ನಾಯಿ ನಿಯತ್ತಿನ ಪ್ರಾಣಿ. ಭಾರತದಲ್ಲಿ ಬಹುತೇಕರು ಮನೆಯಲ್ಲಿ ಶ್ವಾನವನ್ನ ಸಾಕುತ್ತಾರೆ. ಅಷ್ಟೇ ಏಕೆ ಶ್ವಾನವನ್ನು ದೇವರೆಂದು ಪೂಜಿಸುವವರು ಇದ್ದಾರೆ. ಕೇರಳದ ಮುತ್ತಪ್ಪ ತಿರುವಪ್ಪ ದೈವದ ಬಗ್ಗೆ ತಿಳಿದಾಗ ಅಲ್ಲಿಯೂ ಶ್ವಾನದ ಬಗ್ಗೆ ಒಂದು ಇತಿಹಾಸ ಬರುತ್ತದೆ. ಹಾಗಾಗಿ ಬಹುತೇಕ ಭಾರತೀಯರು ಶ್ವಾನಪ್ರಿಯರು.
ಶ್ವಾನವನ್ನು ಮಾಂಸಕ್ಕೆಂದು ಬಳಸುವರು ಭಾರತದಲ್ಲಿದ್ದಾರೆ. ಶ್ವಾನದ ಮಾರುಕಟ್ಟೆಯೂ ಇದೆ. ಭಾರತ ಮತ್ತು ನೇಪಾಳ ಭಾಗದಲ್ಲಿ ಶ್ವಾನದ ಮಾಂಸವನ್ನು ಸೇವಿಸುವವರನ್ನು ಕಾಣಬಹುದಾಗಿದೆ. ಅದರೆ ಅತಿ ಕಡಿಮೆ ಸಂಖ್ಯೆ ಈ ನಾಯಿ ಮಾಂಸ ಸೇವಿಸುವವರು ಕಾಣಸಿಗುತ್ತಾರೆ. ಅದರಲ್ಲೂ ವಿದೇಶವನ್ನು ಗಮನಿಸಿದಾಗ ಭಾರತೀಯರ ಸಂಖ್ಯೆ ತೀರಾ ಕಡಿಮೆಯಿದೆ. ದಕ್ಷಿಣ ಕೊರಿಯಾ, ಚೀನಾದಲ್ಲಿ ನಾಯಿ ಮಾಂಸ ಸೇವಿಸುವವರ ಸಂಖ್ಯೆ ಹೆಚ್ಚಿದೆ.
ಆದರೀಗ ದಕ್ಷಿಣ ಕೊರಿಯಾದ ಅಧ್ಯಕ್ಷ ತಮ್ಮ ದೇಶದಲ್ಲಿ ಮೂನ್ ಜೇ-ಇನ್ ನಾಯಿ ಮಾಂಸದ ನಿಷೇಧವನ್ನು ಸೂಚಿಸಿದ್ದಾರೆ. ಅಂದಹಾಗೆಯೇ ದಕ್ಷಿಣ ಕೊರಿಯಾದಲ್ಲಿ ನಾಯಿ ಮಾಂಸ ಸಂಪ್ರದಾಯದ ಒಂದು ಭಾಗವಾಗಿದೆ. ಜನರು ಇದನ್ನು ಗತಕಾಲದಿಂದ ಸೇವಿಸುತ್ತಾ ಬಂದಿದ್ದಾರೆ. ಆದರೀಗ ಅಧ್ಯಕ್ಷ ಜೇ –ಇನ್ ನಾಯಿ ಮಾಂಸ ಸೇವನೆ ನಿಷೇಧಿಸಿರು ಸುಮಾರು 60 ಪ್ರತಿಶತದಷ್ಟು ಜನರು ಅದನ್ನು ಪರಿಗಣಿಸಿದೆ ನಾಯಿ ಮಾಂಸ ಸೇವಿಸುತ್ತಿದ್ದಾರೆ.