ದೇಶ
Trending

ಪೋಕ್ಸೋ ಪ್ರಕರಣದ ಆರೋಪಿಗೆ ಶಿಕ್ಷೆ ನೀಡಲು ಸುಪ್ರೀಂಕೋರ್ಟ್​ ನಕಾರ, ಕಾರಣವೇನು?

ನವದೆಹಲಿ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ(ಪೋಕ್ಸೋ)ಯಡಿ ಆರೋಪಿಗೆ ಶಿಕ್ಷೆ ನೀಡಲು ಸುಪ್ರೀಂಕೋರ್ಟ್​ ನಿರಾಕರಿಸಿದೆ. ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು ಈ ತೀರ್ಪು ಪ್ರಕಟಿಸಿದೆ.ಅಪರಾಧದ ಸಮಯದಲ್ಲಿ ಯುವಕ 24 ವರ್ಷದವನಾಗಿದ್ದ, ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದ. ಆದರೆ ಆಕೆ ಪ್ರೌಢಾವಸ್ಥೆಗೆ ಬಂದ ಬಳಿಕ ಆಕೆಯನ್ನು ಮದುವೆಯಾಗಿ, ಈಗ ಒಂದು ಮಗು ಕೂಡ ಇದೆ.ಯುವತಿ ತನ್ನನ್ನು ಸಂತ್ರಸ್ತೆ ಎಂದು ಎಂದೂ ಪರಿಗಣಿಸಿಯೇ ಇಲ್ಲ, ಅವರಿಬ್ಬರಿಗೂ ಮಗು ಇದ್ದು,ಜೀವನ ಸಾಗಿಸುತ್ತಿದ್ದಾರೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.ಹಾಗೆಯೇ ಹದಿಹರೆಯದ ಹೆಣ್ಣುಮಕ್ಕಳು ತಮ್ಮ ಲೈಂಗಿಕ ಆಸಕ್ತಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದು ಬುದ್ಧಿವಾದವನ್ನು ಕೋರ್ಟ್​ ಹೇಳಿದೆ.

ಮತ್ತೊಂದು ಪ್ರಕರಣ, ಅಕ್ಟೋಬರ್ 18, 2023 ರಂದು, ಕೋಲ್ಕತ್ತಾ ಹೈಕೋರ್ಟ್ ಅಪ್ರಾಪ್ತ ವಯಸ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೀರ್ಪು ನೀಡಿತ್ತು. ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಯುವಕನನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾದ ಚಿತ್ತರಂಜನ್ ದಾಸ್ ಮತ್ತು ಪಾರ್ಥಸಾರಥಿ ಸೇನ್ ದೋಷಮುಕ್ತಗೊಳಿಸಿದ್ದರು.ಇಬ್ಬರ ನಡುವಿನ ಸಂಬಂಧವು ಒಮ್ಮತದಿಂದ ಕೂಡಿದೆ ಎಂಬ ಆಧಾರದ ಮೇಲೆ ನ್ಯಾಯಮೂರ್ತಿಗಳು ಈ ತೀರ್ಪು ನೀಡಿದ್ದರು. ಆದರೆ ಈ ತೀರ್ಪಿನಲ್ಲಿ ನ್ಯಾಯಾಧೀಶರು ಯುವಕರಿಗೆ ಬಹಳಷ್ಟು ಸಲಹೆಗಳನ್ನು ನೀಡಿದ್ದರು. ಈ ಬಗ್ಗೆ ಸಾಕಷ್ಟು ವಿವಾದಗಳು ನಡೆದಿದ್ದವು.ಬಾಲಕಿ ಆರೋಪಿಯನ್ನು ಮದುವೆಯಾಗಿದ್ದಾಳೆ, ಆಕೆ ತನ್ನ ಗಂಡನನ್ನು ಪ್ರೀತಿಸುತ್ತಾಳೆ. ಆಕೆ ತನ್ನ ಚಿಕ್ಕ ಕುಟುಂಬವನ್ನು ಉಳಿಸಲು ಬಯಸುತ್ತಾಳೆ. ಈ ಪ್ರಕರಣದಲ್ಲಿ, ಅಪರಾಧಿಯನ್ನು ಜೈಲಿನಲ್ಲಿ ಇಡುವುದು ನ್ಯಾಯದ ಹಿತದೃಷ್ಟಿಯಿಂದ ಸರಿಯಲ್ಲ ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ.

Related Articles

Leave a Reply

Your email address will not be published. Required fields are marked *

Back to top button