ಪೋಲೀಯೋ ಲಸಿಕೆಯಿಂದ ಶಾಶ್ವತ ತೊಂದರೆಯಿಂದ ರಕ್ಷಣೆ
5 ವರ್ಷದೊಳಗಿನ ಮಕ್ಕಳಿಗೆ 2 ಹನಿ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಮುಂದಾಗುವ ತೊಂದರೆಗಳಿಂದ ಮಕ್ಕಳನ್ನು ರಕ್ಷಣೆ ಮಾಡಬೇಕೆಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಬಳಿ ಭಾನುವಾರ ರೋಟರಿ ಸಂಸ್ಥೆ, ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
2 ಹನಿ ಪೋಲಿಯೋ ಲಸಿಕೆಯಿಂದ ಜೀವನ ಪೂರ್ತಿ ಪೋಲಿಯೋ ವಿರುದ್ಧ ವಿಜಯ ಸಾಧಿಸಬಹುದು. ಆದ್ದರಿಂದ 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆಯನ್ನು ಪಾಲಕರು ತಪ್ಪದೆ ಹಾಕಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರ ಬಿ.ಗೌಡ ಮಾತನಾಡಿ. ತಾಲೂಕಿನಲ್ಲಿ 15562 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿಯನ್ನು ಹೊಂದಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಮಾ.5 ರವರೆಗೆ, ಪಟ್ಟಣದ ವ್ಯಾಪ್ತಿಯಲ್ಲಿ ಮಾ.6 ವರೆಗೆ ಪೋಲಿಯೋ ಲಸಿಕೆಯನ್ನು ಮನೆ ಮನೆಗೆ ಬಂದು ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಅಂಗನವಾಡಿ, ಸಕರ್ಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ವ್ಯವಸ್ಥೆ ಮಾಡಲಾಗಿದ್ದು, ಪಾಲಕರು 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.
ತಹಶೀಲ್ದಾರ್ ಕೆ.ಎಸ್. ಸೋಮಶೇಖರ್, ಸಿಪಿಐ ಪ್ರಸಾದ್, ಪುರಸಭೆ ಮುಖ್ಯಾಧಿಕಾರಿ ಕರಿಬಸವಯ್ಯ, ರೋಟರಿ ಅಧ್ಯಕ್ಷ ಎಂ.ಸಿ.ಶಶಿಗೌಡ, ಕಾರ್ಯದರ್ಶಿ ಎಚ್.ಪಿ.ಚನ್ನಂಕೇಗೌಡ, ಪೋಲಿಯೋ ಛೇರ್ಮನ್ ಡಾ. ಎಸ್.ಎಂ.ದರ್ಶನ್ ರೋಟರಿ ಪದಾಧಿಕಾರಿಗಳಾದ ಪ್ರವೀಣ್, ರವೀಶ್, ಹೊನ್ನೇಗೌಡ, ತಿಪ್ಪೂರು ರಾಜೇಶ್, ಬಸವರಾಜು, ಮಿಲ್ಟ್ರಿ ಕುಮಾರ್, ಪ್ರಕಾಶ್, ಇನ್ನರ್ ವೀಲ್ ಅಧ್ಯಕ್ಷೆ ಚಂದ್ರಕಲಾ ಇದ್ದರು.
ಮದ್ದೂರು ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಬಳಿ ರೋಟರಿ ಸಂಸ್ಥೆ, ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ವೆಂಕಟರಮಣೇಗೌಡ, ಸೋಮಶೇಖರ್, ಪ್ರಸಾದ್, ಕರಿಬಸವಯ್ಯ, ಎಂ.ಸಿ.ಶಶಿಗೌಡ, ಎಚ್.ಪಿ.ಚನ್ನಂಕೇಗೌಡ ಇದ್ದರು