ಪ್ರತಿ ಚಾರ್ಜಿಗೆ 1,000 ಕಿಲೋ ಮೀಟರ್‌ಗಿಂತಲೂ ಹೆಚ್ಚು ಓಡುತ್ತಂತೆ!
ಇದೀಗ ಎಲೆಕ್ಟ್ರಿಕ್ ವಾಹನಗಳ (electric model ) ಜಮಾನ, ದ್ವಿಚಕ್ರ ವಾಹನಗಳಿಂದ (Two Wheeler) ಹಿಡಿದು ಕಾರುಗಳವರೆಗೆ (Car) ಎಲ್ಲಾ ಎಲೆಕ್ಟ್ರಿಕ್ ಮಾದರಿ ಪ್ರಸ್ತುತ ಪಡಿಸಲು ಸ್ಪರ್ಧಾತ್ಮಕ ವಲಯದಲ್ಲಿ(Competitive Sector) ಅಪ್‍ಡೇಟ್ ಮಾದರಿಯನ್ನು ಪ್ರಸ್ತುತ ಪಡಿಸಲು ಉತ್ಸುಕವಾಗಿದೆ. ವಾಯುಮಾಲಿನ್ಯ(Pollution) ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಈ ವಾಹನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲೂ ಓಲಾ (Ola) ಎಲೆಕ್ರ್ಟಿಕ್ ದ್ವಿಚಕ್ರ ವಾಹನಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಇದಕ್ಕೆ ಹೊಸ ಸೇರ್ಪಡೆ ಮರ್ಸಿಡಿಸ್ ಬೆನ್ಜ್ ವಿಷನ್ (Mercedes-Benz Vision) EQXX.
ಜರ್ಮನ್ ಐಷರಾಮಿ ಕಾರು ತಯಾರಕ
ಹೌದು. ಮರ್ಸಿಡಿಸ್ ಬೆನ್ಜ್ ಇದೀಗ ವಿಷನ್ EQXX ಎಂಬ ಹೊಸ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಕಾರನ್ನು ಸ್ಟರ್ಟ್ ಗರ್ಟ್ ಮೂಲದ ಜರ್ಮನ್ ಐಷರಾಮಿ ಕಾರು ತಯಾರಕ ಪರಿಚಯಿಸಿದ್ದಾರೆ. ಇದು ಪ್ರತಿ ಚಾರ್ಜಿಗೆ 1,000 ಕಿಲೋ ಮೀಟರ್‌ಗಿಂತಲೂ ಹೆಚ್ಚು ಕಿ.ಮೀ ವ್ಯಾಪ್ತಿಯನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ ಎನ್ನುತ್ತಾರೆ ಕಾರು ತಯಾರಕರು.
ಮರ್ಸಿಡಿಸ್ EQXX ಕಾರು ಪೋರ್ಷೆ ಟೇಕಾನ್, ಆಡಿ ಇ-ಟ್ರಾನ್ ಜಿಟಿ ಮತ್ತು ಟೆಸ್ಲಾ ರೋಡ್‍ಸ್ಟರ್‌ಗಳಂತಹ ಇತರ ಐಷಾರಾಮಿ ಎಲೆಕ್ಟ್ರಾನಿಕ್ ವಾಹನಗಳಿಗೆ ಪ್ರತಿಸ್ಪರ್ಧಿಯಾಗಬಹುದಾದ ಉತ್ಪಾದನಾ ಕಾರಿಗೆ ಆಧಾರವಾಗಿ ಕಾರ್ಯನಿರ್ವಹಿಸಲು ಸ್ಪೋರ್ಟಿ, ನಯವಾದ ಮತ್ತು ಫ್ಯೂಚರಿಸ್ಟಿಕ್ ವಿನ್ಯಾಸವನ್ನು ಪಡೆಯುತ್ತದೆ.

ಮರ್ಸಿಡಿಸ್ ಬೆನ್ಜ್ ವಿಷನ್ EQXX ಒಳವಿನ್ಯಾಸವು ಡ್ಯಾಶ್ ಬೋರ್ಡ್‍ನಾದ್ಯಂತ ಹರಡಿದ್ದು, ಹೈಪರ್ ಸ್ಕ್ರೀನ್ ಇನ್ಫೋಟೈನ್‍ಮೆಂಟ್ ಡಿಸ್‍ಪ್ಲೇ ಆಧಾರದ ಮೇಲೆ ಬೃಹತ್ 47.5-ಇಂಚಿನ ಪರದೆಯನ್ನು ಹೊಂದಿದೆ. ಪ್ರಸ್ತುತ ಜನ್ ಹೈಪರ್ ಸ್ಟ್ರೀನ್‌ಗಿಂತ ಭಿನ್ನವಾಗಿ, ಒಂದು ಘನ, 56-ಇಂಚಿನ ಗಾಜಿನೊಂದಿಗೆ ಹೊಂದಿಸಲಾದ ಮೂರು ಪ್ರತ್ಯೇಕ ಪರದೆಗಳ ಗುಂಪಾಗಿದೆ. ವಿಷನ್ EQXXನ ಪರದೆಯು ಅದು 8ಕೆ ರೆಸಲ್ಯೂಶನ್ ಮತ್ತು ಅತ್ಯಾಧುನಿಕ ಗ್ರಾಫಿಕ್ಸ್ ಅನ್ನು ಸಹ ಹೊಂದಿರುತ್ತದೆ.