ಹಾವೇರಿ: ಉಪ ಚುನಾವಣೆಯ (Karnataka By Election) ಕದನ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ನಾಯಕರು ಏಟು-ತಿರುಗೇಟು ನೀಡುತ್ತಾ ಪ್ರಚಾರ ನಡೆಸುತ್ತಿದ್ದಾರೆ. ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಬಿಜೆಪಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ವಿರುದ್ಧ ಇವತ್ತು ಸಹ ವಾಗ್ದಾಳಿ ನಡೆಸಿದರು. ಪೊಲೀಸರ ದಿರಿಸು ಮಾತ್ರ ಯಾಕೆ ಬದಲಾಯಿಸಿದಿರಿ ಮುಖ್ಯಮಂತ್ರಿಗಳೇ ಅವರ ಕೈಗೆ ತ್ರಿಶೂಲಗಳನ್ನೂ ಕೊಟ್ಟು ಹಿಂಸೆಯ ದೀಕ್ಷೆ ಕೊಟ್ಟು ಬಿಡಿ. ಅಲ್ಲಿಗೆ ನಿಮ್ಮ ಜಂಗಲ್ ರಾಜ್ ಸ್ಥಾಪನೆಯ ಕನಸು ನನಸಾಗಬಹುದು ಎಂದು ಆಕ್ರೋಶ ಹೊರ ಹಾಕಿದರು. ಟ್ವಿಟರ್ ನಲ್ಲಿ ವಿಜಯಪುರ ಗ್ರಾಮೀಣ ಮತ್ತು ಕಾಪು ಪೊಲೀಸ್ ಠಾಣೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಫೋಟೋದಲ್ಲಿ ಎಲ್ಲ ಪೊಲೀಸರು ಕೇಸರಿ ಬಟ್ಟೆ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಇತ್ತ ಬಿಜೆಪಿ ನಾಯಕರು ಸಹ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡುತ್ತಿದ್ದಾರೆ. ಒಟ್ಟಿನಲ್ಲಿ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ (Assembly Election) ಚುನಾವಣೆ ಯುದ್ಧವೇ ಆರಂಭಗೊಂಡಿದೆ.
ನಮ್ಮದು ನಿಜವಾದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್
ಸಂಗೂರು ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಸಿ.ಎಂ.ಉದಾಸಿ ಅವರು ಅಧ್ಯಕ್ಷರಾಗಿದ್ದರು ಮತ್ತು ಸಜ್ಜನರ್ ಉಪಾಧ್ಯಕ್ಷರು. ಖಾಲಿ ಚೀಲವನ್ನು ಬಿಡದೆ ಮಾರ್ಕೊಂಡು ಕಾರ್ಖಾನೆಯನ್ನು ಸಂಪೂರ್ಣ ಲೂಟಿ ಮಾಡಿದರು. ಈ ಸಕ್ಕರೆ ಕಾರ್ಖಾನೆ ಖಾಸಗಿ ಪಾಲಾಗಲು ಇವರೇ ಕಾರಣ. ಇಂತಹ ಭ್ರಷ್ಟರಿಗೆ ಮತ ನೀಡಬೇಕೇ? ನಾನು ಮುಖ್ಯಮಂತ್ರಿ ಆಗುವ ಮೊದಲು ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡುತ್ತಿದ್ದ ಅನುದಾನ ರೂ.400 ಕೋಟಿ ಇತ್ತು, ನಾನು ಪ್ರತಿ ವರ್ಷ ಅನುದಾನ ಹೆಚ್ಚಿಸಿದ್ದೆ. ಕೊನೆ ಬಜೆಟ್ ನಲ್ಲಿ ಅದು ರೂ. 3,100 ಕೋಟಿ ಆಗಿತ್ತು. ಇದು ನಿಜವಾದ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್”.