‘ಪೊಗರು’ ನಿರ್ಮಾಪಕರ ತೆಕ್ಕೆಗೆ ‘ಕೋಟಿಗೊಬ್ಬ -3’
ಕಿಚ್ಚ ಸುದೀಪ್ ಅಭಿನಯದ “ಕೋಟಿಗೊಬ್ಬ-3′ ಥಿಯೇಟರ್ ಗೆ ಬರೋದಕ್ಕೆ ಕೌಂಟ್‌ಡೌನ್ ಶುರುವಾಗಿದ್ದು, ನಾಡ ಹಬ್ಬದ ಸಂಭ್ರದಲ್ಲೇ ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತರಲು ನಿರ್ಮಾಪಕ ಸೂರಪ್ಪ ಬಾಬು ತಯಾರಿ ನಡೆಸಿದ್ದಾರೆ.
ಈಗಾಗಲೇ “ಕೋಟಿಗೊಬ್ಬ-3′ ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿದ್ದು, ಇದೀಗ ಚಿತ್ರದ ಥಿಯೇಟರ್ ವಿತರಣೆಯ ಹಕ್ಕುಗಳು ಕೂಡ ದೊಡ್ಡ ಮೊತ್ತಕ್ಕೆ ಬಿಕರಿಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ಗಾಂಧಿನಗರದಲ್ಲಿ “ಕೋಟಿಗೊಬ್ಬ-3′ ಚಿತ್ರದ ವಿತರಣೆ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, ಇದೀಗ ಚಿತ್ರದ ಬಿಕೆಟಿ (ಬೆಂಗಳೂರು, ಕೋಲಾರ, ತುಮಕೂರು) ಹಕ್ಕುಗಳನ್ನು “ಪೊಗರು’ ಚಿತ್ರದ ನಿರ್ಮಾಪಕ ಬಿ.ಕೆ ಗಂಗಾಧರ್ ದೊಡ್ಡ ಮೊತ್ತಕ್ಕೆ ಖರೀದಿಸಿದ್ದಾರೆ.
ಇನ್ನು “ಕೋಟಿಗೊಬ್ಬ-3′ ಚಿತ್ರದಲ್ಲಿ ಕಿಚ್ಚ ಸುದೀಪ್‌ಗೆ ನಾಯಕಿಯಾಗಿ ಮಡೋನಾ ಸೆಬಾಸ್ಟಿಯನ್ ಜೋಡಿಯಾಗಿದ್ದಾರೆ ಉಳಿದಂತೆ ರವಿಶಂಕರ್, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ, ಆಶಿಕಾ ರಂಗನಾಥ್, ಅಭಿರಾಮಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಶಿವಕಾರ್ತಿಕ್ “ಕೋಟಿಗೊಬ್ಬ-3′ ಚಿತ್ರಕ್ಕೆ ಆಯಕ್ಷನ್-ಕಟ್ ಹೇಳಿದ್ದಾರೆ.
ಈಗಾಗಲೇ “ಕೋಟಿಗೊಬ್ಬ-3′ ಟೀಸ ರ್, ಹಾಡುಗಳು ಬಿಡುಗಡೆಯಾಗಿದ್ದು, ಚಿತ್ರವನ್ನು ಥಿಯೇಟರ್‌ನಲ್ಲಿ ಕಣ್ತುಂಬಿಕೊಳ್ಳೋದಷ್ಟೇ ಬಾಕಿಯಿದೆ.