ಪ್ರಿಯಕರನ ಜೊತೆ ಬೀಚ್ಗೆ ಬಂದಿದ್ದ ಯುವತಿ ಮೇಲೆ ಅತ್ಯಾಚಾರ…!
ಮಂಗಳೂರು (ಆ.01): ಜಿಲ್ಲೆಯಲ್ಲಿ ಕ್ರೈಂಗಳು ನಿಲ್ಲೋ ಲಕ್ಷಣಗಳೇ ಕಾಣ್ತಿಲ್ಲ, ಮೂರು ಕೊಲೆಗಳಿಗೆ ಬೆಚ್ಚಿಬಿದ್ದಿರೋ ಜಿಲ್ಲೆಯಲ್ಲಿ ಇದೀಗ ಅತ್ಯಾಚಾರದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಿಯಕರನ ಜೊತೆಗೆ ಬೀಚ್ ಗೆ ಬಂದಿದ್ದ ಯುವತಿಯ ಮೇಲೆ ಅತ್ಯಾಚಾರ ನಡೆದಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸುರತ್ಕಲ್ ಎನ್ಐಟಿಕೆ ಬೀಚ್ ನಲ್ಲಿ ಜುಲೈ 27ರಂದು ಈ ಘಟನೆ ನಡೆದಿದೆ. ಮಂಗಳೂರಿನ ಕಾಲೇಜಿನ ಮುಸ್ಲಿಂ ಯುವತಿ ಹಿಂದೂ ಯುವಕನ ಜೊತೆ ಬೀಜ್ನಲ್ಲಿ ಸುತ್ತಾಡುತ್ತಿದ್ದಳು. ಹಿಂದೂ ಯುವಕನ ಜೊತೆ ಯಾಕೆ ಸುತ್ತಾಡುತ್ತಿಯಾ ಎಂದು ಯುವತಿಯನ್ನು ಪ್ರಶ್ನೆ ಮಾಡಿ, ರಂಪಾಟ ಮಾಡಿದ್ದ ಮುನಾಜ್ ಅಹಮದ್ ಎಂಬಾತ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ.
ಬೀಚ್ನಲ್ಲಿ ಓಡಾಡುತ್ತಿದ್ದ ಜೋಡಿ
ಕಡಲ ತೀರದಲ್ಲಿ ಹಿಂದೂ ಯುವಕನ ಜೊತೆ ಮಾತನಾಡುತ್ತಿದ್ದನ್ನು ಕಂಡು ಮುನಾಜ್ ಅಹಮದ್ ಎಂಬಾತ ಆಕೆಯ ಬಳಿ ಬಂದು ಗಲಾಟೆ ಮಾಡಿದ್ದಾನೆ. ಹಿಂದೂ ಯುವಕನ ಜೊತೆ ಯಾಕೆ ಸುತ್ತಾಡುತ್ತಿದ್ದೀಯಾ, ನಿಮ್ಮಿಬ್ಬರ ವಿಡಿಯೋ ಮಾಡಿ ನಿಮ್ಮ ಮನೆಯವರಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಬಳಿಕ ಯುವಕನನ್ನು ಹೆದರಿಸಿ ಆತನ ಮೇಲೆ ಹಲ್ಲೆ ಮಾಡಿ ಓಡಿಸಿದ್ದಾನೆ.
ಎಂಬಾತನಿಂದ ಅತ್ಯಾಚಾರ
ಪ್ರಿಯಕರ ಓಡಿ ಹೋದ ಬಳಿಕ ಯುವತಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ತನ್ನ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದು, ಬಳಿಕ ಅದನ್ನು ತೋರಿಸಿ ಕಿರುಕುಳ ನೀಡಲು ಆರಂಭಿಸಿದ್ದಾನೆ ಎಂದು ದೂರಲಾಗಿದೆ. ಅತ್ಯಾಚಾರದ ಬಗ್ಗೆ ವಿದ್ಯಾರ್ಥಿನಿಯು ಪೊಲೀಸ್ ಕಮೀಷನರ್ ಭೇಟಿ ಮಾಡಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುನಾಜ್ ಅಹಮದ್ ಮೀನಿ ತುಂಬಿ ಕೊಂಡು ಹೋಗುವ ಲಾರಿಯಲ್ಲಿ ಡ್ರೈವರ್ ಆಗಿದ್ದಾನೆ. ಈ ಹಿಂದೆಯೂ ಬೆತ್ತಲೆ ವಿಡಿಯೋ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ಮುನಾಜ್ ಅಹಮದ್, ಇದೀಗ ಅತ್ಯಾಚಾರ ಪ್ರಕರಣದಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.