯ ಗಣ್ಯವ್ಯಕ್ತಿಗಳು ಕೂಡ ಉಪಸ್ಥಿತರಿದ್ದರು.